ಗದಗ: ವಿಶೇಷಚೇತನರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮಲ್ಲಿರುವ ಅಂಗವಿಕಲತೆಯನ್ನು ಮೀರಿ ವಿಶೇಷ, ವಿಭಿನ್ನ, ವಿಶಿಷ್ಟ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಮಹಾಂತೇಶ ಕೆ. ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಕಾಶ್ ಮೇಟಿ, ಗದಗ ಜಿಲ್ಲೆಯಲ್ಲಿ ಸದ್ಯ 10 ವಿಶೇಷಚೇತನರು ಉದ್ಯೋಗ ಮಾಡುತ್ತಿದ್ದು, ಪ್ರಸಕ್ತ ವರ್ಷದಲ್ಲಿ 1500 ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ 450ಕ್ಕೂ ಹೆಚ್ಚು ಅಂಗವಿಕಲರು ಭಾಗವಹಿಸಿದ್ದಾರೆ ಎಂದರು. ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮುಂತಾದವರು ಮಾತನಾಡಿದರು.
ಮಾಂತೇಶ ಅಗಸಿಮುಂದಿನ, ದೀನಬಂಧು ಸಂಸ್ಥಾಪಕ ಹರ್ಷ ಮೊಳೆಕರ, ವೀರೇಂದ್ರ ಸಿಂಗ್, ಎಸ್.ಎಫ್. ದ್ಯಾವನಗೌಡ್ರ, ಈರಯ್ಯ ಹಿರೇಮಠ, ಬಸವರಾಜ ನರೇಗಲ್, ಶೋಭಾ ಸಾಲಿಮಠ, ವರದಾ ಕುಲಕರ, ಶಶಿಧರ ಪಾಟೀಲ, ವೀರೇಶ ತಡಹಾಳ, ಸನಂದನ್ ಕುಲಕರ್ಣಿ, ಮಮತಾ ನಾಯ್ಡು, ಸಿದ್ದನಗೌಡ ಪಾಟೀಲ, ವಿಶ್ವನಾಥ ಜಮಾದಾರ್ ಉಪಸ್ಥಿತರಿದ್ದರು.ಗಮನ ಸೆಳೆದ ಮಳಿಗೆಗಳು: ಸೋಲಾರ್ ಆಧರಿತ ವ್ಯವಸಾಯ ಯಂತ್ರಗಳು, ಸೋಲಾರ್ ಆಧಾರಿತ ಯಂತ್ರಗಳು, ಪಶು ಸಂಗೋಪನೆ ಯಂತ್ರಗಳು, ಸೋಲಾರ್ ಆಧಾರಿತ ಕಿರು ಉದ್ಯಮದ ಯಂತ್ರಗಳು, ಸೋಲಾರ್ ಆಧಾರಿತ ಆಹಾರ ಉತ್ಪನ್ನ ಯಂತ್ರಗಳು, ರೊಟ್ಟಿ ತಯಾರಿಸುವ ಯಂತ್ರ, ರಾಠಿ ಯಂತ್ರಗಳು, ಹಪ್ಪಳ ತಯಾರಿಸುವ ಯಂತ್ರಗಳು ಸೇರಿದಂತೆ ವಿವಿಧ ಮಳಿಗೆಗಳು ಗಮನ ಸೆಳೆದವು.