ಹೊಗೆಸೊಪ್ಪು, ರೇಷ್ಮೆ, ಬಾಳೆ, ತೆಂಗಿನಿಂದ ಉತ್ತಮ ಆದಾಯ ಗಳಿಕೆ

KannadaprabhaNewsNetwork |  
Published : Jun 10, 2025, 12:57 AM IST
ದಿನೇಶ್ 1 | Kannada Prabha

ಸಾರಾಂಶ

ಇವರ ಕೃಷಿ ಕಾರ್ಯದಲ್ಲಿ ಪತ್ನಿ ಮೈತ್ರಾ ಕೈಜೋಡಿಸುತ್ತಾರೆ. ಮಕ್ಕಳಾದ ಯೋಗೇಶ್‌- ಪೊಲೀಸ್‌, ಉಮೇಶ್‌- ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

---ಅಂಶಿ ಪ್ರಸನ್ನಕುಮಾರ್‌ಕನ್ನಡಪ್ರಭ ವಾರ್ತೆ ಮೈಸೂರುಪಿರಿಯಾಪಟ್ಟಣ ತಾಲೂಕು ಸೆಣಬಿನಕುಪ್ಪೆಯ ಎಸ್‌.ಎ. ದಿನೇಶ್‌ ಅವರು ತಂಬಾಕು, ರೇ,ಷ್ಮೆ, ತೆಂಗು, ಬಾಳೆ ಬೆಳೆಯಲ್ಲಿ ಹೆಸರು ಮಾಡಿದ್ದಾರೆ.ಅವರಿಗೆ ಆರು ಎಕರೆ ಜಮೀನಿದೆ. ಒಂದು ವಿದ್ಯುತ್‌, ಮತ್ತೊಂದು ಸೋಲಾರ್‌ ಚಾಲಿತ ಕೊಳವೆ ಬಾವಿಗಳಿವೆ. ಇವರ ಜಮೀನಿನಲ್ಲಿ ಅಡಕೆ- 700, ತೆಂಗು- 70 ಮರಗಳಿವೆ. ಒಂದೂವರೆ ಎಕರೆಯಲ್ಲಿ ತಂಬಾಕು, ಎರಡು ಎಕರೆಯಲ್ಲಿ ರೇಷ್ಮೆ ಬೆಳೆದಿದ್ದಾರೆ. ರೇಷ್ಮೆಯಲ್ಲಿ ವರ್ಷಕ್ಕೆ ಏಳೆಂಟು ಬೆಳೆ ತೆಗೆಯುತ್ತಾರೆ. ಮೈಸೂರಿನ ರೇಷ್ಮೆ ಮಾರುಕಟ್ಟೆಯಲ್ಲಿ ಗೂಡುಗಳನ್ನು ಮಾರಾಟ ಮಾಡುತ್ತಾರೆ. ಒಂದು ಬೆಳೆಗೆ ಒಂದೂವರೆ ಲಕ್ಷ ರು. ಸಿಗುತ್ತದೆ. ಹೊಗೆಸೊಪ್ಪಿನಲ್ಲೂ ಉತ್ತಮ ಆದಾಯವಿದೆ.ಎರಡು ಹಸುಗಳಿದ್ದು, ಡೇರಿಗೆ ಪ್ರತಿನಿತ್ಯ 5 ಲೀಟರ್‌ ಹಾಲು ಹಾಕುತ್ತಾರೆ. 20 ಕೋಳಿ, 2 ಮೇಕೆಗಳಿವೆ. ಇವರ ಕೃಷಿ ಕಾರ್ಯದಲ್ಲಿ ಪತ್ನಿ ಮೈತ್ರಾ ಕೈಜೋಡಿಸುತ್ತಾರೆ. ಮಕ್ಕಳಾದ ಯೋಗೇಶ್‌- ಪೊಲೀಸ್‌, ಉಮೇಶ್‌- ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಕೇಶ್‌ ಓದುತ್ತಿದ್ದಾರೆ. ರೇಷ್ಮೆ ಕ್ಷೇತ್ರದಲ್ಲಿನ ಸಾಧನೆಗಾಗಿ ಎಸ್.ಎ.ದಿನೇಶ್‌ ಅವರನ್ನು 2022 ರ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ..ಸಂಪರ್ಕ ವಿಳಾಸ

ಎಸ್.ಎ. ದಿನೇಶ್‌ ಬಿನ್‌ ಅಣ್ಣೇಗೌಡಸೆಣಬಿನಕುಪ್ಪೆಪಿರಿಯಾಪಟ್ಟಣ ತಾಲೂಕುಮೈಸೂರು ಜಿಲ್ಲೆಮೊ. 94821 12256 ಕೋಟ್‌ಕೃಷಿಯಲ್ಲಿ ನಮ್ಮ ಕೆಲಸ ನಾವು ಮಾಡಿಕೊಂಡು ಹೋದರೆ ಆರಾಮ. ಸರ್ಕಾರಿ ನೌಕರರ ರೀತಿಯಲ್ಲಿ ಬದುಕಬಹುದು. ನಾವು ಬೇಕಾದಾಗ ಕೆಲ್ಸ ಮಾಡಬಹುದು. ಬೇಕಾದಾಗ ವಿಶ್ರಾಂತಿ ಮಾಡಬಹುದು.- ಎಸ್.ಎ. ದಿನೇಶ್‌, ಸೆಣಬಿನಕೊಪ್ಪಲು--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ