30ಕ್ಕೂ ಹೆಚ್ಚು ಕಳವು ಪ್ರಕರಣಗಳ ಆರೋಪಿ ಬಂಧನ

KannadaprabhaNewsNetwork |  
Published : Nov 05, 2026, 01:30 AM IST
ಫೋಟೊ4ಬಿಕೆಟಿ5, ಪುರಸಭೆ ಮುಖ್ಯಾಧಿಕಾರಿ) | Kannada Prabha

ಸಾರಾಂಶ

ಮನೆಯವರು ಬೀಗ ಹಾಕಿ ಪರಊರಿಗೆ ಹೋಗಿದ್ದಾಗ 58 ಗ್ರಾಂ ಚಿನ್ನಾಭರಣ, 100 ಗ್ರಾಂನ 1 ಜೊತೆ ಬೆಳ್ಳಿ ಕಾಲು ಚೈನ್‌, ₹3200 ಕಳವು ಮಾಡಿದ್ದ ಬೆಳಗಾವಿ ಜಿಲ್ಲೆ ಮೂಲದ, ಹಾಲಿ ಮಹಾರಾಷ್ಟ್ರದ ವಾಸಿ, ಕುಖ್ಯಾತ ಮನೆಗಳ್ಳನನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.

- ಕೆಟಿಜೆ ನಗರ ಪೊಲೀಸರ ಬಲೆಗೆ ಬಿದ್ದ ಮಹಾರಾಷ್ಟ್ರ ವಾಸಿ, ಬೆಳಗಾವಿ ಮೂಲದ ತೌಫೀಕ್‌ ಶೇಕ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಮನೆಯವರು ಬೀಗ ಹಾಕಿ ಪರಊರಿಗೆ ಹೋಗಿದ್ದಾಗ 58 ಗ್ರಾಂ ಚಿನ್ನಾಭರಣ, 100 ಗ್ರಾಂನ 1 ಜೊತೆ ಬೆಳ್ಳಿ ಕಾಲು ಚೈನ್‌, ₹3200 ಕಳವು ಮಾಡಿದ್ದ ಬೆಳಗಾವಿ ಜಿಲ್ಲೆ ಮೂಲದ, ಹಾಲಿ ಮಹಾರಾಷ್ಟ್ರದ ವಾಸಿ, ಕುಖ್ಯಾತ ಮನೆಗಳ್ಳನನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂಲ, ಹಾಲಿ ಮಹಾರಾಷ್ಟ್ರದ ವಾಸಿಯಾದ ತೌಫೀಕ್ ಶೇಕ್ ಅಲಿಯಾಸ್ ತೌಫೀಕ್ ಮಹಮ್ಮದ್ ಶೇಕ್ (38) ಬಂಧಿತ ಆರೋಪಿ. ವಿಚಾರಣೆ ನಡೆಸಿದಾಗ ದಾವಣಗೆರೆ ನಗರದಲ್ಲಿ 2 ಮನೆ ಕನ್ನ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಕುಖ್ಯಾತಿ ಕಳ್ಳ ತೌಫೀಕ್‌ ದಾವಣಗೆರೆ ಜಿಲ್ಲೆಯಲ್ಲಿ (ಕೆ.ಟಿ.ಜೆ. ನಗರ ಪೊಲೀಸ್ ಠಾಣಾ) 2 ಪ್ರಕರಣ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಪೊಲೀಸ್ ಠಾಣೆ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 30-35 ಕಳವು ಪ್ರಕರಣಗಳಲ್ಲಿ ಭಾಗಿಯಾ ಗಿದ್ದಾನೆ.

ದಾವಣಗೆರೆ ಕೆಟಿಜೆ ನಗರ ಠಾಣೆ ವ್ಯಾಪ್ತಿಯ ಫಕೀರ ಸ್ವಾಮಿ ಕುಟುಂಬದವರು ಜುಲೈ 20ರಂದು ಬೆಳಗ್ಗೆ ಮನೆಗೆ ಬೀಗ ಹಾಕಿಕೊಂಡು ಹುಬ್ಬಳ್ಳಿಗೆ ಹೋಗಿದ್ದರು. 3 ದಿನಗಳ ನಂತರ ವಾಪಸ್‌ ಬಂದು ನೋಡಿದಾಗ ಕಳ್ಳರು ಮನೆ ಬೀಗ ಮುರಿದು, ಒಟ್ಟು 58 ಗ್ರಾಂ ಚಿನ್ನದ ಆಭರಣ, 100 ಗ್ರಾಂ ತೂಕದ ಬೆಳ್ಳಿ ಕಾಲು ಜೈನ್, ₹3200 ನಗದು ಕಳವು ಮಾಡಿದ ಬಗ್ಗೆ ಕೆಟಿಜೆ ನಗರ ಠಾಣೆಗೆ ದೂರು ನೀಡಲಾಗಿತ್ತು.

ಆರೋಪಿಗಳು ಹಾಗೂ ಸ್ವತ್ತು ಪತ್ತೆಗೆ ಎಎಸ್ಪಿ ಪರಮೇಶ್ವರ ಹೆಗಡೆ, ನಗರ ಡಿವೈಎಸ್ಪಿ ಬಿ.ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆ ಇನ್‌ಸ್ಪೆಕ್ಟರ್ ಎಂ.ವಿ.ಮೇಘರಾಜ ನೇತೃತ್ವದ ಅಧಿಕಾರಿ, ಸಿಬ್ಬಂದಿ ತಂಡವು ಆರೋಪಿಯನ್ನು ಬಂಧಿಸಿದೆ. ಎಸ್ಐ ಶಿವಾನಂದ ಧರೇನವರ್, ಸಿಬ್ಬಂದಿಯಾದ ಸುರೇಶ ಬಾಬು, ಮಹಮ್ಮದ್ ರಫಿ, ಸಿದ್ದಪ್ಪ, ಮಂಜಪ್ಪ, ನಿಂಗರಾಜ, ಹನುಮಂತಪ್ಪ, ನಾಗರಾಜ, ಮಂಜಪ್ಪ, ನೇತ್ರಾವತಿ ಅವರನ್ನು ಒಳಗೊಂಡ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಡಾ.ಎಚ್.ಟಿ.ಶೇಖರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ