ಚನ್ನಪಟ್ಟಣ ಕಾಡಾನೆ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖೆಯಿಂದ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಕಾಡಾನೆಗಳನ್ನು ಹಿಮ್ಮೆಟ್ಟುವ ಜತೆಗೆ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ತಿಳಿಸಿದರು.
ಬ್ಯಾರಿಕೇಡ್ ನಿರ್ಮಾಣಕ್ಕೆ ಕ್ರಮ:
ರಾಮನಗರ, ತಮಿಳುನಾಡು ಗಡಿಯಲ್ಲಿ ಸುಮಾರು ೩೦ಕ್ಕೂ ಹೆಚ್ಚು ಆನೆಗಳಿದ್ದು ಎಲ್ಲವು ಉಪಟಳಕಾರಿಗಳಲ್ಲ. ಕಾವೇರಿ ವನ್ಯ ಜೀವಿಧಾಮ ಮತ್ತು ಬನ್ನೇರುಘಟ್ಟದ ಕೆಲ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ಮಾಡಿ ಮುಗಿಸಲಾಗಿದೆ. ಬಾಕಿ ಉಳಿದ ಕಾಮಗಾರಿ ಪೂರ್ಣಗೊಂಡಲ್ಲಿ ಆನೆಗಳು ನಾಡಿನತ್ತ ಬರುವುದು ಕಡಿಮೆಯಾಗುವ ಮುಖೇನ ಈ ಸಮಸ್ಯೆಗೆ ಶಾಸ್ವತ ಪರಿಹಾರ ದೊರಕಲಿದೆ. ಇದರೊಟ್ಟಿಗೆ ರೈತರ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವ ಆನೆಗಳನ್ನು ಕಾಡಿಗೆ ಓಡಿಸುವ ಕೆಲಸದ ಜತೆ ಜತೆಗೆ ಸರಕಾರದಿಂದ ಅನುಮತಿ ಸಿಕ್ಕರೆ ಮತ್ತೆ ಆನೆ ಸೆರೆ ಕಾರ್ಯಾಚರಣೆ ಕೈಗೊಳ್ಳುವುದಾಗಿ ತಿಳಿಸಿದರು.ಆರ್‌ಎಪ್‌ಒ ರಾಮಕೃಷ್ಣ ಮಾತನಾಡಿ, ಜಿಲ್ಲೆಯ ಹಲವು ಕಡೆ ದಾಳಿ ನಡೆಸುವ ಆನೆಗಳನ್ನು ಓಡಿಸಲು ನಮ್ಮ ಸಿಬ್ಬಂದಿ ಸಾಕಷ್ಟು ಶ್ರಮಪಡುತ್ತಿದ್ದಾರೆ. ನಮ್ಮಲ್ಲಿ ಲಭ್ಯವಿರುವ ಎಲ್ಲಾ ಸಿಬ್ಬಂದಿ ನಿರತರಾಗಿದ್ದು, ಕೆಲವೊಮ್ಮೆ ಆನೆಗಳನ್ನು ಓಡಿಸುವಾಗ ಈ ರೀತಿ ರೈತರ ಹೊಲಗದ್ದೆಗಳಿಗೆ ನುಗ್ಗಿ ಬೆಳೆನಾಶ ಮಾಡುತ್ತಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ಆದ ಬೆಳೆನಷ್ಟಕ್ಕೂ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿ ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ ಹಾಗೂ ರಾಜ್ಯ ರೈತ ಸಂಘದ ಆಣಿಗೆರೆ ಮಲ್ಲಯ್ಯ ಸೇರಿದಂತೆ ಅನೇಕ ರೈತರು, ಕಾಡಾನೆಗಳ ಹಾವಳಿಯಿಂದ ರೈತರು ಪಡುತ್ತಿರುವ ಬವಣೆ, ಅವುಗಳ ಉಪಟಳದಿಂದ ಆಗುತ್ತಿರುವ ಬೆಳೆನಾಶ ಇದರಿಂದ ರೈತರು ಅನುಭವಿಸುತ್ತರುವ ಸಂಕಟಗಳ ಅಧಿಕಾರಿಗಳ ಗಮನಕ್ಕೆ ತಂದರು.
ಬಾಕ್ಸ್................
ಅರಣ್ಯ ಇಲಾಖೆ ಹಾಗೂ ರೈತರ ಸಭೆಗೆ ರೈತರೊಬ್ಬರು ವಿಷದ ಬಾಟಲಿ ಬಂದಿದ್ದ ಪ್ರಸಂಗ ನಡೆಯಿತು. ತಾಲೂಕಿನ ಮಂಗಾಡಹಳ್ಳಿ ಗ್ರಾಮದ ರೈತ ಪುಟ್ಟಯ್ಯ ಮಾತನಾಡಲು ವೇದಿಕೆ ಬಳಿ ಬಂದ ವೇಳೆ ತನ್ನ ಜೇಬಿನಲ್ಲಿದ್ದ ವಿಷದ ಬಾಟಲನ್ನು ಅಧಿಕಾರಿಗಳ ಮುಂದೆ ಪ್ರದರ್ಶಿಸಿದರು. ಕೊಡಲೇ ಸ್ಥಳದಲ್ಲಿದ್ದ ಯುವಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆತನಿಂದ ವಿಷದ ಬಾಟಲ್ ಕಿತ್ತೆಕೊಂಡು ರೈತನನ್ನು ಕರೆದುಕೊಂಡು ಹೋದರು.
ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಯಿತು.