ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆ ಹಿಂದೆ ಪೋಷಕರು, ಶಿಕ್ಷಕರ ಶ್ರಮ ಅಡಗಿರುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶಂಭು ಬಳಿಗಾರ ತಿಳಿಸಿದರು.ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ತರಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪಪೂ ಕಾಲೇಜಿನ 2023-24ನೇ ಸಾಲಿನ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ವಿಶೇಷ ಪರಿಶ್ರಮದಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು. ತರಗತಿಯಲ್ಲಿ ಗುರುಗಳ ಪಾಠವನ್ನು ಗಮನವಿಟ್ಟು ಕೇಳಿದ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ. ಉತ್ತಮ ನೌಕರಿ ಮಾಡುವುದಷ್ಟೆ ಸಾಧನೆಯಲ್ಲ, ಯಾವುದೇ ನೌಕರಿ ಸಿಗದಿದ್ದರೂ ಉತ್ತಮ ವ್ಯಾಪಾರಿಗಳಾಗಿ, ಕೃಷಿಕರಾಗಿ ಮತ್ತು ಸಮಾಜದ ಯೋಗ್ಯ ಪ್ರಜೆಯಾಗಿ ರಾಷ್ಟ್ರದ ಏಳಿಗೆಗೆ ಶ್ರಮಿಸಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದು ಗುರುಗಳ ಕರ್ತವ್ಯವಾಗಿದೆ ಎಂದರು.
ಹೊಳೆಸಿರಿಗೆರಿಯ ಕುಂದೂರು ಮಂಜಣ್ಣ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದ ಯಶಸ್ವಿಗೆ ಶ್ರಮ ಮತ್ತು ಛಲ ಮುಖ್ಯವಾಗಿದ್ದು ವಿದ್ಯಾರ್ಥಿಗಳು ಸಿನಿಮಾ, ಟಿವಿ, ಮೊಬೈಲ್‌ನಿಂದ ದೂರವಿರಬೇಕು. ಪರೀಕ್ಷೆಯನ್ನು ಹಬ್ಬದ ಹಾಗೆ ಸಂಭ್ರಮದಿಂದ ಪರೀಕ್ಷೆಯನ್ನು ಬರೆಯಬೇಕು ಎಂದರು.ಇದೇ ಸಂದರ್ಭದಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಶಿವಪ್ರಸಾದ ಬಿ.ಜಿ., ದ್ವಿತೀಯ ಸ್ಥಾನ ಪಡೆದ ನಿವೇದಿತಾ ಕನ್ನಗೌಡ್ರ, ತೃತೀಯ ಸ್ಥಾನ ಪಡೆದ ಭವಾನಿ ಹಾದಿಮನಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಧನಂಜಯ ಎಂ.ಜಿ., ಅಜಯಕುಮಾರ ಕೆ. ಬೃಂದಾ ತರಗನಹಳ್ಳಿ, ವಿದ್ಯಾ ತಳವಾರಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಾಚಾರ್ಯ ಪಿ. ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು.ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ಅರಳಿ, ಉಪಾಧ್ಯಕ್ಷ ಆರ್.ಬಿ. ತೋಟಿಗೇರ, ಸದಸ್ಯರಾದ ವೀರನಗೌಡ ಪೊಲೀಸ್‌ಗೌಡ್ರ, ಮಂಜಪ್ಪ ಲಿಂಗದಹಳ್ಳಿ, ಚನ್ನಗೌಡ ಕುಡುಪಲಿ, ಎಲ್.ಆರ್. ಹೂರಗಿ, ಬಿ.ಕೆ. ಕೊಟ್ಟದ, ಪಿ.ಎಸ್. ತೆಂಬದ ಹಾಗೂ ಉಪನ್ಯಾಸಕರಾದ ಎಚ್. ಶಿವಾನಂದ, ಮಹೇಶ ಟಿ., ಸಂತೋಷ ಅಂಗಡಿ, ಅಶೋಕ ಲಮಾಣಿ, ರೇಣುಕಾ ಗಳಗನಾಥ, ಪೂರ್ಣಿಮಾ ಮಾಗನೂರ, ಶಿಲ್ಪಾ ಕೆ., ರೇವಣ್ಣ ನಾಯ್ಕ್, ಶಿಕ್ಷಕರಾದ ಶಿವಮೂರ್ತಯ್ಯ ಎಚ್.ಎಂ., ರವಿ ಕೆ.ಎಸ್., ಪ್ರಕಾಶ, ಬಸವನಗೌಡ ಪಾಟೀಲ, ಅಂಬಿಕಾ, ಜೈಪ್ರಕಾಶ ಸಿ.ಆರ್., ಪ್ರವೀಣ್‌ಕುಮಾರ, ಜಗದೀಶ ಕೊರಗರ ಉಪಸ್ಥಿತರಿದ್ದರು.