ಕನ್ನಡಪ್ರಭ ವಾರ್ತೆ ಕುಂದಾಪುರ
ನಾನು ಓದಿದ, ಆಟವಾಡಿದ ಶಾಲೆಯಲ್ಲೇ ಮತದಾನ ಮಾಡಿರುವ ಬಗ್ಗೆ ಖುಷಿ ಇದೆ. ಶಾಲೆಯನ್ನು ದತ್ತು ಸ್ವೀಕರಿಸಲಾಗಿದ್ದು, ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಕ್ರೀಡಾಂಗಣವನ್ನು ವಿಸ್ತಾರ ಮಾಡಲಾಗಿದೆ. ಚುನಾವಣೆಗಳು ಪ್ರಾರಂಭವಾಗಿದ್ದರಿಂದಾಗಿ ಪೂರ್ತಿ ಕೆಲಸ ಮಾಡಲು ಆಗಲಿಲ್ಲ. ಕಟ್ಟಡ, ಪೀಠೋಪಕರಣ ಸೇರಿದಂತೆ ಶಾಲೆಯ ಅಭಿವೃದ್ಧಿಗಾಗಿ ಇನ್ನಷ್ಟು ಕೆಲಸಗಳು ಆಗಬೇಕಾಗಿದೆ ಇದಕ್ಕಾಗಿ ಇಡೀ ತಂಡ ಕೆಲಸ ಮಾಡಲಿದೆ ಎಂದರು.
ಇತ್ತೀಚೆಗಷ್ಟೇ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡಿರುವ ರಿಷಭ್, ಶಾಲೆಯ ಅಭಿವೃದ್ಧಿಗಾಗಿ ನೀಲ ನಕಾಶೆಯನ್ನು ತಯಾರಿಸಿಕೊಂಡಿದ್ದಾರೆ. ಇದೇ ಶಾಲೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 135 ಆಗಮಿಸಿದ ಅವರು ಖುಷಿಯಿಂದ ಮತದಾನ ಮಾಡಿ ಊರ ಅಭಿಮಾನಿಗಳೊಂದಿಗೆ ಮತದಾನದ ಸಂತೋಷವನ್ನು ಹಂಚಿಕೊಂಡರು.* ಅಂದುಕೊಂಡಂತೆ ಕಾಂತಾರ-2 ಚಿತ್ರೀಕರಣ
ಜನರು ಪ್ರೀತಿಯಿಂದ ಬೆನ್ನುತಟ್ಟಿ ಕಾಂತಾರವನ್ನು ಗೆಲ್ಲಿಸಿದ್ದಾರೆ ಹಾಗಾಗಿ ಬಾಯಿಯಲ್ಲಿ ಏನು ಹೇಳಲ್ಲ, ಕೆಲಸ ಮಾಡಿ ತೋರಿಸಬೇಕು ಎನ್ನುವ ಸಂಕಲ್ಪ ಮಾಡಿದ್ದೇನೆ. ಸಿನಿಮಾ ಮಾಡುವಾಗ ಯಾರ ಒತ್ತಡವೂ ಇಲ್ಲ. ಹಿಂದೆ ಕಾಂತಾರವೂ ನನಗೆ ದೊಡ್ಡ ಸಿನಿಮಾ ಆಗಿತ್ತು, ಇದು ಕೂಡ ದೊಡ್ಡ ಸಿನಿಮಾವೇ ಆಗಿದೆ. ಪ್ರತಿ ಸಿನಿಮಾವೂ ಹೊಸತನ್ನು ಕಲಿಸಿ ಕೊಡುತ್ತದೆ, ಸಿನಿಮಾ ಎಂದರೆ ಕಲಿಯುವ ಪ್ರೊಸೆಸ್. ಸಿನಿಮಾಗೋಸ್ಕರ ಒಂದು ವರ್ಷದಿಂದ ಗಡ್ಡ ಹಾಗೂ ಕೂದಲು ಬಿಟ್ಟಿದ್ದೇನೆ. ಚಿತ್ರೀಕರಣ ಮುಗಿಯುವವರೆಗೆ ಬಹಳ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ. ನನ್ನೂರಿನ ಜನರಿಗೂ ಈ ಬಗ್ಗೆ ವಿನಂತಿ ಮಾಡಲಾಗಿದೆ. ಚಿತ್ರೀಕರಣ ಪೂರ್ತಿ ಮುಗಿದ ಮೇಲೆ ಸೆಟ್ ವರ್ಕ್ ಚಿತ್ರೀಕರಣ ಸ್ಥಳಕ್ಕೆ ಕರೆಯುವುದು, ಮಾಧ್ಯಮದವರೊಂದಿಗೆ ಮಾತನಾಡುವುದು ಎಲ್ಲ ಇದ್ದೇ ಇರುತ್ತದೆ. ಚಿತ್ರದ ಕುರಿತು ಅಂತೆ-ಕಂತೆಗಳ ಸುದ್ದಿ ಬಹಳಷ್ಟು ಹರಿದಾಡುತ್ತಿದೆ. ಚಿತ್ರದ ಬಗ್ಗೆ ಜನರಿಗೆ ನಿರೀಕ್ಷೆಯೂ ಹೋಗಬಾರದು ಹಾಗೂ ಕೂತೂಹಲವೂ ಇರಬೇಕು ಎನ್ನುವ ಕಾರಣಕ್ಕಾಗಿ ಚಿತ್ರ ಪ್ರದರ್ಶನಕ್ಕೆ ಬರುವವರೆಗೂ ಕಥೆಯ ಕೂತೂಹಲ ಉಳಿಯಬೇಕು ಎನ್ನುವುದು ನನ್ನ ಅಭಿಪ್ರಾಯ. ಬಹತೇಕ ಕರಾವಳಿ ಭಾಗದಲ್ಲಿ ಪೂರ್ತಿ ಚಿತ್ರೀಕರಣ ಮಾಡುವ ಉದ್ದೇಶ ಇರಿಸಿಕೊಳ್ಳಲಾಗಿದೆ ಎಂದರು.