ಐಐಟಿ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ ನಿಟ್ಟೆ ಏರೋಕ್ಲಬ್ ವಿದ್ಯಾರ್ಥಿಗಳ ಸಾಧನೆ

KannadaprabhaNewsNetwork |  
Published : Jan 16, 2024, 01:50 AM IST
ಆಗಿಲ್ಲ | Kannada Prabha

ಸಾರಾಂಶ

ಸಾಧಕರ ಪೈಕಿ ಪೈಲಟ್ ಆಗಿ ಸಾತ್ವಿಕ್ ಪೂಜಾರಿ, ಸಹ ಪೈಲಟ್ ಆಗಿ ಮೇಘರಾಜ್ ಎಂ. ಮತ್ತು ಸಂಜನಾ ಎಸ್ . ಅವರಿದ್ದ ತಂಡ ಪ್ರಥಮ ಬಹುಮಾನ ಪಡೆದಿದೆ. ಪೈಲಟ್ ಆಗಿ ರಿತೇಶ್ ಶೆಟ್ಟಿ, ಸಹ ಪೈಲಟ್ ಆಗಿ ಸಂಪನ್ನ ಮತ್ತು ಶ್ರಾವ್ಯ ಪ್ರಭು ಅವರ ತಂಡವು ದ್ವಿತೀಯ ಬಹುಮಾನ ಪಡೆದಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಇತ್ತೀಚೆಗೆ ಮದ್ರಾಸ್‌ ಐಐಟಿನಲ್ಲಿ ನಡೆದ ಪ್ರತಿಷ್ಠಿತ ಬೋಯಿಂಗ್ ಐಐಟಿ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಆರು ಮಂದಿಯ ಏರೋಕ್ಲಬ್ ವಿದ್ಯಾರ್ಥಿ ತಂಡವು ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಗೆದ್ದು ಗಮನಾರ್ಹ ಸಾಧನೆಯನ್ನು ಮಾಡಿದೆ.

ಪೈಲಟ್ ಆಗಿ ಸಾತ್ವಿಕ್ ಪೂಜಾರಿ, ಸಹ ಪೈಲಟ್ ಆಗಿ ಮೇಘರಾಜ್ ಎಂ. ಮತ್ತು ಸಂಜನಾ ಎಸ್ . ಅವರಿದ್ದ ತಂಡ ಪ್ರಥಮ ಬಹುಮಾನ ಪಡೆದಿದೆ. ಪೈಲಟ್ ಆಗಿ ರಿತೇಶ್ ಶೆಟ್ಟಿ, ಸಹ ಪೈಲಟ್ ಆಗಿ ಸಂಪನ್ನ ಮತ್ತು ಶ್ರಾವ್ಯ ಪ್ರಭು ಅವರ ತಂಡವು ದ್ವಿತೀಯ ಬಹುಮಾನ ಪಡೆದಿದೆ.

ಯುವ ದಿನಾಚರಣೆಸ್ವಾಮಿ ವಿವೇಕಾನಂದರ ಜನ್ಮಜಯಂತಿ ಪ್ರಯುಕ್ತ ಇತ್ತೀಚೆಗೆ ಡಾ.ಎನ್.ಎಸ್.ಎ.ಎಮ್ ಪ್ರಥಮ ದಜೆ೯ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.

ಕಾಲೇಜಿನ ಯೂಥ್ ರೆಡ್ ಕ್ರಾಸ್ ಸೊಸೈಟಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರೋವರ್ಸ್ ಆಂಡ್ ರೇಂಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ‘ಮೌಲ್ಯಾಧಾರಿತ ಸಮಾಜ ನಿಮಾ೯ಣದಲ್ಲಿ ಯುವ ಜನತೆಯ ಪಾತ್ರ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ವಿದ್ಯಾಥಿ೯ಗಳಿಗೆ ಏರ್ಪಡಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಅಂಕಣಕಾರರೂ, ವಾಗ್ಮಿಗಳೂ ಆಗಿರುವ ಶ್ರೀಕಾಂತ ಶೆಟ್ಟಿ ಭಾಗವಹಿಸಿದರು. ವಿದ್ಯಾಥಿ೯ಗಳನ್ನು ಉದ್ದೇಶಿಸಿ ಮಾತನಾಡಿದ ಇವರು ಆಧ್ಯಾತ್ಮಿಕ ದೇಶವಾದ ಭಾರತ ಇಂದು ಇಡಿಯ ವಿಶ್ವಕ್ಕೆ ಮಾನವೀಯತೆಯ ಪಾಠವನ್ನು ಮಾಡುವ ವಿಶ್ವಗುರುವಾಗಿದೆ. ಇದಕ್ಕೆಲ್ಲ ಕಾರಣ ಸ್ವಾಮಿ ವಿವೇಕಾನಂದರ ಚಿಕಾಗೋದ ಭಾಷಣ. ವಿವೇಕಾನಂದರು ಈ ಭಾಷಣದ ಮೂಲಕ ಜಗತ್ತಿಗೆ ವಸುದೈವ ಕುಟುಂಬ ಹಾಗೂ ಭ್ರಾತೃತ್ವದ ಪಾಠ ಭಾರತದ ಮಣ್ಣಿನಲ್ಲಿಯೇ ಆವರಿಸಿದೆ ಎಂಬುದನ್ನು ತಿಳಿಸಿಕೊಡುತ್ತಾರೆ. ಇಂದಿನ ಯುವ ಜನತೆ ವಿವೇಕಾನಂದರ ಆದರ್ಶಗಳನ್ನು ಪಾಲಿಸಿದರೆ ಭಾರತದ ಸಂಸ್ಕೃತಿ, ಆರ್ಥಿಕತೆ, ಪರಂಪರೆಗಳನ್ನು ಜಾಗತಿಕವಾಗಿ ಉತ್ತುಂಗದಲ್ಲಿಡಲು ಸಾಧ್ಯ ಎಂದು ತಿಳಿಸಿದರು.ಭಾರತೀಯ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಬಾಲಗಂಗಾಧರತಿಲಕ, ಖುದೀರಾಮ್ ಬೋಸ್, ಮಹಾತ್ಮಗಾಂಧಿ, ಭಾರತದ ಆರ್ಥಿಕತೆಗೆ ಕೊಡುಗೆ ನೀಡಿದ ಜೆಮ್ಷೆಡ್ ಜೆ ಟಾಟ ಇವರಿಗೆಲ್ಲ ಆದರ್ಶವಾಗಿದ್ದವರು ಸ್ವಾಮಿ ವಿವೇಕಾನಂದರು. ಧರ್ಮ ಎಂದರೆ ಕೇವಲ ಆಚರಣೆಯಲ್ಲ, ಧರ್ಮ ಎಂದರೆ ತಾನೂ ಬದುಕಬೇಕು ಇತರರನ್ನು ಬದುಕಲು ಬಿಡಬೇಕು ಎನ್ನುವ ಮೌಲ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾಕುಮಾರಿ ಬಿ. ಕೆ. ಮಾತನಾಡಿ, ಭಾರತೀಯರು ಇಂದು ವಿದೇಶದಲ್ಲಿ ಗೌರವದಿಂದ ಬಾಳುತ್ತಿದ್ದಾರೆ ಎಂದರೆ ಅದಕ್ಕೆ ಸ್ವಾಮಿ ವಿವೇಕಾನಂದರೇ ಕಾರಣ ಎಂದು ತಿಳಿಸಿದರು. ಇಂದು ಜಗತ್ತಿನ ಪ್ರತಿ ಐದು ಜನ ತಂತ್ರಜ್ಞರಲ್ಲಿ, ಒಬ್ಬ ವ್ಯಕ್ತಿ ಭಾರತೀಯನಿದ್ದಾನೆ ಎಂಬುದು ಭಾರತದ ಯುವ ಜನತೆಯ ಶಕ್ತಿ, ಸಾಮರ್ಥ್ಯಕ್ಕೆ ಉದಾಹರಣೆ ಆಗಿದೆ ಎಂದರು.ರೋವರ್ಸ್ ಆಂಡ್ ರೇಂಜರ್ಸ್ ನ ಸಂಯೋಜಕರಾದ ಪ್ರಕಾಶ್. ಬಿ. ಅತಿಥಿಗಳನ್ನು ಸ್ವಾಗತಿಸಿದರು. ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ರಶ್ಮಿ ವಂದಿಸಿದರು. ದೀಕ್ಷಾ ಕಾಯ೯ಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳನ್ನು ಅಧ್ಯಯನ ಪ್ರವಾಸಕ್ಕೆ ಟಿಪ್ಪರಲ್ಲಿ ಕರೆದೊಯ್ದ ಹೆಡ್‌ಮಾಸ್ಟರ್‌!
ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಶಿಫ್ಟ್‌ : ಸಂಪುಟ