ಮಳೆಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಲು ಕ್ರಮ: ಸಚಿವ ಕೆ.ವೆಂಕಟೇಶ್‌

KannadaprabhaNewsNetwork |  
Published : Aug 17, 2024, 12:49 AM IST
54 | Kannada Prabha

ಸಾರಾಂಶ

ನೀರು ಬಿಡಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ತಾಲೂಕಿನಲ್ಲಿ ಸೋಲಿಗರಿಗೆ ಹಾಗೂ ಗಿರಿಜನರಿಗೆ 250 ಮನೆಗಳ ಅಂದಾಜುಪಟಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಮಂಜೂರು ಮಾಡಿಸಲಾಗುವುದು ತಾಲೂಕಿನಲ್ಲಿ ನೆಲಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರವೇ ಕೈಗೊತ್ತಿಕೊಂಡು ಪೂರ್ಣ ಗೊಳಿಸುತ್ತೇವೆ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಈ ಬಾರಿ ಅತಿವೃಷ್ಟಿ ಮಳೆಯಿಂದಾಗಿ ರೈತರು ಬೆಳೆದ ಬೆಳೆ ಹಾಳಾಗಿದ್ದು, ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ರಸ್ತೆಗಳು ಹಾಳಾಗಿದ್ದು ಮಳೆ ಪರಿಹಾರ ನಿಧಿಯಿಂದ ರಸ್ತೆಗಳನ್ನು ಸರಿಪಡಿಸಲಾಗುವುದು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಗ್ರಾಮಗಳಿಗೆ ಬಹುಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ, ಕೆರೆಯ ಅಭಿವೃದ್ಧಿ ಕಾರ್ಯಕ್ರಮ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕಿನ ನಾಲೆಗಳಲ್ಲಿ ನೀರು ಬಿಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಹೂಳು ತೆಗೆಯಲು ಕ್ರಮ ಮಳೆಗಾಲದಲ್ಲಿ ನೀರು ಬಿಡದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ನೀರು ಬಿಡಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ತಾಲೂಕಿನಲ್ಲಿ ಸೋಲಿಗರಿಗೆ ಹಾಗೂ ಗಿರಿಜನರಿಗೆ 250 ಮನೆಗಳ ಅಂದಾಜುಪಟಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಮಂಜೂರು ಮಾಡಿಸಲಾಗುವುದು ತಾಲೂಕಿನಲ್ಲಿ ನೆಲಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರವೇ ಕೈಗೊತ್ತಿಕೊಂಡು ಪೂರ್ಣ ಗೊಳಿಸುತ್ತೇವೆ ಎಂದರು.

ಜಮೀನಿನ ಸಂಬಂಧಪಟ್ಟಂತೆ ಮರಡಿಯೂರು ಗ್ರಾಮದಲ್ಲಿ 14 ವರ್ಷ ಕಳೆದರೂ ಕೂಡ ಆ ಕೆಲಸವಾಗದಿರುವುದಕ್ಕೆ ರೆವಿನ್ ಇನ್‌ಸ್ಪೆಕ್ಟರ್‌ ಆನಂದ್ ಅವರಿಗೆ ಉದ್ದೇಶಿಸಿ ಸರ್ಕಾರಿ ಅಧಿಕಾರಿಗಳು ಬಡವರ ಕೆಲಸ ಮಾಡಲಾಗದಿದ್ದರೆ ಮನೆಯಲ್ಲಿ ಇರುವುದೇ ಒಳ್ಳೆಯದು ನಾಚಿಕೆಯಾಗಬೇಕು, ನಿಮಗೆ ನೀವು ರೈತರ ಮಕ್ಕಳಂತೆ ಕಾಣುತ್ತೀರಿ, ಆದರೆ ಬಡ ರೈತರ ಮೇಲೆ ಯಾಕೆ ನಿಮ್ಮ ಪ್ರತಾಪ ತೋರಿಸುತ್ತೀರಿ ಉಳ್ಳವರ ಕೆಲಸಗಳು ಬೇಗ ಆಗುತ್ತದೆ, ಆದರೆ ಬಡವರಿಗೆ ಕಚೇರಿಗಳಿಗೆ ಅಲಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಇನ್ನು ಹದಿನೈದು ದಿನದ ಒಳಗಾಗಿ ಕೆಲಸಗಳು ಮಾಡದಿದ್ದರೆ ನಿಮ್ಮ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚಿಕ್ಕ ಕಮರವಳ್ಳಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಹಾಗೂ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು ಪರಿಶೀಲಿಸುವೆ ಎಂದು ಭರವಸೆ ನೀಡಿದರು.

ಹಾರಂಗಿ ಅಧೀಕ್ಷಕ ಎಂಜಿನಿಯರ್ ರಘುಪತಿ, ತಹಸೀಲ್ದಾರ್ ನಿಸರ್ಗ ಪ್ರಿಯ ಪುಟ್ಟಸ್ವಾಮಿ, ಗೋಕುಲ್, ಮಲ್ಲಿಕಾರ್ಜುನ, ವೆಂಕಟೇಶ್, ಶಿವಕುಮಾರ್, ಸಮಾಜ ಕಲ್ಯಾಣ ಅಧಿಕಾರಿ ಚಂದ್ರಶೇಖರ್, ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ, ಕೃಷ್ಣೇಗೌಡ ಆರ್. ಹೊಸಹಳ್ಳಿ, ಇಲಾಖೆ ಸಹಾಯಕ ನಿರ್ದೇಶಕ ಅರಸ್, ವಲಯ ಅರಣ್ಯ ಅಧಿಕಾರಿ ಪದ್ಮಶ್ರೀ, ಪಶು ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ಭೂಮಾಪನ ಇಲಾಖೆ ಸಹ ನಿರ್ದೇಶಕ ಮುನಿಯಪ್ಪ , ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ್, ಮಹೇಂದ್ರ, ಸುಗಂಧರಾಜ, ಶಶಿಕುಮಾರ್, ರಾಜು ಇದ್ದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ