ಕನ್ನಡಪ್ರಭ ವಾರ್ತೆ ಕಮತಗಿ
ಪಟ್ಟಣದಲ್ಲಿನ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ 13ನೇ ಪೀಠಾಧ್ಯಕ್ಷರಾದ ಹೊಳೆ ಹುಚ್ಚೇಶ್ವರ ಸ್ವಾಮಿಜಿ ಅವರ 25ನೇ ವರ್ಷದ ಪಟ್ಟಾಧಿಕಾರ ರಜತ ಮಹೋತ್ಸವದ ಅಡ್ಡಪಲ್ಲಕ್ಕಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ ಜರುಗಿತು.ಶ್ರೀಮಠದಿಂದ ಆರಂಭಗೊಂಡ ಮೆರವಣಿಗೆ ಬಸ್ ನಿಲ್ದಾಣ, ಕುಂಬಾರ ಓಣಿ, ಬೀರೇಶ್ವರ ದೇವಸ್ಥಾನ, ವಿಠೋಭಾ ದೇವಸ್ಥಾನ, ಮೇನ ಬಜಾರ್, ಬನಶಂಕರಿದೇವಿ ದೇವಸ್ಥಾನ, ಸೇವಾಲಾಲ್ ಶಾಲೆ, ಕೇತೇಶ್ವರ ನಗರ, ಮಡ್ಡಿ ಓಣಿ, ದಾನಮ್ಮ ದೇವಸ್ಥಾನ, ಗಾಂಧಿ ಚೌಕ, ದುರ್ಗಿ ಪೇಟೆ ಮೂಲಕ ಮರಳಿ ಶ್ರೀಮಠಕ್ಕೆ ತಲುಪಿತು. ಅಡ್ಡಪಲ್ಲಕ್ಕಿ ಮೆರವಣಿಗೆ ಉದ್ದಕ್ಕೂ ಸಕಲ ವಾದ್ಯಮೇಳಗಳು, ಜಾನಪದ ಕಲಾತಂಡಗಳ ಜೊತೆಗೆ ಕಮತಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಸಹಸ್ರ ಸಂಖ್ಯೆಯಲ್ಲಿ ಕುಂಭ ಸಹಿತ ಹಾಗೂ ಆರತಿಯೊಂದಿಗೆ ಭಾಗವಹಿಸಿದ್ದರು.
ಸಹಸ್ರಾರು ಭಕ್ತರು: ಪುಷ್ಪಾಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಹುಚ್ಚೇಶ್ವರ ಶ್ರೀಗಳು ಆಸೀನರಾದರು. ಅಡ್ಡಪಲ್ಲಕ್ಕಿ ಮೆರವಣಿಗೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ಈ ಕ್ಷಣಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.ಕುಂದರಗಿ ಅಮರಸಿದ್ದೇಶ್ವರ ಸ್ವಾಮೀಜಿ, ಪಟ್ಟಾಧಿಕಾರ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಪಪಂ ಅಧ್ಯಕ್ಷ ರಮೇಶ ಜಮಖಂಡಿ, ಪಪಂ ಸದಸ್ಯರಾದ ದೇವಿಪ್ರಸಾದ ನಿಂಬಲಗುಂದಿ, ಗುರಲಿಂಗಪ್ಪ ಪಾಟೀಲ, ಚಂದು ಕುರಿ, ಪಟ್ಟಾಧಿಕಾರ ಸಮಿತಿ ಪದಾಧಿಕಾರಿಗಳಾದ ಎಸ್.ಎಸ್. ಮಂಕಣಿ, ಹುಚ್ಚಪ್ಪ ಸಿಂಹಾಸನ, ಅನೀಲ ಹುಚ್ಚೇಶ್ವರಮಠ, ಎನ್.ಎಲ್. ತಹಶೀಲ್ದಾರ, ಮಲ್ಲಪ್ಪ ಮೇದಾರ, ಶ್ರೀಕಾಂತ ಹಾಸಲಕರ, ಯಲ್ಲಪ್ಪ ವಡ್ಡರ, ಸಂಗಮೇಶ ಮನ್ನಿಕೇರಿ, ನಾಗೇಶ ಮುರಾಳ, ಸಿದ್ದು ಹೊಸಮನಿ, ಈರಣ್ಣ ತಿಗಡಿ, ಗಣೇಶ ಕ್ಯಾದಿಗ್ಗೇರಿ, ಮುತ್ತು ಬೆಲ್ಲದ, ಸುರೇಶ ಶಿರಗುಂಪಿ ಸೇರಿದಂತೆ ಕಮತಗಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಇದ್ದರು.