೧೩ರಂದು ಅಂಬಿಕಾ ಆವರಣಕ್ಕೆ ಆಚಾರ್ಯ ಕೆ.ಆರ್.ಮನೋಜ್ ಜಿ ಆಗಮನ

KannadaprabhaNewsNetwork |  
Published : Oct 12, 2025, 01:02 AM IST
ಫೋಟೋ: ಕೆ.ಆರ್. ಮನೋಜ್ | Kannada Prabha

ಸಾರಾಂಶ

ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಶಿಕ್ಷಣ ವ್ಯವಸ್ಥೆಗೆ ಇಪ್ಪತ್ತೈದು ವರ್ಷ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ವಿದ್ಯಾಲಯಕ್ಕೆ ಹತ್ತು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ವಿದ್ಯಾಲಯದ ಕಟ್ಟಡದ ನೂತನ ಅಂತಸ್ತು, ವ್ಯಾಯಾಮಶಾಲೆ, ಸಭಾಂಗಣವನ್ನು ಆಚಾರ್ಯ ಮನೋಜ್ ಜಿ ಉದ್ಘಾಟಿಸಲಿದ್ದಾರೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ ಅಧ್ಯಕ್ಷತೆ ವಹಿಸುವರು.

ಅಂಬಿಕಾ ಪ.ಪೂ.ವಿದ್ಯಾಲಯದಲ್ಲಿ ನೂತನ ಅಂತಸ್ತು, ವ್ಯಾಯಾಮಶಾಲೆ, ಸಭಾಂಗಣ ಉದ್ಘಾಟನೆಕನ್ನಡಪ್ರಭ ವಾರ್ತೆ ಪುತ್ತೂರು

ಮತಾಂತರಗೊಂಡಿದ್ದ ಸುಮಾರು ಎಂಟು ಸಾವಿರಕ್ಕೂ ಅಧಿಕ ಹಿಂದೂ ಯುವಕ, ಯುವತಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಮೂಲಕ ಕೇರಳದ ತಿರುವನಂತಪುರಂನಲ್ಲಿ ಕ್ರಾಂತಿ ಮೂಡಿಸಿರುವ ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕ ಆಚಾರ್ಯ ಕೆ.ಆರ್.ಮನೋಜ್ ಜಿ ಅ.೧೩ರಂದು ಪುತ್ತೂರಿನ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯಕ್ಕೆ ಆಗಮಿಸಲಿದ್ದಾರೆ.ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಶಿಕ್ಷಣ ವ್ಯವಸ್ಥೆಗೆ ಇಪ್ಪತ್ತೈದು ವರ್ಷ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ವಿದ್ಯಾಲಯಕ್ಕೆ ಹತ್ತು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ವಿದ್ಯಾಲಯದ ಕಟ್ಟಡದ ನೂತನ ಅಂತಸ್ತು, ವ್ಯಾಯಾಮಶಾಲೆ, ಸಭಾಂಗಣವನ್ನು ಆಚಾರ್ಯ ಮನೋಜ್ ಜಿ ಉದ್ಘಾಟಿಸಲಿದ್ದಾರೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ ಅಧ್ಯಕ್ಷತೆ ವಹಿಸುವರು.

ಈ ಸಂದರ್ಭದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಬಳಿಕ ಮರಳಿ ಮಾತೃಧರ್ಮಕ್ಕೆ ಆಗಮಿಸಿದ ಆತಿರಾ ಎಸ್. ಅವರು ಬರೆದ ‘ನಾನು ಆತಿರಾ’ ಕೃತಿಯ ಕನ್ನಡ ಅನುವಾದ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಹಾಗೂ ಸಿಬಿಎಸ್‌ಇ ಸಂಸ್ಥೆಯ ಪಾರಂಪರಿಕ ದಿನಾಚರಣೆಯೂ ನಡೆಯಲಿದೆ.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ., ಸಂಸ್ಥೆಯ ಪ್ರಾಚಾರ್ಯ ಗಣೇಶ ಪ್ರಸಾದ್ ಡಿ.ಎಸ್., ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ, ಕೃತಿಕಾರೆ ಆತಿರಾ ಎಸ್., ಅನುವಾದಕರಾದ ನಾಗೇಂದ್ರ ಮತ್ತು ಶ್ವೇತಾ ಜಲಗೇರಿ ಉಪಸ್ಥಿತರಿರುವರು.

ಬೆಳಗ್ಗೆ ೯ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು, ಬಳಿಕ ಆರ್ಷ ವಿದ್ಯಾ ಸಮಾಜದ ತಂಡದಿಂದ ನೃತ್ಯ ನಾಟಕ ನಡೆಯಲಿದೆ. ಮತಾಂಧರ ಷಡ್ಯಂತ್ರಗಳನ್ನು ಎದುರಿಸುವ ಬಗ್ಗೆ ಈ ನೃತ್ಯ ನಾಟಕ ಮಾಹಿತಿ ರೂಪದ ಬೆಳಕು ಚೆಲ್ಲಲಿದೆ.

PREV

Recommended Stories

ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ