ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಕೊಣ್ಣೂರ ಆಂಗ್ಲ ಮಾಧ್ಯಮ ಶಾಲೆಗೆ ಶೇ.೯೫.೦೪ ಫಲಿತಾಂಶ ಬಂದಿದೆ. ಶೇ.೯೫ ಕ್ಕಿಂತ ಹೆಚ್ಚು ೧೨ ವಿದ್ಯಾರ್ಥಿಗಳು, ಶೇ.೯೦ ಕ್ಕಿಂತ ಹೆಚ್ಚು ೨೦ ವಿದ್ಯಾರ್ಥಿಗಳು, ಅತ್ಯುತ್ತಮ ಶ್ರೇಣಿಯಲ್ಲಿ ೩೭ ವಿದ್ಯಾರ್ಥಿಗಳು, ಪ್ರಥಮ ಶ್ರೇಣಿ ೫೪ ಫಲಿತಾಂಶ ನೀಡಿದ್ದಾರೆ. ಗಣಿತ-೦೧ ವಿದ್ಯಾರ್ಥಿ, ಇಂಗ್ಲಿಷ್-೦೨ ವಿದ್ಯಾರ್ಥಿಗಳು, ಕನ್ನಡ-೦೮ ವಿದ್ಯಾರ್ಥಿಗಳು, ಹಿಂದಿ-೧೧ ವಿದ್ಯಾರ್ಥಿಗಳು, ಸಮಾಜ-ವಿಜ್ಞಾನ-೦೨ ವಿದ್ಯಾರ್ಥಿಗಳು, ವಿಷಯವಾರು ಶೇ. ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ ಎಂದು ಸಂಸ್ಥಾಪಕ ಪ್ರಾಚಾರ್ಯ ಪ್ರೊ.ಬಸವರಾಜ ಕೊಣ್ಣೂರ ತಿಳಿಸಿದರು.ಗೌರಿ ಈಶ್ವರಪ್ಪ ಮಂಡಿ (೬೧೨) ಪ್ರಥಮ ಸ್ಥಾನ, ವಿಶಾಲ ಆದರ್ಶ ಬಸವರಾಜ ಗುಳ್ಳ (೬೧೨) ಪ್ರಥಮ ಸ್ಥಾನ, ನಿತೀನ್ ನೀಲಕಂಠ ಭಂಡಾರಕವಟ (೬೧೧) ದ್ವಿತೀಯ ಸ್ಥಾನ, ಸೃಜನ್ ರವೀಂದ್ರ ಸೋರಗಾಂವಿ (೬೧೦) ತೃತೀಯ ಸ್ಥಾನ.
ಪ್ರಜ್ವಲ್ ಪ್ರಶಾಂತ ಉಳ್ಳಾಗಡ್ಡಿ (೬೦೮) ನಾಲ್ಕನೇ ಸ್ಥಾನ, ಮೆಹೇಕ್ ಭದ್ರಿನಾರಾಯಣ ಲಡ್ಡಾ (೬೦೭) ಐದನೇ ಸ್ಥಾನ, ಪ್ರಜ್ಞಾ ಉದಯ ಜಮಖಂಡಿ (೬೦೪), ಭಾವನಾ ಬಾಹುಬಲಿ ಡೋರ್ಲೆ (೬೦೩), ಶಿವಾನಿ ಸಂಜು ಪಟ್ಟಣ (೬೦೧), ವಿನಾಯಕ ಸಂತೋಷ ಕಾಸರ (೬೦೦), ಆಕಾಶ ಸುರೇಶ ಯಲಶೆಟ್ಟಿ (೫೯೪), ಸಿಂಚನಾ ಗಂಗಾಧರ ಭಿಲವಡ (೫೯೪), ಇಂಗ್ಲಿಷ್ ವಿಷಯದಲ್ಲಿ ೦೨ ವಿದ್ಯಾರ್ಥಿಗಳು, ಕನ್ನಡ ವಿಷಯದಲ್ಲಿ ೦೮ ವಿದ್ಯಾರ್ಥಿಗಳು, ಗಣಿತದಲ್ಲಿ ೦೧ ವಿದ್ಯಾರ್ಥಿ, ಸಮಾಜವಿಜ್ಞಾನ ೦೨ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.ಇನ್ನೂ ಹೆಚ್ಚಿನ ಸಾಧನೆ ಮಾಡಲೆಂದು ಸಂಸ್ಥಾಪಕ ಪ್ರಾಚಾರ್ಯ ಪ್ರೊ. ಬಸವರಾಜ ಕೊಣ್ಣೂರ, ಆಡಳಿತಾಧಿಕಾರಿ ಶೀತಲ್ ಕೊಣ್ಣೂರ, ಉಪಾಧ್ಯಕ್ಷ ನಿಖಿಲ್ ಕೊಣ್ಣೂರ, ಮುಖ್ಯ ಗುರು ಕಮಲ್ ಮಾದರ ಹಾಗೂ ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.