ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರುವನೂರು ಗ್ರಾಮದಲ್ಲಿ ಸಂಘಟಿ ಹನುಮಂತಪ್ಪನವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ ಒಂದು ವಾರಗಳ ಕಾಲ ಶ್ರಮಪಟ್ಟು ಆಂಜನೇಯಸ್ವಾಮಿ ರೇಖಾಚಿತ್ರವನ್ನು ಬಿಡಿಸಿದ್ದೇವೆ. ಇದಕ್ಕೆ ಜನಾರ್ಧನ್ ಹಾಗೂ ಮೋಹನ್ ಅವರು ಕೈಜೋಡಿಸಿದ್ದು, ಇಷ್ಟು ದೊಡ್ಡದಾದ ರೇಖಾಚಿತ್ರವನ್ನು ಇದುವರೆವಿಗೂ ಯಾರೂ ಬಿಡಿಸಿರಲಿಲ್ಲ ಎಂದರು.
ಮೊದಲು ತರಕಾರಿಯಿಂದ ಆಂಜನೇಯ ಸ್ವಾಮಿಯ ರೇಖಾಚಿತ್ರ ಬಿಡಿಸಬೇಕೆಂದುಕೊಂಡಿದ್ದೆವು. ಅಷ್ಟೊಂದು ಪ್ರಮಾಣದಲ್ಲಿ ತರಕಾರಿಯನ್ನು ಹೊಂದಿಸುವುದು ಕಷ್ಟವಾಗುತ್ತದೆನ್ನುವ ಕಾರಣಕ್ಕೆ ಎಂಸ್ಯಾಂಡ್‍ನಿಂದ ಸಿದ್ಧಪಡಿಸಿರುವ ರೇಖಾಚಿತ್ರವನ್ನು ಸಹಸ್ರಾರು ಭಕ್ತರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮಂಜುನಾಥ ರೆಡ್ಡಿ ಹರ್ಷ ವ್ಯಕ್ತಪಡಿಸಿದರು.ದೇವರ ಸೇವೆ ಅಂದುಕೊಂಡು ಬಿಡಿಸಿರುವ ಇಷ್ಟೊಂದು ದೊಡ್ಡ ಗಾತ್ರದ ಆಂಜನೇಯಸ್ವಾಮಿ ರೇಖಾಚಿತ್ರಕ್ಕೆ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದೊರಕಿರುವುದು ನಮಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಜನಾರ್ಧನ್ ಹಾಗೂ ಮೋಹನ್ ಇದ್ದರು.