ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಯೋಗ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಜೂ.21ಕ್ಕೆ ‘ಯೋಗ ಫಾರ್ ಸೆಲ್ಫ್ ಆಂಡ್ ಸೊಸೈಟಿ’, ಘೋಷವಾಕ್ಯದಡಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳ್ಳಿಗೆ 6.30 ಕ್ಕೆ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸಾರ್ವಜನಿಕರು ಮತ್ತು ಅಧಿಕಾರಿಗಳು ಸೇರಿದಂತೆ 500 ಜನರು ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಜೂ.21 ರಂದು ಬೆಳಗ್ಗೆ 6.30ಕ್ಕೆ ಎಲ್ಲರೂ ಒಂದೆಡೆ ಸೇರಿ, ಬೆಳಿಗ್ಗೆ 6.45 ರಿಂದ 7 ಗಂಟೆವರೆಗೆ ಯೋಗಗೀತೆ, ಬೆಳಗ್ಗೆ 7 ರಿಂದ 7.45 ರವರೆಗೆ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಯೋಗ ಪ್ರದರ್ಶನ, ಬೆಳಗ್ಗೆ 8 ರಿಂದ 8.30 ರವರೆಗೆ ವೇದಿಕೆ ಕಾರ್ಯಕ್ರಮ. 8.30 ರಿಂದ 9.45 ರವರೆಗೆ ಉಪನ್ಯಾಸ ಮತ್ತು 9.20ಕ್ಕೆ ಉಪಹಾರ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.ಪೊಲೀಸ್ ಇಲಾಖೆಯವರು ಕಾರ್ಯಕ್ರಮ ನಡೆಯುವ ಸ್ಥಳದ ಭದ್ರತೆ, ವಾಹನ ದಟ್ಟಣೆ ನಿರ್ವಹಣೆ, ಹಾಗೂ ಮಹಾನಗರಪಾಲಿಕೆ ವತಿಯಿಂದ ಕುಡಿಯುವ ನೀರು ಸ್ವಚ್ಚತಾ ವ್ಯವಸ್ಥೆ ಮತ್ತು ಮಾಹಿತಿ ಫಲಕ ಹಾಕಲು ಸಹಕರಿಸಬೇಕು. ಆಯುರ್ವೇದ ಮಹಾವಿದ್ಯಾಲಯ ಹಾಗೂ ಡಿಡಿಪಿಯು ಅವರು ವಿದ್ಯಾರ್ಥಿಗಳನ್ನು ಕಾರ್ಯ ಕ್ರಮಕ್ಕೆ ಕರೆ ತರಬೇಕು. ಹಾಗೂ ಯೋಗ ದಿನಾಚರಣೆಗೆ ಅಗತ್ಯವಾದ ಇತರೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಡಿ.ಎಚ್.ಒ ಡಾ.ನಟರಾಜ್, ಡಿಡಿಪಿಯು ಕೃಷ್ಣಪ್ಪ, ಪೋಲಿಸ್ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿ ಗಳು, ಸಿಬ್ಬಂದಿ ಹಾಜರಿದ್ದರು.