ಆನೆ ದಾಳಿಯಿಂದ ಸಾವಿಗೀಡಾದ ಮಹಿಳೆ ಕುಟುಂಬಕ್ಕೆ ಸಾಂತ್ವನ

KannadaprabhaNewsNetwork |  
Published : May 27, 2025, 12:33 AM IST
ಬೇಲೂರು ಫೋಟೋಆನೆ ದಾಳಿಯಿಂದ  ಸಾವಿಗೀಡಾದ ಕೂಲಿ ಕಾರ್ಮಿಕ ಮಹಿಳೆ ಚಂದ್ರಮ್ಮ ನಿವಾಸಕ್ಕೆ ಶಾಸಕ ಹುಲ್ಲಳ್ಳಿ ಸುರೇಶ್ ಭೇಟಿ ನೀಡಿ ಸಾಂತ್ವಾನ ಹೇಳಿದರು. | Kannada Prabha

ಸಾರಾಂಶ

ಬಿಕ್ಕೋಡು ಹೋಬಳಿಯ ಅಂಕಿಹಳ್ಳಿ ಗ್ರಾಮದ ಡಾ. ಕರಣ್ ಅವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಗಜೇಂದ್ರಪುರದ ಚಂದ್ರಮ್ಮ ಅವರ ಮೇಲೆ ಏಕಾಎಕಿ ಕಾಡಾನೆ ದಾಳಿ ಮಾಡಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶಾಸಕ ಎಚ್ ಕೆ ಸುರೇಶ್ ಮೃತ ಚಂದ್ರಮ್ಮ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹರಿಹಾಯ್ದರು. ಆನೆ ದಾಳಿಯಿಂದ ಸಾವಿಗೀಡಾದ ಕೂಲಿ ಕಾರ್ಮಿಕ ಮಹಿಳೆ ಚಂದ್ರಮ್ಮ ನಿವಾಸಕ್ಕೆ ಶಾಸಕ ಹುಲ್ಲಳ್ಳಿ ಸುರೇಶ್ ಭೇಟಿ ನೀಡಿ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಆನೆ ದಾಳಿಯಿಂದ ಸಾವಿಗೀಡಾದ ಕೂಲಿ ಕಾರ್ಮಿಕ ಮಹಿಳೆ ಚಂದ್ರಮ್ಮ ನಿವಾಸಕ್ಕೆ ಶಾಸಕ ಹುಲ್ಲಳ್ಳಿ ಸುರೇಶ್ ಭೇಟಿ ನೀಡಿ ಸಾಂತ್ವನ ಹೇಳಿದರು.ತಾಲೂಕಿನ ಬಿಕ್ಕೋಡು ಹೋಬಳಿಯ ಅಂಕಿಹಳ್ಳಿ ಗ್ರಾಮದ ಡಾ. ಕರಣ್ ಅವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಗಜೇಂದ್ರಪುರದ ಚಂದ್ರಮ್ಮ ಅವರ ಮೇಲೆ ಏಕಾಎಕಿ ಕಾಡಾನೆ ದಾಳಿ ಮಾಡಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶಾಸಕ ಎಚ್ ಕೆ ಸುರೇಶ್ ಮೃತ ಚಂದ್ರಮ್ಮ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹರಿಹಾಯ್ದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆ ಹಾಗೂ ಮಾನವ ಸಂಘರ್ಷದಲ್ಲಿ ಕೂಲಿ ಕಾರ್ಮಿಕರಾದ ಚಂದ್ರಮ್ಮ ನವರ ಮೇಲೆ ಕಾಡಾನೆ ದಾಳಿ ಮಾಡಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು ದುರಾದೃಷ್ಟಕರ. ಇದು ಈ ಕ್ಷೇತ್ರ ಹಾಗು ಸರ್ಕಾರ ತಲೆ ತಗ್ಗಿಸುವ ವಿಷಯವಾಗಿದೆ. ಸರ್ಕಾರ ಈಗಾಗಲೇ ಆನೆಧಾಮ ಮಾಡಬೇಕು ಎಂದು ಹೇಳಿಕೆ ನೀಡಿದ್ದು ಇದುವರೆಗೂ ಅದರ ಬಗ್ಗೆ ಗಮನ ಹರಿಸಿಲ್ಲ. ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ್ದೇವೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನು ಮಾಡುತ್ತಿದ್ದಾರೆ. ಆನೆಗಳು ಸಾಕಷ್ಟಿದೆ ಅವುಗಳಿಗೂ ಆಹಾರ ಇಲ್ಲದೆ ಪರದಾಡುತ್ತಿದೆ ಅದಕ್ಕೂ ಆಹಾರ ಬೇಕಲ್ಲವೆ ಆನೆಗಳಿಗೂ ಆಹಾರ ಕೊಡಿ ಇನ್ನು ಅರಣ್ಯ ಸಚಿವರು ಈಶ್ವರ ಖಂಡ್ರೆ ಎರಡು ಬಾರಿ ಭೇಟಿ ನೀಡಿ ಶಾಶ್ವತ ಪರಿಹಾರ ನೀಡುತ್ತೇವೆ ಆನೆಗಳ ಸ್ಥಳಾಂತರಕ್ಕೆ ಎಂದು ಹೇಳಿ ಹೋಗಿದ್ದು, ಇದುವರೆಗೆ ಈ ವಿಚಾರ ಇಲ್ಲಿಗೆ ಬಂದು ಹೇಳಿ ಅಲ್ಲಿ ಮರೆತಿದ್ದು ಯಾವ ಕೆಲಸವೂ ಮಾಡಿಲ್ಲದೇ ಕಣ್ಣೊರೆಸುವ ತಂತ್ರ ಚೆನ್ನಾಗಿ ಮಾಡುತ್ತಿದ್ದಾರೆ. ಸದನದಲ್ಲಿ ಆನೆ ಕಾರಿಡಾರ್‌ಗೆ ಎಂದು ಇಂತಿಷ್ಟು ಹಣ ಬಿಡುಗಡೆ ಮಾಡಿದ್ದರೂ ಇದುವರೆಗೂ ಯಾವ ಹಣಕೂಡ ಬಜೆಟ್‌ನಿಂದ ಬಂದಿಲ್ಲ. ಇಡೀ ಜಿಲ್ಲೆಯಲ್ಲಿ ಬೇಲೂರು ಸಕಲೇಶಪುರ ಭಾಗದಲ್ಲಿ ಅತಿ ಹೆಚ್ಚು ಆನೆಗಳಿದ್ದು ಸುಮಾರು ೭ ಜನರನ್ನು ಆನೆ ಬಲಿ ಪಡೆದಿದೆ. ಸರ್ಕಾರ ಸಾಮಾನ್ಯ ಜನರ ಕೂಲಿ ಕಾರ್ಮಿಕರ ಪ್ರಾಣ ತೆಗೆಯುವ ಕೆಲಸ ಮಾಡುತ್ತಿದೆ.ಆನೆಗಳ ಸ್ಥಳಾಂತರಕ್ಕೆ ಇಲ್ಲಿವರೆಗೂ ಯಾವ ಕೆಲಸ ಸರಿಯಾಗಿ ನಡೆದಿಲ್ಲ. ಪ್ರಾಣ ಹಾನಿ ಬೆಳೆ ಹಾನಿ ಅಲ್ಲದೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ.ತಮ್ಮ ದೈನಂದಿನ ಜೀವನ ಸಾಗಿಸಲು ರೈತರು ಕೂಲಿಕಾರ್ಮಿಕರು ಜೀವ ಕೈಯಲ್ಲಿಟ್ಟು ಕೆಲಸಕ್ಕೆ ಬರಬೇಕಾಗಿದ್ದು ಇನ್ನೆಷ್ಟು ಜೀವಹಾನಿಯಾಗಬೇಕು. ಕೇವಲ ಪರಿಹಾರ ಚೆಕ್ ವಿತರಿಸಿ ಸಾಂತ್ವನ ಹೇಳುವುದು ಬಿಟ್ಟು ಅವುಗಳನ್ನು ಸ್ಥಳಾಂತರಕ್ಕೆ ಸರ್ಕಾರ ವಿಫಲವಾಗಿದೆ. ಕೂಡಲೇ ಆನೆಗಳ ಧಾಮ ಮಾಡುವುದಲ್ಲದೆ ಅವುಗಳಿಗೆ ಸರಿಯಾದ ಆಹಾರ ಒದಗಿಸಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

PREV

Recommended Stories

ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ನಿಂದ ರಸಪ್ರಶ್ನೆ ಸ್ಪರ್ಧೆ
ಕುತಂತ್ರ-ಅಸೂಯೆಯಿಂದ ಟನಲ್‌ ರಸ್ತೆಗೆ ಬಿಜೆಪಿ ವಿರೋಧ : ಡಿ.ಕೆ.ಸು