ಕನ್ನಡಪ್ರಭ ವಾರ್ತೆ ಪಾವಗಡ
ಪಾವಗಡ ಪುರಸಭೆಯಲ್ಲಿ ನಡೆದ ವಿಶೇಷ ಪ್ರಗತಿ ಪರಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಮಾತನಾಡಿದ 23ನೇ ವಾರ್ಡ್ ಸದಸ್ಯ ರಾಮಾಂಜಿನಪ್ಪ ಪಟ್ಟಣದಲ್ಲಿ ಸ್ಮಶಾನದ ಕೊರತೆ ಇದೆ. 100ವರ್ಷದ ಹಿಂದೆ ಕಲ್ಪಿಸಿದ್ದ ಸ್ಮಶಾನವಿದ್ದು ಅಲ್ಲಿ ಬರೀ ಕಲ್ಲು ಬಂಡೆ ಇರುವ ಕಾರಣ, ಒಂದರ ಮೇಲೆ ಒಂದು ಶವ ಹೂಳುವ ಪರಿಸ್ಥಿತಿ ಇದೆ. ಈ ಬಗ್ಗೆ ಪುರಸಭೆಯಿಂದ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಮೇಲಧಿಕಾರಿಗಳು ಸೂಕ್ತ ಕ್ರಮ ಜರಿಗಿಸಿಲ್ಲ. ಸ್ಮಶಾನದ ಜಾಗ ಖರೀದಿಗೆ ಹಣ ಸಹ ಬಿಡುಗಡೆಯಾಗಿಲ್ಲ. ಪಟ್ಟಣ ವೇಗವಾಗಿ ಬೆಳೆಯುತ್ತಿರುವ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಜಾಗ ಖರೀದಿಗೆ ಕೋಟ್ಯಂತರ ರು ಹಣ ಬೇಕಾಗುತ್ತದೆ.ಇದು ಮುದಿನ ದಿನದಲ್ಲಿ ಇನ್ನೂ ದುಭಾರಿಯಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಈ ಬಗ್ಗೆ ನಮ್ಮ ಗಮನಕ್ಕೂ ಸಮಸ್ಯೆ ಬಂದಿದ್ದು, ಈ ಕುರಿತು ಹೈಕೋರ್ಟ್ ಆದೇಶ ಸಹ ಇದ್ದು, 10 ಎಕರೆ ಜಮೀನಿನ ಅವಶ್ಯಕತೆ ಇದೆ. ಪುರಸಭೆಯಿಂದಲೇ ಜಮೀನು ಖರೀದಿ ಕುರಿತಂತೆ ಶಿಫಾರಸು ಮಾಡಿ ಕಳುಹಿಸಿ ನಾನು ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸುವ ಕುರಿತು ಸೂಚಿಸುವೆ ಎಂದರು.ಪಟ್ಟಣದಲ್ಲಿ 260 ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಇದರ ಪರಿಣಾಮ ಕೇವಲ 4ಲಕ್ಷ ಅದಾಯ ಬದಲು ಮಳಿಗೆಗಳ ಮಾಸಿಕ 14ಲಕ್ಷ ಅದಾಯ ಬರುತ್ತಿದೆ. ಈ ಪೈಕಿ ಈ ಹಿಂದೆ ಬಾಡಿಗೆಗೆ ಮಳಿಗೆಗಳಿದ್ದ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಯಾವ ರೀತಿ ಕ್ರಮವಹಿಸಬೇಕು ಎಂದು ಸಭೆಯ ಗಮನ ಸೆಳೆದಿದ್ದು ಇದಕ್ಕೆ ಕೋರ್ಟ್ ಅದೇಶ ಬರುವವರೆಗೂ ಹೆಚ್ಚುವರಿ ಬಾಡಿಗೆ ವಸೂಲಾತಿಗೆ ಅವಕಾಶವಿರುವುದಾಗಿ ಆಯೋಗದ ಅಧ್ಯಕ್ಷರು ಸೂಚಿಸಿದರು.