ಭೀಮನಬೀಡು ಶಾಲೆಯಲ್ಲಿ ಕನ್ನಡ ಶತಕದ ಸುರಿಮಳೆ

KannadaprabhaNewsNetwork |  
Published : May 11, 2025, 11:51 PM IST
ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ | Kannada Prabha

ಸಾರಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 5 ಮಂದಿ ವಿದ್ಯಾರ್ಥಿಗಳು 125ಕ್ಕೆ 125 ಅಂಕ ಪಡೆದರೆ, 15 ಮಂದಿ ವಿದ್ಯಾರ್ಥಿನಿಯರು 120ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕೇರಳ ಗಡಿ ಭಾಗದ ಭೀಮನಬೀಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನೂರು ಅಂಕ ದಾಟಿ ಶತಕವೀರರಾಗಿ ಹೊರಹೊಮ್ಮಿದ್ದಾರೆ.

ಕೇರಳ ರಸ್ತೆಯ ಕಾಡಂಚಿನ ಗ್ರಾಮವಾದ ಭೀಮನಬೀಡಲ್ಲಿ ಹಿಂದುಳಿದ ವರ್ಗದವರೇ ಹೆಚ್ಚಿರುವ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 5 ಮಂದಿ ವಿದ್ಯಾರ್ಥಿಗಳು 125ಕ್ಕೆ 125 ಅಂಕ ಪಡೆದರೆ, 15 ಮಂದಿ ವಿದ್ಯಾರ್ಥಿನಿಯರು 120ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಜೊತೆಗೆ 40 ಮಂದಿ ವಿದ್ಯಾರ್ಥಿನಿಯರು ನೂರಕ್ಕಿಂತಲೂ ಹೆಚ್ಚು ಅಂಕ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.

125ಕ್ಕೆ 125:

ಶಾಲೆಯ ಜ್ಯೋತಿ ಶಿವಣ್ಣ, ಸಿಂಚನ ಜಿ., ಮಾನಸ, ಬಿಂದು, ಲಾವಣ್ಯ ಬಿ.ಆರ್‌ 125ಕ್ಕೆ 125 ಅಂಕ ಪಡೆದಿದ್ದಾರೆ. ಚೈತ್ರ 124, ಜ್ಯೋತಿ 123, ಮಾನಸ ಎಂ.ಎಸ್‌ 123, ಚೈತ್ರ 122, ಶ್ವೇತ 122, ಸುಮಿತ್ರ ಎನ್‌. ಮಣಿ 122, ಸರಸ್ವತಿ 122, ಅನುಷ ಬಿ.ಕೆ. 122, ರೂಪ 121, ಚಂದನ ಬಿ.ಎಸ್‌. 120 ಅಂಕ ಪಡೆದಿದ್ದಾರೆ.

ಶೇ.65 ಒಟ್ಟು ಫಲಿತಾಂಶ:ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 82 ಮಂದಿ ವಿದ್ಯಾರ್ಥಿಗಳಲ್ಲಿ 54 ಮಂದಿ ಪಾಸಾಗಿದ್ದಾರೆ. ಶಾಲೆಗೆ ಶೇ. 65 ರಷ್ಟು ಫಲಿತಾಂಶ ಬಂದಿದೆ. ಶೇ.93.98 ಕನ್ನಡದಲ್ಲಿ ಆದರೆ ಕನ್ನಡ ಪ್ರಥಮ ಭಾಷೆಯಲ್ಲಿ 83 ವಿದ್ಯಾರ್ಥಿಗಳಲ್ಲಿ 78 ಮಂದಿ ಪಾಸಾಗಿದ್ದು, ಶೇ.93.97 ರಷ್ಠು ಫಲಿತಾಂಶ ಪಡೆದಿದ್ದಾರೆ.

ಮುಖ್ಯ ಶಿಕ್ಷಕ ಪದ್ಮ ಹಾಗೂ ಕನ್ನಡ ಭಾಷಾ ಶಿಕ್ಷಕಿ ವಿಜಯಲಕ್ಷ್ಮೀ ಅವರ ಶ್ರಮದ ಫಲ ಈ ಫಲಿತಾಂಶ ಬರಲು ಕಾರಣವಾಗಿದೆ ಎಂದು ಶಿಕ್ಷಕ ನಂದೀಶ್‌ ಮಾಹಿತಿ ನೀಡಿದ್ದಾರೆ.

ಎಲ್ರೂ ಹಿಂದುಳಿದ ವರ್ಗದವ್ರೇ:

ಭೀಮನಬೀಡು ಸರ್ಕಾರಿ ಪ್ರೌಢ ಶಾಲೆಯ 40 ವಿದ್ಯಾರ್ಥಿನಿಯರು ನೂರು ಅಂಕ ಪಡೆದವರೆಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿದವರೇ ಆಗಿದ್ದಾರೆ ಎಂಬುದು ವಿಶೇಷ!

ಕೋಟ್‌......

ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳು ಬಹಳ ಆಸಕ್ತಿಯಿದ್ದ ಕಾರಣ ಹೆಚ್ಚು ಅಂಕ ಪಡೆದಿದ್ದಾರೆ. ಮಕ್ಕಳ ಸಾಧನೆಗೆ ಕಾರಣರಾದ ಕನ್ನಡ ಭಾಷಾ ಶಿಕ್ಷಕಿ ವಿಜಯಲಕ್ಷ್ಮೀ ಹಾಗೂ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸುವೆ.

ಪದ್ಮ, ಮುಖ್ಯಶಿಕ್ಷಕಿ, ಭೀಮನಬೀಡು.೧೧ಜಿಪಿಟಿ೧ಜ್ಯೋತಿ ಶಿವಣ್ಣ

೧೧ಜಿಪಿಟಿ೨

ಸಿಂಚನ ಜಿ

೧೧ಜಿಪಿಟಿ೩

ಮಾನಸ

೧೧ಜಿಪಿಟಿ೪ಬಿಂದು

೧೧ಜಿಪಿಟಿ೫

ಲಾವಣ್ಯ ಬಿ.ಆರ್‌

೧೧ಜಿಪಿಟಿ೬

ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಸರ್ಕಾರಿ ಪ್ರೌಢ ಶಾಲೆ.

PREV

Recommended Stories

ವಿದ್ಯಾರ್ಥಿಗಳು ಸರ್ಕಾರಿ ಯೋಜನೆ ಸದುಪಯೋಗ ಪಡೆದುಕೊಳ್ಳಿ
ಗುರು, ಶಿಷ್ಯರದು ಜಗತ್ತಿನ ಶ್ರೇಷ್ಠ ಸಂಬಂಧ