ಗಾಯತ್ರಿ ಚಿತ್ರಮಂದಿರಕ್ಕೆ ನಟ ರಿಷಬ್‌ ಶೆಟ್ಟಿ ಭೇಟಿ

KannadaprabhaNewsNetwork |  
Published : Oct 17, 2025, 01:00 AM IST
6 | Kannada Prabha

ಸಾರಾಂಶ

ಇಡೀ ಚಿತ್ರತಂಡ ಮೂರು ವರ್ಷದ ಕಷ್ಟ. ಟೀ ಕಾಫಿ‌‌ಕೊಡುವ ಹುಡುಗರಿಂದ ಎಲ್ಲರ ಶ್ರಮ ಹಾಕಿದ್ದಾರೆ. ಕಲಾವಿದರಾಗಿ ನಾವು ಇದನ್ನ ತುಂಬಾ ಎಂಜಾಯ್ ಮಾಡಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರುಕಾಂತಾರ ಚಾಪ್ಟರ್ 1ರ ಯಶಸ್ಸಿನ ಹಿನ್ನೆಲೆಯಲ್ಲಿ ನಟ ರಿಷಬ್ ಶೆಟ್ಟಿ ಗುರುವಾರ ನಗರದ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಸಂಭ್ರಮ ನೋಡಿ ಖುಷಿಪಟ್ಟರು.ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ಡಿವೈನ್ ಸ್ಟಾರ್ ನಟ ರಿಷಬ್ ಶೆಟ್ಟಿ ಅವರನ್ನು ಚಿತ್ರಮಂದಿರದ ಮಾಲೀಕ ರಾಜಾರಾಂ ಆತ್ಮಯೀವಾಗಿ ಸ್ವಾಗತಿಸಿದರು. ಅಭಿಮಾನಿಗಳ ಜೊತೆ ಮಾತನಾಡಿದರು. ನಮ್ಮನ್ನ ನೋಡಲಿಕ್ಕೆ ನೀವು ಬರಬಹುದು. ನಿಮ್ಮನ್ನ ನೋಡಲಿಕ್ಕೆ ನಾವು ಬರಬಾರದಾ? ಎಂದು ಕಾಂತಾರ ಡೈಲಾಗ್ ಹೊಡೆದು ರಂಜಿಸಿದರು.ಬಳಿಕ ಮಾತನಾಡಿದ ಅವರು, ಇಡೀ ಚಿತ್ರತಂಡ ಮೂರು ವರ್ಷದ ಕಷ್ಟ. ಟೀ ಕಾಫಿ‌‌ಕೊಡುವ ಹುಡುಗರಿಂದ ಎಲ್ಲರ ಶ್ರಮ ಹಾಕಿದ್ದಾರೆ. ಕಲಾವಿದರಾಗಿ ನಾವು ಇದನ್ನ ತುಂಬಾ ಎಂಜಾಯ್ ಮಾಡಿದ್ದೇವೆ. ನಾವು ಈ ಕ್ಷಣಗಳನ್ನ ಹೆಚ್ಚು ಸಂಭ್ರಮಪಡುತ್ತೇವೆ. ಹತ್ತಾರು ಅಡೆತಡೆ, ಕಷ್ಟ ನಷ್ಟ ಮೀರಿ ಒಂದು ಹಂತ ತಲುಪಿದ್ದೇವೆ. ಒಂದು ದೈವದ ಚಿತ್ರ ಹೇಳುವಾಗ ಪರೀಕ್ಷೆ ಸಹಜ. ಅಣ್ಣಾವ್ರು ಹೇಳ್ತಿದ್ರು ಅಭಿಮಾನಿಗಳನ್ನ ತಲುಪುವುದು ಕಷ್ಟ ಅಂತ. ಅದರಂತೆ ನಾವು ಏಳು‌ಬೀಳು ದಾಟಿ ಅಭಿಮಾನಿಗಳ ಆಶೀರ್ವಾದ ನೋಡ್ತಿದ್ದೇವೆ ಎಂದರು.ದೈವಗಳನ್ನ ಅಣಕಿಸುವ ಕೆಲಸ ಆಗುತ್ತಿದೆ. ಕೆಲವು ಸೋಶಿಯಲ್ ಮೀಡಿಯಾಗಳು ಮಾಡುತ್ತಿದ್ದಾರೆ. ಪದೇ ಪದೇ ಅವರ ಬಳಿ ಮನವಿ ಮಾಡುತ್ತಿದ್ದೇವೆ. ಇದು ಮನೋರಂಜನೆ ಮೀರಿ ದೈವದ ಬಗ್ಗೆ ಹೇಳುವ ಸಿನಿಮ. ನಮ್ಮಲ್ಲಿ‌ಕೋಲ ಹೇಗೆ ನಡೆಯುತ್ತದೆಯೋ ಹಾಗೆ ದೇವರನ್ನ ಭಕ್ತಿಯಿಂದ ಪೂಜಿಸಿದ್ದೇವೆ. ನಮ್ಮ ಮನೆಯಲ್ಲೂ ದೈವ ಸ್ಥಾನವಿದೆ. ನಾನು ಕೂಡ ದೈವರಾಧಕ. ಅದನ್ನ ನಂಬುವವರಿಗೆ ಹರ್ಟ್ ಆಗುತ್ತಿದೆ. ಕನ್ನಡ ಪ್ರೇಕ್ಷಕರು ಎಂದೂ ಕೈಬಿಟ್ಟಿಲ್ಲ. ಕನ್ನಡಿಗರು ಒಂದು‌ಒಳ್ಳೆ ಸಿನಿಮಾ ಮಾಡಿದರೆ ನಾವು ಬರ್ತೀವಿ ಅಂತಾರೆ. ಅದೇ ರೀತಿ ಕಾಂತಾರ ಚಿತ್ರವನ್ನ ಗೆಲ್ಲಿಸಿಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

PREV

Recommended Stories

ಆರೆಸ್ಸೆಸ್‌ ವಿಚಾರಕ್ಕೆ ಪ್ರಿಯಾಂಕ್‌ಗೆ ಬೆದರಿಕೆ ಕರೆ ಮಾಡಿದ್ದವನ ಬಂಧನ
2,350 ಕೋಟಿ ವೆಚ್ಚದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಒಪ್ಪಿಗೆ