ಅಂಬೇಡ್ಕರ್‌ಗೆ ಅವಹೇಳನಗೈದ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಿ

KannadaprabhaNewsNetwork |  
Published : May 27, 2025, 12:35 AM IST
ಅಂಬೇಡ್ಕರ್ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪಿ ಸುರೇಶ್ ಎಂಬಾತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಮನವಿ ಸಲ್ಲಿಸುತ್ತೀರುವ ಶೋಷಿತ ವರ್ಗಗಳ ಮುಖಂಡರುಗಳು | Kannada Prabha

ಸಾರಾಂಶ

ಪಟ್ಟಣದ ಗಾಂಧಿ ವೃತ್ತದಲ್ಲಿರುವ ಗಾಯಿತ್ರಿ ಕ್ಯಾಂಟೀನ್‌ನ ಸುರೇಶ್ ಎಂಬಾತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೋಮವಾರ ತಾಲೂಕು ಶೋಷಿತ ಸಮಾಜಗಳ ಒಕ್ಕೂಟದ ಮುಖಂಡರು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ, ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

- ತಹಸೀಲ್ದಾರ್, ಮುಖ್ಯಾಧಿಕಾರಿ, ಪೊಲೀಸರಿಗೆ ಮನವಿ ಸಲ್ಲಿಸಿ ಮುಖಂಡರ ಒತ್ತಾಯ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಗಾಂಧಿ ವೃತ್ತದಲ್ಲಿರುವ ಗಾಯಿತ್ರಿ ಕ್ಯಾಂಟೀನ್‌ನ ಸುರೇಶ್ ಎಂಬಾತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೋಮವಾರ ತಾಲೂಕು ಶೋಷಿತ ಸಮಾಜಗಳ ಒಕ್ಕೂಟದ ಮುಖಂಡರು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ, ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.

ಶೋಷಿತ ಸಮಾಜಗಳ ಮುಖಂಡ ಹೊದಿಗೆರೆ ರಮೇಶ್ ಈ ಸಂದರ್ಭ ಮಾತನಾಡಿ, ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ರಚಿಸಿ, ದೇಶಕ್ಕೆ ಕೊಡುಗೆ ನೀಡಿದವುರ ಅಂಬೇಡ್ಕರ್. ಅವರು ಮಹಾನ್ ವ್ಯಕ್ತಿಯಾಗಿದ್ದಾರೆ. ಅಂಥವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಅಂಬೇಡ್ಕರ್‌ ಬಗ್ಗೆ ಯಾರೇ ಕೀಳಾಗಿ ಮಾತನಾಡಲಿ, ಸೂಕ್ತ ತನ್ನಿಖೆಯನ್ನು ನಡೆಸಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಶೋಷಿತ ಸಮುದಾಯಗಳ ಧ್ವನಿಯಾಗಿರುವ ಅಂಬೇಡ್ಕರ್ ಅವರಂತಹ ಮಹಾನಾಯಕರಿಗೆ ಅಪಮಾನ ಮಾಡಿದರೆ ಕಾನೂನಿನ ರೀತಿ ಯಾವ ಶಿಕ್ಷೆಯಾಗಲಿದೆ ಎಂಬ ಬಗ್ಗೆ ಎಲ್ಲರಿಗೂ ತಿಳಿಯಬೇಕಾಗಿದೆ. ಈ ಕೂಡಲೇ ಸದರಿ ವ್ಯಕ್ತಿಯ ಅಂಗಡಿಯ ಪರವಾನಗಿ ರದ್ದುಪಡಿಸಬೇಕು. ಈ ಘಟನೆ ನಡೆದು ಮೂರು ದಿನಗಳು ಕಳೆಯುತ್ತಿದೆ. ಆದರೂ, ಪೊಲೀಸ್ ಇಲಾಖೆಯವರು ಎಫ್.ಐ.ಆರ್. ದಾಖಲು ಮಾಡಿದ್ದಾರೆ ಹೊರತು, ಆರೋಪಿಯನ್ನು ಮಾತ್ರ ಬಂಧಿಸಿಲ್ಲ. ಈ ಕೂಡಲೇ ಆರೋಪಿಯನ್ನು ಬಂಧಿಸಿ ಸತ್ಯಾಸತ್ಯತೆ ಪರಿಶೀಲನೆ ನಡೆಸಿ, ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪ್ತಿ ಹೋರಾಟ ನಡೆಸಲಾಗುವುದು ಎಂದರು.

ಈ ಸಂದರ್ಭ ಒಕ್ಕೂಟದ ಪ್ರಮುಖರಾದ ವಿರೇಶ್ ನಾಯ್ಕ್, ಸಿ.ನಾಗರಾಜ್, ನಲ್ಲೂರು ಶೇಖರಪ್ಪ, ರುದ್ರಪ್ಪ ಮಾಸ್ಟರ್, ಕುಬೇಂದ್ರಸ್ವಾಮಿ, ಗೌಸ್ ಪೀರ್, ತನ್ವೀರ್, ಕೋಗಲೂರು ಪ್ರಕಾಶ್, ಮಾಚನಾಯ್ಕನಹಳ್ಳಿ ಮಂಜುನಾಥ್, ಧರಣೇಂದ್ರ, ಮಲ್ಲಾನಾಯ್ಕ್, ಗರಗ ರಾಜಪ್ಪ, ಸದಾನಂದ, ಬಸವಾಪುರ ರಂಗನಾಥ್, ನಾಗೇಂದ್ರಪ್ಪ, ಎ.ಸಿ.ಚಂದ್ರು, ಎಂ.ಕೆ.ನಾಗಪ್ಪ ಮೊದಲಾದವರು ಹಾಜರಿದ್ದರು.

- - -

(ಕೋಟ್‌) ಅಂಬೇಡ್ಕರ್‌ ಬಗ್ಗೆ ಗೌರವ ಹೊಂದಿರದ ಆರೋಪಿಗೆ ಪುರಸಭೆಯವರು ಕ್ಯಾಟಿಂಗ್ ನಡೆಸಲು ಪರವಾನಗಿ ನೀಡಿದ್ದಾರೆ. ಆದರೆ ಈ ಸೌಲಭ್ಯ ದುರುಪಯೋಗ ಆಗುತ್ತಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಸದರಿ ವ್ಯಕ್ತಿಯ ಪರವಾನಗಿ ರದ್ದುಪಡಿಸಬೇಕು.

- ಹೊದಿಗೆರೆ ರಮೇಶ್‌, ಮುಖಂಡ

- - -

-26ಕೆಸಿಎನ್‌ಜಿ2.ಜೆಪಿಜಿ:

ಚನ್ನಗಿರಿಯಲ್ಲಿ ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪಿ ಸುರೇಶ್ ಎಂಬಾತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಮನವಿ ಶೋಷಿತ ವರ್ಗಗಳ ಮುಖಂಡರು ಮನವಿ ಸಲ್ಲಿಸಿದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು