ಕಳಸಾ-ಬಂಡೂರಿ‌ ಯೋಜನೆಗೆ ನಟ ಹೆಬ್ಳಿಕರ್ ವಿರೋಧ: ತೀವ್ರ ಖಂಡನೆ

KannadaprabhaNewsNetwork |  
Published : Jun 05, 2025, 03:05 AM IST

ಸಾರಾಂಶ

ಕಳಸಾ- ಬಂಡೂರಿಗಾಗಿ ಕಳೆದ 4 ದಶಕಗಳಿಂದ ಹೋರಾಟ ನಡೆಯುತ್ತಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಕುಡಿಯುವ ನೀರು ಮತ್ತು ವಿಶೇಷವಾಗಿ ನೀರಾವರಿ ಯೋಜನೆಯಾಗಿದೆ. ರೈತರು ಇದಕ್ಕಾಗಿ ಒತ್ತಾಯಿಸಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೀಗ ಪರಿಸರದ ನೆಪವೊಡ್ಡಿ ನಟ ಸುರೇಶ ಹೆಬ್ಳಿಕರ್ ಗೋವಾ ರಾಜ್ಯದ ಏಜೆಂಟರಂತೆ ವರ್ತಿಸುತ್ತಿದ್ದು, ಹೆಬ್ಳಿಕರ್ ಅವರು ಕೂಡಲೇ ಕ್ಷಮೆ ಯಾಚಿಸಬೇಕು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಉತ್ತರ ಕರ್ನಾಟಕ ಜನರ ಹಾಗೂ ರೈತರ ಮಹತ್ವದ ಯೋಜನೆಯಾಗಿರುವ, ಕಳಸಾ- ಬಂಡೂರಿ ನಾಲೆ ತಿರುವು ಯೋಜನೆಗೆ ವಿರೋಧಿಸಿ ಜೂನ್ 3ರಂದು ಚಿತ್ರನಟ ಸುರೇಶ್ ಹೆಬ್ಬಳ್ಳಿಕರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಹೋರಾಟವನ್ನು ಕಳಸಾ-ಬಂಡೂರಿ ಹಾಗೂ ಮಲಪ್ರಭಾ ನದಿ ಜೋಡಣೆ ಹೋರಾಟ ಸಮಿತಿಯು ತೀವ್ರವಾಗಿ ಖಂಡಿಸಿದೆ.ಈ ಕುರಿತು ಪ್ರಕಟಣೆ‌ ನೀಡಿರುವ ಸಮಿತಿಯ ಮುಖಂಡರು, ಕಳಸಾ- ಬಂಡೂರಿಗಾಗಿ ಕಳೆದ 4 ದಶಕಗಳಿಂದ ಹೋರಾಟ ನಡೆಯುತ್ತಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಕುಡಿಯುವ ನೀರು ಮತ್ತು ವಿಶೇಷವಾಗಿ ನೀರಾವರಿ ಯೋಜನೆಯಾಗಿದೆ. ರೈತರು ಇದಕ್ಕಾಗಿ ಒತ್ತಾಯಿಸಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೀಗ ಪರಿಸರದ ನೆಪವೊಡ್ಡಿ ನಟ ಸುರೇಶ ಹೆಬ್ಳಿಕರ್ ಗೋವಾ ರಾಜ್ಯದ ಏಜೆಂಟರಂತೆ ವರ್ತಿಸುತ್ತಿದ್ದು, ಹೆಬ್ಳಿಕರ್ ಅವರು ಕೂಡಲೇ ಕ್ಷಮೆ ಯಾಚಿಸಬೇಕು ಮತ್ತು ಈ ಹೋರಾಟವನ್ನು ತಕ್ಷಣ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.ಹೋರಾಟ ಸಮಿತಿಯ ಪದಾಧಿಕಾರಿಗಳಾದ ಬಾಬಾಜಾನ್ ಮುಧೋಳ, ಬಿ.ಎಂ. ಹನಸಿ, ರಾಜಶೇಖರ್ ಮೆಣಸಿನಕಾಯಿ, ಉಳುವಪ್ಪ ಬೆಳಗೆರೆ ಮತ್ತು ವಿವಿಧ ರೈತ ಪರ ಸಂಘಟನೆಗಳ ಮುಖಂಡರಾದ ಮರಿಗೌಡರ ಸುರೇಶ ತೋಟಗೇರ, ಕೃಷಿಕ ಸಮಾಜದ ಮುತ್ತಣ್ಣ ಬಾಡಿನ ಸೇರಿದಂತೆ ಮುಂತಾದವರು ಒತ್ತಾಯಿಸಿದ್ದಾರೆ. ಸುರೇಶ ಹೆಬ್ಳಿಕರ್ ದಾರವಾಡದಲ್ಲಿ ಹುಟ್ಟಿ ಬೆಳೆದು,‌ ಇಲ್ಲಿಂದಲೇ ಎತ್ತರಕ್ಕೆ ಬೆಳೆದಿದ್ದು ಈ ಭೂಮಿಯ ಋಣ ತೀರಿಸಬೇಕು.‌ ಅದನ್ನು ಬಿಟ್ಟು ಇಂತಹ ಹೋರಾಟ ಮಾಡುವುದು ಸರಿಯಲ್ಲ.‌ ಮುಂಬರುವ ದಿನಗಳಲ್ಲಿ ಕಳಸಾ ಬಂಡೂರಿ ನಾಲೆಯ ತಿರುವು ಪರ ಹೋರಾಟಗಳಲ್ಲಿ ಭಾಗವಹಿಸದೇ ಇದ್ದಲ್ಲಿ ಹಾಗೂ ಇನ್ಮುಂದೆ ಯೋಜನೆ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡರೇ ಸಮಿತಿಯಿಂದ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಇಂತಹ ನಾಟಕೀಯ ಪರಿಸರವಾದಿಗಳ ಹೋರಾಟಕ್ಕೆ ಕೈಜೋಡಿಸದಂತೆ ರಾಜ್ಯದ ಮಠಾಧೀಶರಿಗೆ ಸಮಿತಿ ವಿನಂತಿಸಿದೆ.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ