ಕ್ರಿಯಾಶೀಲತೆ ಬದುಕು ಸಾರ್ಥಕ: ಮುಪ್ಪಿನ ಬಸವಲಿಂಗ ಶ್ರೀ

KannadaprabhaNewsNetwork |  
Published : Aug 25, 2025, 01:00 AM IST
24 ರೋಣ 1. ವಿಜ್ಞಾನ ಶಿಕ್ಷಕ‌ ಸಂಗಮೇಶ ದಿಂಡೂರ ಸೇವಾ ನಿವೃತಿ ಅಂಗವಾಗಿ ಜರುಗಿದ ಇವರ ಸೇವಾ ನಿವೃತ್ತಿ ಪ್ರಯುಕ್ತ ಜರುಗಿದ  ಗುರುವಂದನೆ ಹಾಗೂ ಶಿಷ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಜ್ಙಾನ ಸಂಗಮ ಅಭಿನಂದನಾ ಗ್ರಂಥ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ  ಲೋಕಾರ್ಪನೆ‌ ಮಾಡಿದರು. ಶಾಸಕ ಜಿ.ಎಸ್.ಪಾಟೀಲ ಇತರರಿದ್ದರು. | Kannada Prabha

ಸಾರಾಂಶ

ಬದುಕನ್ನು ಆನಂದಮಯವಾಗಿ, ಸಮಾಜಮುಖಿಯಾಗಿ ಹಾಗೂ ಸದಾ ಕ್ರಿಯಾಶೀಲತೆಯಿಂದ ಸಾಗಿಸಿದಲ್ಲಿ ಮಾತ್ರ ಬದುಕು ಸಾರ್ಥಕ‌ ಮತ್ತು ಸಮಾಜಕ್ಕೆ ಮಾದರಿಯಾಗುವುದು ಎಂದು ಹಾಲಕೆರೆ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ರೋಣ: ಬದುಕನ್ನು ಆನಂದಮಯವಾಗಿ, ಸಮಾಜಮುಖಿಯಾಗಿ ಹಾಗೂ ಸದಾ ಕ್ರಿಯಾಶೀಲತೆಯಿಂದ ಸಾಗಿಸಿದಲ್ಲಿ ಮಾತ್ರ ಬದುಕು ಸಾರ್ಥಕ‌ ಮತ್ತು ಸಮಾಜಕ್ಕೆ ಮಾದರಿಯಾಗುವುದು ಎಂದು ಹಾಲಕೆರೆ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ಪ್ರೀತಿಯ ವಿದ್ಯಾರ್ಥಿ ಸ್ನೇಹಿತರ ಬಳಗ ಹಾಗೂ ದಿಂಡೂರ ಪರಿವಾರ ರೋಣ ಇವರುಗಳ ಸಹಯೋಗದಲ್ಲಿ ವಿಜ್ಞಾನ ‌ಶಿಕ್ಷಕ ಸಂಗಮೇಶ ಈ. ದಿಂಡೂರ ಇವರ ಸೇವಾ ನಿವೃತ್ತಿ ಪ್ರಯುಕ್ತ ಜರುಗಿದ ಗುರುವಂದನೆ ಹಾಗೂ ಶಿಷ್ಯ ಸಂಸ್ಮರಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಜ್ಞಾನ ವ್ಯವಹಾರಿಕವಾಗಿರಬಾರದು. ಗಳಿಸಿದ ಜ್ಞಾನ ಸಮಾಜದ ಏಳ್ಗೆಗೆ ಸದ್ಬಳಕೆಯಾಗಬೇಕು. ಅಂದಾದ ಬದುಕಿನ ಕ್ಷಣಗಳು ಸಂತೋಷಕರವಾಗಿರುವುದರ ಜೊತೆಗೆ ನಾವು ಗಳಿಸಿದ, ವಿದ್ಯೆ ಜ್ಞಾನಕ್ಕೆ ಅರ್ಥ ಬರುವದು. ಈ ದಿಶೆಯಲ್ಲಿ ಬದುಕನ್ನು ಸಾರ್ಥಕ ಪಡಿಸಿಕೊಂಡು, ಅಪಾರ ಶಿಷ್ಯ ಬಳಗ ಹೊಂದಿದ ಶಿಕ್ಷಕ ಸಂಗಮೇಶ ದಿಂಡೂರ ಅವರ ಆದರ್ಶಮಯ ವ್ಯಕ್ತಿತ್ವ‌, ಶಿಕ್ಷಣ ಕ್ಷೇತ್ರಕ್ಕೆ ದಿಂಡೂರ ಗುರುಗಳು ಸಲ್ಲಿಸಿದ ಸೇವೆ ಶ್ಲಾಘನಿಯವಾಗಿದೆ. ತಾನು ಕಲಿಸಿದ ವಿದ್ಯೆ, ಸಂಸ್ಕಾರ ವಿದ್ಯಾರ್ಥಿಗಳು ಬದುಕನ್ನು ಹಸನಾಗಿಸಬೇಕು, ಅವರು ಸನ್ಮಾರ್ಗದತ್ತ ನಡೆಯಬೇಕು ಎಂಬುದು ಶಿಕ್ಷಕರ ಆಶಯವಾಗಿರುತ್ತದೆ. ಅಂತೆಯೇ ಶಿಷ್ಯರು ಗುರುಗಳು ತೋರಿಸಿದ ಸನ್ಮಾರ್ಗದತ್ತ ನಡೆದು ಬದುಕನ್ನು ಸುಂದರವಾಗಿ ರೂಪಿಸಿಕೊಂಡು, ಸಮಾಜ ಸಂಪನ್ಮೂಲ ವ್ಯಕ್ತಿಯಾಗಿ ಬೆಳೆಯಬೇಕು. ಅದುವೇ ಶಿಕ್ಷಕರಿಗೆ ಶಿಷ್ಯ ನೀಡುವ ಕಾಣಿಯಾಗಲಿದೆ ಎಂದರು.

ಶಾಸಕ‌ ಜಿ.ಎಸ್. ಪಾಟೀಲ ಮಾತನಾಡಿ, ಉತ್ತಮವಾದ ,ಆದರ್ಶ ಶಿಕ್ಷಕರನ್ನು ಮಾದರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳು ಬೆಳೆಯುತ್ತಾರೆ.‌ ವಿದ್ಯಾರ್ಥಿಗಳ ಬೆಳವಣಿಗೆಯನ್ನು ನೋಡಿ ಶಿಕ್ಷಕನಿಗೆ ಸಂತಸವಾಗುವದು. ಅಂತಹ ಬಾಂಧವ್ಯ ಗುರು- ವಿದ್ಯಾರ್ಥಿಗಳ ಮಧ್ಯೆ ಇರಬೇಕು. ಅಂತಹ ಶಿಕ್ಷಕ ಯಾವಾಗಲೂ ಶಿಷ್ಯನ ಮನಸ್ಸಿನಲ್ಲಿರುತ್ತಾನೆ. ಈ ದಿಶೆಯಲ್ಲಿ ಶಿಕ್ಷಕ ಸಂಗಮೇಶ ದಿಂಡೂರ ಅವರ ವ್ಯಕ್ತಿತ್ವ , ಅವರು ನಡೆದು ಬಂದಿರುವ ಹಾದಿ ಶ್ಲಾಘನಿಯವಾಗಿದೆ ಎಂದರು.

ಜ್ಞಾನ ಸಂಗಮ ಅಭಿನಂದನಾ ಗ್ರಂಥವನ್ನು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಲೋಕಾರ್ಪಣೆ ಮಾಡಿ ಮಾತನಾಡಿ, ಸಮಾಜದಲ್ಲಿ ವ್ಯಕ್ತಿಗೆ ಸಲ್ಲುವ ಗೌರವಗಳು, ಸನ್ಮಾನ, ಬಿರುದುಗಳು ‌ನೋಡಿದಾಗ ಅವನಿಗೆ ನೀಡಿದ ಸಂಸ್ಕಾರಯುತ ಶಿಕ್ಷಣ, ಶಿಕ್ಷಕರ ಶ್ರಮ ಸಾರ್ಥಕವಾಗುವದು. ಉತ್ತಮವಾದ ಶಿಕ್ಷಕರನ್ನು ವಿದ್ಯಾರ್ಥಿಗಳು, ಸಮಾಜ ಸದಾ ಸ್ಮರಿಸುತ್ತಾರೆ ಎಂದರು.

ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಕೊತಬಾಳ ಅಡವಿಸಿದ್ದೇಶ್ವರ ಮಠದ ಗಂಗಾಧರ ಸ್ವಾಮೀಜಿ, ಸೈಯದ್ ಸುಲೇಮಾನ ಶಾವಲಿ ದರಾಗಾದ ಅಜ್ಜನವರು ವಹಿಸಿದ್ದರು.

ಕೊತಬಾಳ ಗ್ರಾಮದ ಕಲಾ ತಂಡದಿಂದ ಜನಪದ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಗದಗ ಕೆ.ವಿ.ಎಸ್.ಆರ್ ಪಿಯು‌ ಕಾಲೇಜ್‌ ನಿವೃತ್ತ ಪ್ರಾಚಾರ್ಯ ಅನೀಲ ವೈದ್ಯ ಅವರಿಂದ ವಿಶೇಷ ಉಪನ್ಯಾಸ ಜರುಗಿತು. ಕಾರ್ಯಕ್ರಮದಲ್ಲಿ ರವೀಂದ್ರನಾಥ ದೊಡ್ಡಮೇಟಿ, ಬಿ.ವ್ಹಿ. ಪಾಟೀಲ, ಲಿಂಗರಾಜ ಸೋಮನಗೌಡ್ರ, ಶಿವಣ್ಣ ಪಲ್ಲೇದ, ರುದ್ರಗೌಡ ಗಿರಡ್ಡಿ, ಪ್ರಾಚಾರ್ಯ ಡಾ. ರಾಘವೇಂದ್ರ ತದ್ದೇವಾಡಿ, ಶೈಲಾ ದಿಂಡೂರ, ಜಗದೀಶ ಕರಡಿ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ವ್ಹಿ. ಕಳಸದ ಮುಂತಾದವರು ಉಪಸ್ಥಿತರಿದ್ದರು. ಎಸ್.ಎನ್. ಹುಲಗೇರಿ ಸ್ವಾಗತಿಸಿದರು. ಶಿಕ್ಷಕ ಹೊನಿಕೇರಪ್ಪ ಕಟ್ಟಿಮನಿ ನಿರೂಪಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ