ಸಾಧನೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ: ಮಂಜುನಾಥ್ ಸ್ವಾಮಿ

KannadaprabhaNewsNetwork |  
Published : Jun 30, 2025, 12:34 AM IST
ಫೋಟೋ 28ಟಿಜಿಟಿ1: ಬರೂರು ಕಲ್ಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭವನ್ನು ಬರೂರು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಖಂಡೋಜಪ್ಪ  ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಸಾಧನೆಗೆ ಶಿಕ್ಷಕರ ಮಾರ್ಗದರ್ಶನ, ವಿಧ್ಯಾರ್ಥಿಗಳ ಆಸಕ್ತಿ, ಪೋಷಕರ ಪ್ರೋತ್ಸಾಹ ದೊರೆತರೆ ಮಾತ್ರ ವಿಧ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಧಾರವಾಡದ ಯೋಜನಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ತ್ಯಾಗರ್ತಿ

ಸಾಧನೆಗೆ ಶಿಕ್ಷಕರ ಮಾರ್ಗದರ್ಶನ, ವಿಧ್ಯಾರ್ಥಿಗಳ ಆಸಕ್ತಿ, ಪೋಷಕರ ಪ್ರೋತ್ಸಾಹ ದೊರೆತರೆ ಮಾತ್ರ ವಿಧ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಧಾರವಾಡದ ಯೋಜನಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ಸ್ವಾಮಿ ಹೇಳಿದರು.

ಸಾಗರ ತಾಲೂಕಿನ ಬರೂರು ಕಲ್ಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿಧ್ಯಾರ್ಥಿ ಸಂಘ ಹಾಗೂ ಶಾಲಾ ಸುಧಾರಣಾ ಸಮಿತಿಯಿಂದ 2024-25ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ100 ಫಲಿತಾಂಶ ನೀಡಿದ ಮಕ್ಕಳಿಗೆ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದ ಇವರು, ಸಾಧನೆಗೆ ಹಲವಾರು ವಿಘ್ನಗಳಿದ್ದರೂ ದೃಢ ನಿರ್ಧಾರದಿಂದ ಗುರಿ ತಲುಪಬಹುದು ಎಂಬುದಕ್ಕೆ ಅಂಗವಿಕಲತೆ ಹೊಂದಿರುವ ಮಕ್ಕಳು ಮಾನಸಿಕವಾಗಿ ಸದೃಢತೆ ಹೊಂದಿ ಐಪಿಎಸ್, ಕೆಎಎಸ್ ಹಾಗೂ ಮೌಂಟ್‍ಎವರೆಸ್ಟ್ ಶಿಖರವನ್ನೂ ಏರಿರುವ ನಿದರ್ಶನಗಳಿವೆ ಎಂದರು.

ವಿದ್ಯಾಭ್ಯಾಸಕ್ಕಾಗಿ ಹೊರ ಜಿಲ್ಲೆಗಳಿಗೆ ಮಕ್ಕಳನ್ನು ಕಳುಹಿಸುವ ಪೋಷಕರ ಸಂಖ್ಯೆ ಹೆಚ್ಚುತ್ತಿದ್ದು, ಈ ಭಾಗದ ಪೋಷಕರು ಸ್ಥಳೀಯ ಸರ್ಕಾರಿ ಶಾಲೆಗೆ ದಾಖಲಿಸಿ ಸರ್ಕಾರಿ ಶಾಲೆಗಳಲ್ಲೂ ಉತ್ತಮ ವಿಧ್ಯಾಭ್ಯಾಸ ಪಡೆದು ಹೆಚ್ಚಿನ ಅಂಕ ಪಡೆಯಬಹುದು ಎಂಬುದನ್ನು ಮಕ್ಕಳು ಸಾಧಿಸಿ ತೋರಿಸಿದ್ದಾರೆ. ಈ ಮಕ್ಕಳ ಸಾಧನೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮುಖ್ಯ ಶಿಕ್ಷಕ ಗಣಪತಿ ಜಿ.ಎನ್ ಮಾತನಾಡಿ, ಶಾಲೆಯಲ್ಲಿ ಮಕ್ಕಳ ವಿದ್ಯೆಗೆ ಶಿಕ್ಷಕರು ಹೆಚ್ಚು ಗಮನಹರಿಸುತ್ತಿದ್ದು, ಶಾಲೆಯ ಮೂಲಭೂತ ಸೌಲಭ್ಯಗಳ ಬಗ್ಗೆ ಸ್ಥಳೀಯ ಆಡಳಿತ ಗಮನಹರಿಸಬೇಕೆಂದು ಮನವಿ ಮಾಡಿದರು.ಬರೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಖಂಡೋಜಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯರಾದ ಮಂಜುನಾಥ್ ಕಲ್ಕೊಪ್ಪ, ಹೊಳಿಯಪ್ಪ ಬರೂರು, ಎಸ್‍ಡಿಎಂಸಿ ಅಧ್ಯಕ್ಷರಾದ ಶಿವಕುಮಾರ್, ಸಾಗರ ಶಿಕ್ಷಣ ಸಂಯೋಜಕರಾದ ಅನ್ನಪೂರ್ಣ, ಸಿಡಿಸಿ ಉಪಾಧ್ಯಕ್ಷರಾದ ಶಿವಕುಮಾರ್ ಎನ್.ಡಿ, ಬರೂರು ಕಲ್ಕೊಪ್ಪ, ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್, ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಅರುಣ್‍ ಕುಮಾರ್, ಗ್ರಾಮದ ಮುಖ್ಯಸ್ಥರಾದ ರೇವಣಪ್ಪ ಜಂಬಾನಿ, ಶಾಂತಕುಮಾರ್ ಜಂಬಾನಿ, ಹಳೇ ವಿಧ್ಯಾರ್ಥಿ ಸಂಘದ ಸದಸ್ಯರುಗಳಾದ ದಾಮೋಧರ್‌ ಎಸ್.ಹೆಚ್, ಜಾನಪದ ಕಲಾವಿದರಾದ ಗುರುಮೂರ್ತಿ, ಶಿವಕುಮಾರ್ ಮುಳುಕೆರೆ, ಹೆಚ್.ಬಿ ನಾಗರಾಜ್, ರುದ್ರಪ್ಪ, ಬೀರೇಶ್, ಯಶವಂತ್, ದಿವಾಕರ್ ಉಪಸ್ಥಿತರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ