ಯಲ್ಲಾಪುರ: ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದ ಆರೋಪಿಯನ್ನು ಹಿಡಿಯುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ರೌಡಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಯಲ್ಲಾಪುರ ತಾಲೂಕಿನ ಕಣ್ಣೀಗೇರಿ ಬಳಿ ಸೋಮವಾರ ಸಂಜೆ ೬.೫೦ ರ ಸುಮಾರಿಗೆ ಘಟನೆ ನಡೆದಿದೆ.
ಈ ಕುರಿತು ಎಸ್‌ಪಿ ಎಸ್. ನಾರಾಯಣ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.ಪ್ರವೀಣ ಮೇಲೆ ೧೬ ಪ್ರಕರಣಗಳಿವೆ. ೯ ಪ್ರಕರಣಗಳು ಇನ್ನು ವಿಚಾರಣೆಯಲ್ಲಿದೆ. ಸಾಕ್ಷಿಗಳನ್ನು ಹೆದರಿಸಿ ಪ್ರಕರಣ ಇತ್ಯರ್ಥ ಮಾಡಿಕೊಂಡು ಈತ ಮೆರೆಯುತ್ತಿದ್ದ. ೩ ತಿಂಗಳ ಹಿಂದೆ ಈತ ಖಾನಾಪುರದಲ್ಲಿ ಪೋಲೀಸರಿಂದ ತಪ್ಪಿಸಿಕೊಂಡಿದ್ದ. ಗುಂಡಾ ಆಕ್ಟ್, ಎಟ್ರಾಸಿಟಿ, ದರೋಡೆ, ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ಇಡೀ ಕುಟುಂಬ, ಅಂದರೆ ಸಹೋದರ, ೧೪ ವರ್ಷದ ಮಗ, ಹೆಂಡತಿ ಎಲ್ಲರೂ ಇವನ ಕಾರ್ಯದಲ್ಲಿ ನೆರವಾಗುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.
ಆರೋಪಿ ಪ್ರವೀಣಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯ ಪತ್ತೆ ಹಚ್ಚುವಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ., ಎಂ. ಜಗದೀಶ, ದಾಂಡೇಲಿ ಉಪ-ವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಖಂಡಿ ಅವರ ಮಾರ್ಗದರ್ಶನದಲ್ಲಿ ಜೋಯಿಡಾ ಸಿಪಿಐ ಚಂದ್ರಶೇಖರ ಹರಿಹರ ನೇತೃತ್ವದಲ್ಲಿ ಪಿಎಸ್‌ಐ ಮಹಾಂತೇಶ ನಾಯಕ, ಪಿಎಸ್‌ಐ ಎಚ್.ಬಿ. ಕುಡಗುಂಟಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.