ಪೊಲೀಸ್ ದೌರ್ಜನ್ಯದ ಆರೋಪ: ಆತ್ಮಹತ್ಯೆ

KannadaprabhaNewsNetwork |  
Published : Aug 14, 2025, 01:00 AM IST
ಸಂಸೆಯ ಯುವಕ ನಾಗೇಶ್  ಆತ್ಮಹತ್ಯೆಗೆ ಕಾರಣವಾಗಿರುವ ಕುದುರೆಮುಖ ಪೋಲೀಸ್ ಠಾಣೆಯ ಪೇದೆ ಹಾಗೂ ಇತರರ ವಿರುದ್ಧ ಕ್ರಮ ಆಗಬೇಕೆಂದು ಆಗ್ರಹಿಸಿ ಕಳಸದ ಸಮುದಾಯ ಆರೋಗ್ಯ ಕೇಂದ್ರದ ಎದುರು ವಿವಿಧ ಸಂಘಟನೆಯವರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕಳಸ, ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ನನಗೆ ನ್ಯಾಯ ಕೊಡಿಸಿ ಎಂದು ಮರಣ ಪತ್ರ ಬರೆದು ಸಂಸೆಯ ಯುವಕ ನಾಗೇಶ್ (29) ಬುಧವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕಳೆದ ತಿಂಗಳು ಸಂಸೆ ಗ್ರಾಮದಲ್ಲಿ ಪೊಲೀಸ್ ಕಾ ನ್ಸ್‌ಟೆಬಲ್ ಸಿದ್ದೇಶ್ ತನ್ನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆಂದು ದೂರು ನೀಡಿದ್ದ ಪರಿಶಿಷ್ಟ ಜಾತಿಯ ಸಂಸೆ ಗ್ರಾಮದ ಬಸ್ತಿಗದ್ದೆ ನಿವಾಸಿ ನಾಗೇಶ್ ನಾಗೇಶ್ ತನ್ನ ಮನೆಯ ಪಕ್ಕದ ನೆಂಟರ ಮನೆಯಲ್ಲಿ ಬೆಳಿಗ್ಗೆ 8 ಗಂಟೆಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಕನ್ನಡಪ್ರಭ ವಾರ್ತೆ, ಕಳಸ

ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ನನಗೆ ನ್ಯಾಯ ಕೊಡಿಸಿ ಎಂದು ಮರಣ ಪತ್ರ ಬರೆದು ಸಂಸೆಯ ಯುವಕ ನಾಗೇಶ್ (29) ಬುಧವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ ತಿಂಗಳು ಸಂಸೆ ಗ್ರಾಮದಲ್ಲಿ ಪೊಲೀಸ್ ಕಾ ನ್ಸ್‌ಟೆಬಲ್ ಸಿದ್ದೇಶ್ ತನ್ನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆಂದು ದೂರು ನೀಡಿದ್ದ ಪರಿಶಿಷ್ಟ ಜಾತಿಯ ಸಂಸೆ ಗ್ರಾಮದ ಬಸ್ತಿಗದ್ದೆ ನಿವಾಸಿ ನಾಗೇಶ್ ನಾಗೇಶ್ ತನ್ನ ಮನೆಯ ಪಕ್ಕದ ನೆಂಟರ ಮನೆಯಲ್ಲಿ ಬೆಳಿಗ್ಗೆ 8 ಗಂಟೆಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಆತನಿಗೆ ಪತ್ನಿ, ಒಂದೂವರೆ ತಿಂಗಳ ಮಗು ಇದೆ.

ಕುದುರೆಮುಖ ಪೊಲೀಸ್ ಠಾಣೆ ಪೇದೆ ಸಿದ್ದೇಶ್ ಮತ್ತು ಇಬ್ಬರು ಸ್ಥಳೀಯರು ತನ್ನ ಮೇಲೆ ಹಲ್ಲೆ ಮಾಡಿದ್ದರೆಂದು ಆರೋಪಿಸಿ ಜಾತಿ ನಿಂದನೆ ಮತ್ತು ಹಲ್ಲೆ ಬಗ್ಗೆ ದೂರು ನೀಡಿದ್ದರು. ನಂತರ ಒಂದು ವಾರ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ನಾಗೇಶ್‌ ಚಿಕಿತ್ಸೆ ಪಡೆದಿದ್ದರು.

ಈ ದೂರಿನ ಬೆನ್ನಲ್ಲೇ ನಾಗೇಶ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕುದುರೆಮುಖ ಪೊಲೀಸರು ಪ್ರಕರಣ ದಾಖಲಿಸಿ ಆತನ ಆಟೊ ಮತ್ತು ಅಡಕೆಗೆ ಔಷಧಿ ಸಿಂಪಡಿಸುವ ಯಂತ್ರ ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ನಾಗೇಶ್ ಜಾಮೀನು ಪಡೆದಿದ್ದರು. ಆದರೆ ತನ್ನ ಆಟೊ ಬಿಡಿಸಿಕೊಳ್ಳಲಾರದೆ, ದುಡಿಮೆಯೂ ಇಲ್ಲದೆ ಆಟೊ ಸಾಲದ ಕಂತು ಕಟ್ಟಲಾರದೆ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪೊಲೀಸರ ಜೊತೆಗೆ ಜಟಾಪಟಿ ನಂತರ ನಾಗೇಶ್ ತನ್ನ ಫೋನ್ ಕರೆ ಸ್ವೀಕರಿಸುತ್ತಿರಲಿಲ್ಲ. ಪೊಲೀಸರ ಬಗ್ಗೆ ಹೆದರಿದ್ದರು ಎಂದು ಆತನ ಪತ್ನಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ಮೊದಲು ಬರೆದಿರುವ ಅಂತಿಮ ಪತ್ರದಲ್ಲಿ ತನ್ನ ಮೇಲಿನ ದೌರ್ಜನ್ಯದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಕುದುರೆಮುಖ ಠಾಣಾಧಿಕಾರಿ ಭಾಗಿ ಆಗಿರುವ ಬಗ್ಗೆ ಪ್ರಸ್ತಾಪಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ವಹಿಸಲು ತಿಳಿಸಿದ್ದಾರೆ.

ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಜಯಕುಮಾರ್‌, ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್‌ ಭೇಟಿ ನೀಡಿದ್ದರು.ಪ್ರತಿಭಟನೆ: ನಾಗೇಶ್‌ ಮೇಲೆ ಹಲ್ಲೆ ಮಾಡಿದ ಕುದುರೆಮುಖ ಪೊಲೀಸ್‌ ಪೇದೆ ಸಿದ್ದೇಶ್‌, ಅವರೊಂದಿಗೆ ಇದ್ದ ಶಶಿ ಹಾಗೂ ಸಬ್‌ ಇನ್ಸ್‌ಸ್ಪೆಕ್ಟರ್‌ ಆದರ್ಶ ಮೇಲೆ ಪ್ರಕರಣ ದಾಖಲಿಸಲು ಆಗ್ರಹಿಸಿ ಕಳಸದ ಸಮುದಾಯ ಆರೋಗ್ಯ ಕೇಂದ್ರದ ಎದುರು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ಹಾಗೂ ದಲಿತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ತನಿಖೆ ನಡೆಸಲು ಹಿರಿಯ ಪೊಲೀಸ್‌ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ ನಂತರ ನಾಗೇಶ್ ಮೃತ ದೇಹವನ್ನು ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗಲಾಯಿತು. 13 ಕೆಸಿಕೆಎಂ 4ಸಂಸೆಯ ಯುವಕ ನಾಗೇಶ್ ಆತ್ಮಹತ್ಯೆಗೆ ಕಾರಣವಾದ ಕುದುರೆಮುಖ ಪೊಲೀಸ್ ಪೇದೆ ಹಾಗೂ ಇತರರ ವಿರುದ್ಧ ಕ್ರಮ ಕ್ಕೆ ಆಗ್ರಹಿಸಿ ಕಳಸದ ಸಮುದಾಯ ಆರೋಗ್ಯ ಕೇಂದ್ರದ ಎದುರು ವಿವಿಧ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ