ಎಂ.ಅಫ್ರೋಜ್ ಖಾನ್
ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ)ದ ಮೂಲಕ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ (ಸಮಗ್ರ ಉಪನಗರ ಯೋಜನೆ)ಗೆ ಭೂ ಮಾಲೀಕರಾದ ರೈತರ ವಿರೋಧಕ್ಕಿಂತ ಬೆಂಬಲವೇ ಹೆಚ್ಚಾಗಿರುವಂತೆ ಕಾಣುತ್ತಿದೆ.
ಇದಕ್ಕೆ ಟೌನ್‌ಶಿಪ್‌ಗಾಗಿ ಭೂ ಸ್ವಾಧೀನಕ್ಕೆ ಒಳಪಟ್ಟಿರುವ ಗ್ರಾಮಗಳವಾರು ಭೂ ಮಾಲೀಕರಿಂದ ಸಲ್ಲಿಕೆಯಾಗಿರುವ ಆಕ್ಷೇಪಣೆ ಅರ್ಜಿಗಳು ಕಾರಣ. ಸರಿ ಸುಮಾರು 11 ಸಾವಿರ ರೈತರ ಪೈಕಿ ಕೇವಲ 1132 ಮಂದಿಯಿಂದ ಮಾತ್ರ ಭೂ ಸ್ವಾಧೀನಕ್ಕೆ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.6,389 ಎಕರೆ ಭೂ ಮಾಲೀಕರ ತಕರಾರು ಇಲ್ಲ:ಈಗ ಟೌನ್‌ಶಿಪ್‌ಗಾಗಿ ಒಟ್ಟಾರೆ 9,500 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆದರೀಗ ಭೂಸ್ವಾಧೀನಕ್ಕೆ ಆಕ್ಷೇಪಣೆ ಸಲ್ಲಿಸಿರುವ 1,132 ರೈತರು 2,079 ಎಕರೆ 08 ಗುಂಟೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣ ಇರುವ 583 ರೈತರ 1032 ಎಕರೆ 13 ಗುಂಟೆ ಜಮೀನು ಸೇರಿ ಒಟ್ಟು 1,715 ರೈತರ 3,111 ಎಕರೆ 21 ಗುಂಟೆ ಭೂಮಿ ಮಾತ್ರ ಆಗುತ್ತದೆ. ಅಲ್ಲಿಗೆ ಉಳಿದಂತೆ 6,389 ಎಕರೆ ಭೂಮಿಯ ಮಾಲೀಕರು ಆಕ್ಷೇಪಣೆಯಾಗಲಿ ತಕರಾರು ಅರ್ಜಿಯನ್ನಾಗಲಿ ಸಲ್ಲಿಸಿಯೇ ಇಲ್ಲ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಟೌನ್‌ಶಿಪ್ ಅನ್ನು ವಿರೋಧಿಸುವುದಕ್ಕಿಂತ ಅದನ್ನು ಬೆಂಬಲಿಸುವ ಭೂ ಮಾಲೀಕರಾದ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಂತಿದೆ.
ಬಿಡದಿ ಟೌನ್ ಶಿಪ್ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂ ಮಾಲೀಕರ ಆಕ್ಷೇಪಣೆಗಳ ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರೈತರ ಅನುಕೂಲಕ್ಕಾಗಿ ತನ್ನ ಕಚೇರಿ ಆವರಣದಲ್ಲಿಯೇ ಎರಡು ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಿದೆ.
ಈ ವಿಶೇಷ ಭೂಸ್ವಾಧೀನಾಧಿಕಾರಿಗಳ ನ್ಯಾಯಾಲಯವು ಮೇ 28ರಿಂದ ಕಾರ್ಯಾರಂಭ ಮಾಡಲಿದ್ದು, ಪ್ರತಿ ದಿನ 50 ಮಂದಿ ರೈತರ ಅಕ್ಷೇಪಣಾ ಅರ್ಜಿಗಳ ವಿಚಾರಣೆ ನಡೆಯಲಿದೆ. ಭೂ ಮಾಲೀಕರಾದ ರೈತರು ಗೊತ್ತು ಪಡಿಸಿದ ದಿನಾಂಕದಂದು ಖುದ್ಧಾಗಿ ಅಥವಾ ತಮ್ಮ ವಕೀಲರ ಮೂಲಕವಾಗಲಿ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿದೆ.
ಅಂದಿನಿಂದ ಇಲ್ಲಿವರೆಗೆ ಸುಮಾರು 11 ಸಾವಿರ ರೈತರ ಪೈಕಿ ಕೇವಲ 1132 ರೈತರು ಮಾತ್ರ ಆಕ್ಷೇಪಣೆ ಸಲ್ಲಿಸಿದ್ದಾರೆ. ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ 1987ರ ಪ್ರಕಾರ ಆಕ್ಷೇಪಣೆ ಸಲ್ಲಿಸಿದ 60 ದಿನದೊಳಗೆ ವಿಚಾರಣೆ ನಡೆಸಿ ಸಮಜಾಯಿಷಿ ನೀಡಬೇಕಾಗಿದೆ. ಅಲ್ಲದೆ ಪೂರ್ಣ ವಿಚಾರಣೆಯೂ ವಿಡಿಯೋ ರೆಕಾರ್ಡ್ ಆಗಲಿದ್ದು, ರೈತರ ಹೇಳಿಕೆಯನ್ನು ದಾಖಲಿಸಿ ಅವರ ಒಪ್ಪಿಗೆ ಮೇರೆಗೆಯೇ ಸಹಿ ಪಡೆಯಲಾಗುತ್ತದೆ.
.....ಬಾಕ್ಸ್ .....
ಭೂ ಸ್ವಾಧೀನಕ್ಕೆ ಒಳಪಟ್ಟಿರುವ ಗ್ರಾಮಗಳವಾರು ಒಟ್ಟು 2049 ಅರ್ಜಿಗಳು ಬಂದಿದ್ದು, ಇವರೆಲ್ಲರು 3655 ಎಕರೆ 11 ಗುಂಟೆ ಭೂ ಮಾಲೀಕರಾಗಿದ್ದಾರೆ. ಇದರಲ್ಲಿ 301 ಎಕರೆ 12 ಗುಂಟೆ ಭೂಮಿ ಮಾಲೀಕರಾದ 169 ರೈತರು ಭೂ ಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿ ಅರ್ಜಿ ಸಲ್ಲಿಸಿದರೆ, 2079 ಎಕರೆ 08 ಗುಂಟೆ ಭೂ ಮಾಲೀಕರಾದ 1132 ರೈತರು ಭೂ ಸ್ವಾಧೀನಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ.
-----
ರೈತರು ಸಲ್ಲಿಸಿರುವ ಒಪ್ಪಿಗೆ ಮತ್ತು ಆಕ್ಷೇಪಣೆಗಳ ಅರ್ಜಿ ವಿವರ ಗ್ರಾಮಆಕ್ಷೇಪಣೆಗಳ ಅರ್ಜಿ ಸಂಖ್ಯೆಬೈರಮಂಗಲ559ಕಂಚುಗಾರನಹಳ್ಳಿ215ಕೆ.ಜಿ.ಗೊಲ್ಲರಪಾಳ್ಯ59ಹೊಸೂರು448ಅರಳಾಳುಸಂದ್ರ333ಕೆಂಪಯ್ಯನಪಾಳ್ಯ171ಮಂಡಲಹಳ್ಳಿ12ಬನ್ನಿಗಿರಿ227ವಡೇರಹಳ್ಳಿ25ಒಟ್ಟು2049...ಕೋಟ್ ....ಬಿಡದಿ ಟೌನ್ ಶಿಪ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗುವ ರೈತರ ಭೂಮಿಗೆ ನ್ಯಾಯಯುತ ಬೆಲೆ ಕೊಡಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಕಾನೂನಾತ್ಮಕವಾಗಿ ನಡೆಯುತ್ತಿದೆ. ರೈತರು ವದಂತಿಗಳಿಗೆ ಕಿವಿಗೊಡದೆ ವಿಚಾರಣೆಯಲ್ಲಿ ಭಾಗವಹಿಸಿ ತಮ್ಮ ಹೇಳಿಕೆ ದಾಖಲಿಸಬಹುದು. ಪ್ರಾಧಿಕಾರ ಸದಾ ರೈತರೊಂದಿಗೆ ಇರಲಿದೆ.
- ಗಾಣಕಲ್ ನಟರಾಜ್ , ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ.----
26ಕೆಆರ್ ಎಂಎನ್ 1,2,3.ಜೆಪಿಜಿ1.ಬಿಡದಿ ಟೌನ್ ಶಿಪ್ ನಕ್ಷೆ
2.ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್3.ಟೌನ್ ಶಿಪ್ ನಿರ್ಮಿಸಲು ಉದ್ದೇಶಿಸಿರುವ ಜಾಗ.