ಎಸ್ಸೆಸ್ಸೆಲ್ಸಿಯಲ್ಲಿ ಚಹಾ ಮಾರುವವನ ಮಗಳ ಸಾಧನೆ

KannadaprabhaNewsNetwork |  
Published : May 06, 2025, 01:45 AM IST
ಚಹಾ ಮಾರುವವನ ಮಗಳು ತಂದಳು ತೇರದಾಳಕ್ಕೆ ಹೂವು! | Kannada Prabha

ಸಾರಾಂಶ

ಸಾಧನೆ ಮಾಡಲು ಗುರಿ ಮುಖ್ಯ, ಗುರಿ ಮುಟ್ಟಲು ಕಠಿಣ ಪರಿಶ್ರಮ ಅಗತ್ಯ. ತೇರದಾಳದ ಚಹಾ ಮಾರುವವನ ಮಗಳು ಇದಕ್ಕೆ ಸಾಕ್ಷಿಯಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೧೫ ಅಂಕ ಪಡೆದು ರಾಜ್ಯಕ್ಕೆ ೧೧ನೇ ರ‍್ಯಾಂಕ್ ಪಡೆದು, ಪಟ್ಟಣ, ಪಾಲಕರು ಹಾಗೂ ಕಲಿತ ಶಾಲೆಗೆ ಕೀರ್ತಿ ಹೆಚ್ಚಿಸಿದ್ದಾಳೆ.

ಶಿವಾನಂದ ಪಿ.ಮಹಾಬಲಶೆಟ್ಟಿ ರಬಕವಿ-ಬನಹಟ್ಟಿ

ಸಾಧನೆ ಮಾಡಲು ಗುರಿ ಮುಖ್ಯ, ಗುರಿ ಮುಟ್ಟಲು ಕಠಿಣ ಪರಿಶ್ರಮ ಅಗತ್ಯ. ತೇರದಾಳದ ಚಹಾ ಮಾರುವವನ ಮಗಳು ಇದಕ್ಕೆ ಸಾಕ್ಷಿಯಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೧೫ ಅಂಕ ಪಡೆದು ರಾಜ್ಯಕ್ಕೆ ೧೧ನೇ ರ‍್ಯಾಂಕ್ ಪಡೆದು, ಪಟ್ಟಣ, ಪಾಲಕರು ಹಾಗೂ ಕಲಿತ ಶಾಲೆಗೆ ಕೀರ್ತಿ ಹೆಚ್ಚಿಸಿದ್ದಾಳೆ.ತೇರದಾಳ ಪಟ್ಟಣದ ಶ್ರೀ ಕಲ್ಮೇಶ್ವರ ವಿದ್ಯಾವರ್ಧಕ ಸಂಘದ ವಿನಾಯಕ ಪ್ರೌಢಶಾಲೆಯಲ್ಲಿ ಓದುತ್ತಿರುವ ನಿಂಬೆಕ್ಕ ಕಾಡಪ್ಪ ಕಥೋಡಿ ಮನೆಯಲ್ಲಿನ ಬಡತನದ ಮೆಟ್ಟಿ ನಿಂತು ಸಾಧನೆಯ ಮೆರೆದಿದ್ದಾಳೆ. ತಂದೆ ಕಾಡಪ್ಪ ಸರ್ಕಾರಿ ಕನ್ನಡ ಶಾಲೆಯ ಬಳಿ ಚಿಕ್ಕದಾದ ಚಹಾ ಅಂಗಡಿ ಇಟ್ಟುಕೊಂಡು ಉಪಜೀವನ ಸಾಗಿಸುತ್ತಿದ್ದು, ಮಗಳ ಶಿಕ್ಷಣಕ್ಕೆ ಕೊರತೆ ಮಾಡಿಲ್ಲ. ಇದರ ಪರಿಣಾಮ ಮಗಳು ಟಾಪರ್ ಆಗಿದ್ದು, ಸಾಧನೆಗೆ ಬಡತನ ಅಡ್ಡಿ ಮಾಡುವುದಿಲ್ಲ ಎಂಬುವುದನ್ನು ಸಾಬೀತು ಮಾಡಿದ್ದಾಳೆ. ಕನ್ನಡದಲ್ಲಿ ೧೨೫, ಸಮಾಜ ವಿಜ್ಞಾನದಲ್ಲಿ ೧೦೦ ಹಾಗೂ ಹಿಂದಿ ವಿಷಯದಲ್ಲಿ ೧೦೦, ಗಣಿತದಲ್ಲಿ ೯೫, ವಿಜ್ಞಾನದಲ್ಲಿ ೯೭, ಇಂಗ್ಲೀಷ್‌ ವಿಷಯದಲ್ಲಿ ೯೮ ಅಂಕ ಪಡೆದುಕೊಂಡಿದ್ದಾಳೆ.

ಅಕ್ಕ, ಅಪ್ಪ ಅಮ್ಮ ನನಗೆ ಅಭ್ಯಾಸ ಮಾಡಲು ಪ್ರೋತ್ಸಾಹಿಸಿದರು. ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖ್ಯಗುರು ಶಂಕರ ತಿಗಣಿ ಗುರುಗಳ ಹೆಚ್ಚಿನ ಕಾಳಜಿ ಮತ್ತು ಶಾಲಾ ಶಿಕ್ಷಕರು ಪ್ರೋತ್ಸಾಹ ಹಾಗೂ ಸತತ ಅಧ್ಯಯನದಿಂದ ಈ ಸಾಧನೆ ಸಾಧ್ಯವಾಯಿತು. ನಿತ್ಯ ೬ ರಿಂದ ೭ಗಂಟೆಯವರೆಗೆ ಸತತ ಅಭ್ಯಾಸ ಮಾಡಿದ್ದು, ಎಂತಹುದೇ ಸಮಸ್ಯೆ ಎದುರಾದರೂ ಸಮಾಧಾನದಿಂದ ಶಿಕ್ಷಕರ ಮಾರ್ಗದರ್ಶನದಲ್ಲಿ ಪರಿಹರಿಸಿದೆ. ಸಾಧನೆ ಮಾಡಲು ಅನುಕೂಲವಾಯಿತು ಎಂದು ಹೇಳುತ್ತಾರೆ.

ತಂದೆ ಚಿಕ್ಕದಾದ ಚಹಾದ ಅಂಗಡಿ ನಡೆಸುತ್ತಾರೆ. ಅವರ ದುಡಿಮೆಯೇ ಕುಟುಂಬಕ್ಕೆ ಆಧಾರ, ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ತಂದೆಯ ಕಾಲಿಗೆ ಪೆಟ್ಟಾಗಿ ಚಹಾದ ಅಂಗಡಿ ನಡೆಸುವುದು ಕಷ್ಟವಾಯಿತು. ತಾಯಿ ಅಂಗಡಿಯ ಜವಬ್ದಾರಿ ಹೊತ್ತಿದ್ದಾರೆ.ತಾಯಿ ಮನೆಯ ಒಳಗೂ ಹಾಗೂ ಹೊರಗೂ ಜವಾಬ್ದಾರಿ ನಿರ್ವಹಿಸುತ್ತಾರೆ. ಮುಂದೆ ವೈದ್ಯಕೀಯ ಅಧ್ಯಯನ ಮಾಡುವ ಆಸೆ ಇದೆ.

- ನಿಂಬೆಕ್ಕ ಕಥೋಡಿ ಸಾಧಕ ವಿದ್ಯಾರ್ಥಿನಿ

ನಾವು ತುಂಬಾ ಬಡವರು. ನಿತ್ಯ ದುಡಿದೇ ಉಪಜೀವನ ಸಾಗಿಸಬೇಕು. ಆದರೂ ಮಕ್ಕಳಿಗೆ ಬಡತನ ಅಡ್ಡಿಯಾಗದಂತೆ ಪ್ರೋತ್ಸಾಹ ನೀಡಿದ್ದೇವೆ. ರಾಜ್ಯಮಟ್ಟದಲ್ಲಿ ಸಾಧನೆ ಮಾಡುತ್ತಾಳೆಂದು ನಿರೀಕ್ಷೆ ಇಟ್ಟಿರಲಿಲ್ಲ, ಫಲಿತಾಂಶ ಬಂದ ಕೂಡಲೇ ರಾಜ್ಯಮಟ್ಟದಲ್ಲಿ ರ‍್ಯಾಂಕ್‌ ಪಡೆದಿರುವ ಸುದ್ದಿ ಕೇಳಿ ತುಂಬಾ ಸಂತೋಷವಾಗಿದೆ.

-ಕಲ್ಲಪ್ಪ ತಥೋಡಿ ನಿಂಬೆಕ್ಕಳ ತಂದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!