ಕನ್ನಡಪ್ರಭ ವಾರ್ತೆ ಮೂಡಲಗಿ
ಗೋಕಾಕ ಸೋಮವಾರ ಪೇಟೆಯ ನಿವಾಸಿ ಹಾಗೂ ಬಾಂಡ್ ರೈಟರ್ ಆನಂದ ಸಿದ್ದಲಿಂಗಪ್ಪಾ ಗೊಟಡಕಿ (52) ಬಂಧಿತ ಆರೋಪಿ. ಬಂಧಿತ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿದ್ದಾನೆಂದು ಮೂಡಲಗಿ ಉಪ ನೋಂದಣಿ ಅಧಿಕಾರಿ ದುರದುಂಡೆಪ್ಪಾ ಕೆಂಪಣ್ಣಾ ಕುಳ್ಳೂರ ಅವರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರು ಆಧರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಏನಿದು ಘಟನೆ?: ದೂರುದಾರರಾದ ಮೂಡಲಗಿ ಉಪ-ನೋಂದಣಿ ಅಧಿಕಾರಿ ದುರದುಂಡೆಪ್ಪಾ ಕೆಂಪಣ್ಣಾ ಕುಳ್ಳೂರ ಅವರು 2026, ಫೆ.1 ಪ್ರಭಾರ ವಹಿಸಿಕೊಂಡು ಕೆಲಸ ಮಾಡುತ್ತಿದ್ದರು. ಆರೋಪಿ ಬಾಂಡ್ ರೈಟರ್ ಆನಂದ ಮೂಡಲಗಿ ತಾಲೂಕಾ ಹದ್ದಿ ಪೈಕಿ ಜಮೀನು ಸರ್ವೇ ನಂ. 521/11 ಕ್ಷೇತ್ರ 15 ಗುಂಟೆ 8 ಆಣಿ ಜಮೀನನ್ನು ಅಪಸಾತ ವಾದ್ಯ ನೋಂದಣಿ ಮಾಡಿಸುವ ಸಲುವಾಗಿ ಕಾವೇರಿ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಅಪಸಾತ ವಾಟಿ ಮಾಡಲು ಅವರು ಜಂಟಿ ಖಾತೆದಾರರು, (ಉಆದ ವಾರಸುದಾರರು) ಇಲ್ಲ. ಹೀಗಾಗಿ ನೊಂದಣಿ ಮಾಡಲು ಬರುವುದಿಲ್ಲ. ವಂಶಾವಳಿ (ವಾರಸಾ ಪ್ರಮಾಣಪತ್ರ) ತೆಗೆದುಕೊಂಡು ಬರಬೇಕೆಂದು ಸೂಚಿಸಿದ್ದರು.ಆರೋಪಿ ಅನಂದ ಅವರು ಗ್ರಾಮ ಆಡಳಿತ ಅಧಿಕಾರಿ (ವಿಲೇಜ್ ಅಂಕೌಂಟ್)ಗಳಿಂದ ಕೈ ಬರಹದ ವಂಶಾವಳಿ (ವಾರಸುದಾರ ಪ್ರಮಾಣಪತ್ರ) ತೆಗೆದುಕೊಂಡು ಬಂದು ಹಾಜರುಪಡಿಸಿದರು. ನೀವು ತಹಶೀಲ್ದಾರ್ ಕಡೆಯಿಂದ ವಂಶಾವಳಿ ತೆಗೆದುಕೊಡು ಬಂದಾಗ ಅದು ಹೊಂದಾಣಿಕೆ ಆದಲ್ಲಿ ನೋಂದಣಿ ಮಾಡಿಕೊಡುವುದಾಗಿ ತಿಳಿಸಲಾಗಿತ್ತು. ಆದರೆ ಆರೋಪಿತ ಆನಂದ ಭೂ ಮಾಪಕರು 5 ಗುಂಟೆಗಿಂತ ಕಡಿಮೆ ಇದ್ದಲ್ಲಿ 11ಇ ನಕ್ಷೆ ಮಾಡಿ ಕೊಡುತ್ತಿಲ್ಲ. ನಿನಗೆ ಎಷ್ಟು ಹಣ ಬೇಕು ತೆಗೆದುಕೊಂಡು ನೋಂದಣಿ ಮಾಡಲೇಬೇಕು? ಇಲ್ಲದಿದ್ದರೆ ನಿನ್ನನ್ನು ಏನೂ ಮಾಡಬೇಕು ಅಂತಾ ಗೊತ್ತು ಎನ್ನುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿ ಧಮ್ಕಿ ಹಾಕಿದ್ದಾನೆಂದು ಕುಳ್ಳೂರ ಅವರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.