ಕನ್ನಡಪ್ರಭ ವಾರ್ತೆ ಕೆಜಿಎಫ್ ರಾಜ್ಯದಲ್ಲಿ ರೆಡ್ಡಿ ಸಮುದಾಯವು ೬೦ ಲಕ್ಷ ಜನ ಸಂಖ್ಯೆಯಿದ್ದು ನಮ್ಮ ಸಮುದಾಯವು ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ತೀರ ಹಿಂದುಳಿದಿದೆ. ಕಾಂಗ್ರೆಸ್ ಸರ್ಕಾರ ನಮ್ಮ ಸಮುದಾಯವನ್ನು ಒಬಿಸಿ ವರ್ಗದಲ್ಲಿ ಮುಂದುವರೆಸದಿದ್ದರೆ ಹಿರಿಯರ ಮಾರ್ಗದರ್ಶನ ಪಡೆದು ರಾಜ್ಯದಲ್ಲಿ ಹೋರಾಟ ಆರಂಭಿಸುವುದಾಗಿ ರಾಜ್ಯ ರೆಡ್ಡಿ ಜನಸಂಘದ ಸಂಘಟನಾ ಅಧ್ಯಕ್ಷ ಫ್ರಭಾಕರ್ ರೆಡ್ಡಿ ಹೇಳಿದರು.ನಗರದ ವೇಮನ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ರೆಡ್ಡಿ ಜನ ಸಂಘದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳ ಆಯ್ಕೆಪಟ್ಟಿ ಪ್ರಕಟಿಸಿ ಮಾತನಾಡಿ, ಆಳುವ ಸರ್ಕಾರಗಳಿಗೆ ನಮ್ಮ ಶಕ್ತಿ ಪ್ರದರ್ಶನ ಮಾಡಿದಾಗ ಮಾತ್ರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಾರೆ ಎಂಬುದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು ಎಂದರು.
ಒಬಿಸಿಯಿಂದ ಜನಾಂಗ ಹೊರಕ್ಕೆನಮ್ಮ ಸಮುದಾಯವನ್ನು ಒಬಿಸಿಯಲ್ಲಿ ಇದ್ದಂತಹ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು ಇದೀಗ ನಮ್ಮ ಸಮುದಾಯವನ್ನು ಒಬಿಸಿಯಿಂದ ಹೊರಗಿಟ್ಟಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ರೆಡ್ಡಿ ಸಮುದಾಯವು ೩೦ ಸಾವಿರದಿಂದ ೪೦ ಸಾವಿರ ಜನಸಂಖ್ಯೆ ಇದ್ದರು ಸಹ ಯಾವುದೇ ಶಾಸಕರು ನಮ್ಮ ಜನಾಂಗದ ಅಭಿವೃದ್ದಿಗೆ ಪೂರಕವಾದ ಕೆಲಸಗಳನ್ನು ಮಾಡಿಲ್ಲ ಎಂದರು.
ಸಂಘದ ರಾಜ್ಯ ನಿದೇರ್ಶಕ ಚಂದ್ರರೆಡ್ಡಿ ಮಾತನಾಡಿ, ಇನ್ನು ಮುಂದೆ ನಾವು ಸಹ ನಿಮ್ಮೊಂದಿಗೆ ಸೇರಿ ಹೋರಾಟ ಮಾಡುತ್ತೇವೆ ಎಂದು ಭರವಸೆ ನೀಡಿದರು.ಪದಾಧಿಕಾರಿಗಳ ಆಯ್ಕೆ
ಇದೇ ವೇಳೆ ತಾಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರಾಗಿ ಪ್ರಸನ್ನರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರವಿರೆಡ್ಡಿರವರು ಆಯ್ಕೆಯಾದರು. ರೆಡ್ಡಿ ಜನ ಸಂಘದ ಗೌರವ ಅಧ್ಯಕ್ಷ ವಕೀಲ ಪದ್ಮನಾಬರೆಡ್ಡಿ, ನಿದೇರ್ಶಕಾರಾದ ರಾದಾಕೃಷ್ಣರೆಡ್ಡಿ.ಪ್ರಧಾನ ಕಾರ್ಯದರ್ಶಿ ರವಿರೆಡ್ಡಿ, ನಿಧೇರ್ಶಕರಾದ ರವಿಂದ್ರರೆಡ್ಡಿ, ಶಾಂತರಾಜು,ರಾಜರೆಡ್ಡಿ ಇದ್ದರು.