ಅತ್ತಿಗೆ, ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಆರೋಪಿ ಪರಾರಿ

KannadaprabhaNewsNetwork |  
Published : Nov 05, 2023, 01:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಹಾನಗಲ್ಲತಾಲೂಕಿನ ಯಳ್ಳೂರು ಗ್ರಾಮದಲ್ಲಿ ಮೈದುನನೇ ತನ್ನ ಅತ್ತಿಗೆ ಹಾಗೂ ಅವರ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದು ತಲೆ ಮರೆಸಿಕೊಂಡ ಘಟನೆ ಶನಿವಾರ ಬೆಳಗಿನಜಾವ ನಡೆದಿದೆ.ಹಾನಗಲ್ಲ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಹೊನ್ನಗೌಡ ಮರಿಗೌಡರ ಪತ್ನಿ ಗೀತಾ (೩೨) ಮಕ್ಕಳಾದ ಅಕುಲಗೌಡ (೧೦), ಅಂಕಿತಾ (೮) ಹಾಗೂ ಈತನ ಸಹೋದರ ಕುಮಾರಗೌಡ ಮರಿಗೌಡರ ವಾಸಿಸುತ್ತಿದ್ದರೆನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಮೈದುನನೇ ತನ್ನ ಅತ್ತಿಗೆ ಹಾಗೂ ಅವರ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದು ತಲೆ ಮರೆಸಿಕೊಂಡ ಘಟನೆ ಶನಿವಾರ ಬೆಳಗಿನಜಾವ ನಡೆದಿದೆ.

ಹಾನಗಲ್ಲ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಹೊನ್ನಗೌಡ ಮರಿಗೌಡರ ಪತ್ನಿ ಗೀತಾ (೩೨) ಮಕ್ಕಳಾದ ಅಕುಲಗೌಡ (೧೦), ಅಂಕಿತಾ (೮) ಹಾಗೂ ಈತನ ಸಹೋದರ ಕುಮಾರಗೌಡ ಮರಿಗೌಡರ ವಾಸಿಸುತ್ತಿದ್ದರೆನ್ನಲಾಗಿದೆ.

ಹೊನ್ನಗೌಡ ದುಬೈನಲ್ಲಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರಿಂದ ಆಗಾಗ ಯಳ್ಳೂರಿಗೆ ಬಂದು ಹೋಗುತ್ತಿದ್ದರು.ಹೊನ್ನಗೌಡ ಹಾನಗಲ್ಲ ತಾಲೂಕಿನಲ್ಲಿರುವ ಆಸ್ತಿ ಹಾಗೂ ಅದರ ಹಣಕಾಸು ವ್ಯವಹಾರವನ್ನು ತಮ್ಮ ಕುಮಾರಗೌಡನಿಗೆ ನೀಡಿದ್ದರು ಎನ್ನಲಾಗಿದೆ. ಆದರೆ ೨೦ ದಿನಗಳಾಚೆ ದುಬೈನಿಂದ ಯಳ್ಳೂರಿಗೆ ಬಂದ ಹೊನ್ನಗೌಡ ಆಸ್ತಿಯ ಹಣಕಾಸು ವ್ಯವಹಾರ ತಮ್ಮನಿಂದ ಬಿಡಿಸಿದ್ದ ಎನ್ನಲಾಗಿದೆ. ಇದರಿಂದ ಕುಪಿತನಾದ ಕುಮಾರಗೌಡ ಸಿಟ್ಟಿನಿಂದ ಹಾಗೂ ಮನೆಯ ಬಾಡಿಗೆ ಹಣ ತನಗೆ ಬರುತ್ತಿಲ್ಲವೆಂದು ವಿಚಲಿತನಾಗಿದ್ದ. ಕುಮಾರಗೌಡ ಶನಿವಾರ ಬೆಳಗಿನಜಾವ ೩ ಗಂಟೆ ಹೊತ್ತಿಗೆ ಮಚ್ಚಿನಿಂದ ಅಣ್ಣನ ಹೆಂಡತಿ ಗೀತಾ, ಮಕ್ಕಳಾದ ಅಕುಲಗೌಡ, ಅಂಕಿತಾ ಈ ಮೂವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಅಕುಲಗೌಡ ಸ್ಥಳದಲ್ಲೆ ಮೃತನಾಗಿದ್ದು, ಗೀತಾ ಹಾಗೂ ಅಂಕಿತಾ ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರಕಾಶ ಯಲ್ಲಪ್ಪ ಪೂಜಾರ ಎಂಬುವವರು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಎಸ್‌ಪಿ ಡಾ.ಶಿವಕುಮಾರ ಗಣಾರಿ, ಎಎಸ್‌ಪಿ ಸಿ.ಗೋಪಾಲ, ಡಿಎಸ್‌ಪಿ ಆರ್. ಮಂಜುನಾಥ, ಸಿಪಿಐ ಎಸ್.ಆರ್. ಶ್ರೀಧರ, ಪಿಎಸ್‌ಐ ಯಲ್ಲಪ್ಪ ಹಿರಗಣ್ಣನವರ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಲು ಈಗಾಗಲೇ ತಂಡ ರಚಿಸಿ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ