ಮನೆಗಳವು ಮಾಡಿದ ಆರೋಪಿ ಬಂಧನ: ₹ 8,80,300 ವಶ

KannadaprabhaNewsNetwork |  
Published : Feb 26, 2026, 01:15 AM IST
ಲಕ್ಕವಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದ           ಆರೋಪಿ ಪತ್ತೆ ಮಾಡಿ 8,80,300 ರು.ಗಳ ಸ್ವತ್ತು ವಶ | Kannada Prabha

ಸಾರಾಂಶ

ತರೀಕೆರೆಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪ್ರಕರಣ ದಾಖಲಾದ 24 ಗಂಟೆಯ ಒಳಗಾಗಿ ಪತ್ತೆ ಮಾಡಿ ಆತನಿಂದ ₹5,80,000 ಬೆಲೆ ಚಿನ್ನಾಭರಣಗಳು ಮತ್ತು ₹3,00,300 ನಗದು ಸೇರಿ ಒಟ್ಟು ₹ 8,80,300 (ಎಂಟು ಲಕ್ಷದ ಎಂಬತ್ತು ಸಾವಿರದ ಮುನ್ನೂರು ) ವಶಪಡಿಸಿಕೊಳ್ಳಲಾಗಿದೆ.

ಲಕ್ಕವಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪ್ರಕರಣ ದಾಖಲಾದ 24 ಗಂಟೆಯ ಒಳಗಾಗಿ ಪತ್ತೆ ಮಾಡಿ ಆತನಿಂದ ₹5,80,000 ಬೆಲೆ ಚಿನ್ನಾಭರಣಗಳು ಮತ್ತು ₹3,00,300 ನಗದು ಸೇರಿ ಒಟ್ಟು ₹ 8,80,300 (ಎಂಟು ಲಕ್ಷದ ಎಂಬತ್ತು ಸಾವಿರದ ಮುನ್ನೂರು ) ವಶಪಡಿಸಿಕೊಳ್ಳಲಾಗಿದೆ. ರಂಗೇನಹಳ್ಳಿ ನಿವಾಸಿ ಗಗನ್.ಜಿ.ಆರ್ ( 26) ಬಂಧಿತ ಆರೋಪಿ. ಹಾಲಿನ ಡೈರಿಯಲ್ಲಿ ಸಹಾಯಕ ಕೆಲಸ ಮಾಡುತ್ತಿದ್ದ ಈತ ಕಳವು ಮಾಡಿದ್ದ ಬಂಗಾರದ ಒಂದು ಮಾಂಗಲ್ಯ ಚೈನ್ , 4 ಉಂಗುರಗಳು, 3 ಕಿವಿ ರಿಂಗ್ ಮತ್ತು ಒಂದು ಮೂಗುನತ್ತು, ಅಷ್ಟಮಣಿ ಗುಂಡು ಒಟ್ಟು 46.400 ಗ್ರಾಂ ಚಿನ್ನದ ಅಂದಾಜು ಬೆಲೆ ₹5,80,000 ಹಾಗೂ ವಶಕ್ಕೆ ಪಡೆದ ಹಣದ ಮೌಲ್ಯ ₹3.00.300ನ್ನು ವಶಕೊಂಡಿದ್ದಾರೆ.ಫೆ. 21ರಂದು ಬೆಳಿಗ್ಗೆ ರಂಗೇನಹಳ್ಳಿ ಕುಂಬಾರ ಬೀದಿಯ ತನ್ನ ಮನೆಗೆ ಬೀಗ ಹಾಕಿ ಸಂಸಾರ ಸಮೇತ ಬೆಂಗಳೂರಿಗೆ ಸಂಬಂಧಿಕರ ಮದುವೆ ತೆರಳಿದ್ದವರು ಫೆ. 23 ರಂದು ರಾತ್ರಿ ಹಿಂದಿರುಗಿದಾಗ ಮನೆ ಮುಂಬಾಗಿಲು ತೆರೆದಿರುವುದನ್ನು ಕಂಡು ಅನುಮಾನ ಬಂದು ಮನೆ ಒಳಗೆ ಹೋಗಿ ನೋಡಿದಾಗ ಬೆಡ್ ರೂಂನಲ್ಲಿದ್ದ ಗಾಡ್ರೆಜ್ ಬೀರುವಿನ ಒಳಗೆ ಇಟ್ಟಿದ್ದ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿದ್ದ ಬಗ್ಗೆ ಲಕ್ಕವಳ್ಳಿ ಠಾಣೆಗೆ ನೀಡಿದ್ದರು.

ಚಿಕ್ಕಮಗಳೂರು ಪೊಲೀಸ್ ಅದಿಕ್ಷಕ ಜಿತೇಂದ್ರ ಕುಮಾರ್ ದಯಾಮ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್., ತರೀಕೆರೆ ಪೊಲೀಸ್ ಉಪಾದೀಕ್ಷಕ ಪರಶುರಾಮಪ್ಪ ಮಾರ್ಗದರ್ಶನದಲ್ಲಿ ಗಿರೀಶ್.ಬಿ.ವಿ, ಪಿಎಸ್ಐ ವಿಶ್ವನಾಥ್ಸಿ, ಸಿಬ್ಬಂದಿ ಓಂಕಾರ್, ಶಿವಕುಮಾರ್ ,ಅವಿನಾಶನಾಯ್ಕ , ಸಿದ್ದರಾಮಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಯಶಸ್ವಿಯಾಗಿ ಆರೋಪಿಯನ್ನು ಪತ್ತೆ ಮಾಲು ಶ್ರಮಿಸಿದ ಅಪರಾಧ ತನಿಖಾ ತಂಡದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

-

25ಕೆಟಿಆರ್.ಕೆ.10ಃ ಲಕ್ಕವಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದ ಆರೋಪಿ ಪತ್ತೆ ಮಾಡಿದ ತಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಮಹಿಳೆಯರಿಗೆ ಸವಲತ್ತು ಒದಗಿಸಿ ಆರ್ಥಿಕ ಶಕ್ತಿತುಂಬಿ: ಸುಜಾತಾ
ಮಕ್ಕಳಿಗೆ ಅಂಗನವಾಡಿಗಳೇ ಮೊದಲ ಪಾಠಶಾಲೆ