ಪಹಣಿಗೆ ಆಧಾರ್‌ ಸಂಖ್ಯೆ ಜೊಡಣೆ ಕಡ್ಡಾಯ

KannadaprabhaNewsNetwork | Updated : May 16 2024, 12:16 PM IST

ಸಾರಾಂಶ

ರೈತ ಬಾಂದವರು ಸರ್ಕಾರದ ನಿರ್ದೇಶನದಂತೆ ರೈತರು ತಮ್ಮ ಜಮೀನಿನ ಪಹಣಿ ಪತ್ರಿಕೆ (ಆರ್.ಟಿ.ಸಿ)ಗಳಿಗೆ ಆಧಾರ ಸಂಖ್ಯೆ ಜೊಡಣೆ ಮಾಡುವದು ಕಡ್ಡಾಯವಾಗಿದೆ ಎಂದು ಚಿತ್ತಾಪುರ ತಹಸೀಲ್ದಾರ ತಿಳಿಸಿದ್ದಾರೆ.

ಚಿತ್ತಾಪುರ :  ತಾಲೂಕಿನ ರೈತ ಬಾಂದವರು ಸರ್ಕಾರದ ನಿರ್ದೇಶನದಂತೆ ರೈತರು ತಮ್ಮ ಜಮೀನಿನ ಪಹಣಿ ಪತ್ರಿಕೆ (ಆರ್.ಟಿ.ಸಿ)ಗಳಿಗೆ ಆಧಾರ ಸಂಖ್ಯೆ ಜೊಡಣೆ ಮಾಡುವದು ಕಡ್ಡಾಯವಾಗಿದೆ ಎಂದು ಚಿತ್ತಾಪುರ ತಹಸೀಲ್ದಾರ ತಿಳಿಸಿದ್ದಾರೆ.

ಸರ್ಕಾರದ ಯಾವುದೇ ಸವಲತ್ತು ಪಡೆಯಬೇಕಾದರೆ ರೈತರು ಅರ್.ಟಿ.ಸಿ ಗೆ ತಮ್ಮ ಆಧಾರ ಕಾರ್ಡ್‌ ಸಂಖ್ಯೆಯನ್ನು ಜೊಡಿಸಬೇಕು ಇದಕ್ಕಾಗಿ ಸರ್ಕಾರದ ಹೊಸ ತಂತ್ರಾಂಶವನ್ನು ಸಿದ್ದಪಡಿಸಿದೆ. ಇದನ್ನು ತಮ್ಮ ಮೊಬೈಲ್ ನಿಂದಲೇ ಮನೆಯಲ್ಲೇ ಕುಳಿತು ಮಾಡಬಹುದು ಅಥವಾ ತಮ್ಮ ಗ್ರಾಮದ ಗ್ರಾಮಸಹಾಯಕ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಕಚೇರಿ ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ಭೆಟ್ಟಿ ನೀಡಿ ಪ್ರಕ್ರೀಯೇ ಪೂರ್ಣಗೊಳಿಸಬಹುದು. ಪಹಣಿ ಪತ್ರಿಕೆ (ಆರ್.ಟಿ.ಸಿ)ಗಳಿಗೆ ಆಧಾರ ಸಂಖ್ಯೆ ಜೊಡಣೆ ಮಾಡಲು ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಅಂತಹ ರೈತರಿಗೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ತೊಂದರೆ ಉಂಟಾಗಲಿದೆ. ಸರ್ಕಾರವು ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲೀಕ್ ಮಾಡ ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿಯನ್ನು ಬಳಸಿ ಮುಂದಿನ ಪ್ರಕ್ರೀಯೆ ಆಧಾರ ಕಾರ್ಡ ಸಂಖ್ಯೆ ನಮೂದಿಸಿ ಆಧಾರಗೆ ಜೊಡಣೆಯಾಗಿರುವ ಮೊಬೈಲ್ ನಂಬರ್‌ಗೆ ಒಟಿಪಿ ಬಂದಿರುದನ್ನು ನಮೂದಿಸಿ ನಂತರ ಪೊಟೊ ಕ್ಲಿಕ್ಕಿಸಿದ ನಂತರ ಪ್ರಕ್ರೀಯೇ ಪೂರ್ಣಗೊಂಡ ನಂತರ ಮೊಬೈಲ್‌ಗೆ ಸಂದೇಶ ಬರುತ್ತದೆ.

ಆರ್.ಟಿ.ಸಿ ಆಧಾರ ಲಿಂಕ್ ಮಾಡಿಕಂಡಿದ್ದಲ್ಲಿ ಪ್ರಯೊಜನಗಳಾದ ಆರ್.ಟಿ.ಸಿ ಗೆ ಆಧಾರ ಲಿಂಕ್ ಮಾಡುವದರಿಂದ ಜಮೀನಿನ ದಾಖಲೆಗಳನ್ನು ಇನಷ್ಟು ಸುರಕ್ಷಿತ ಹಾಗೂ ಭೂ ದಾಖಲೆಗಳನ್ನು ಪಡೆಯುವದು ಸುಲಭ. ಸರ್ಕಾರಿ ಯೊಜನೆಗಳಿಗೆ ಅರ್ಜಿ ಸಲ್ಲಿಕೆ ಸರಳವಾಗುವದು. ಖಾತೆ ವಿವಾದಗಳನ್ನು ತಪ್ಪಿಸಲು ಅನುಕೂಲ. ಸಾಲ ಪ್ರಕ್ರೀಯೆ ಸುಲಭವಾಗಿ ರೈತರು ಪಡೆಯಬಹುದಾಗಿದೆ.

ಆದರಿಂದ ತಾಲೂಕಿನ ಎಲ್ಲಾ ರೈತ ಬಾಂದವರು ಸರ್ಕಾರದ ನಿರ್ದೇಶನದಂತೆ ಆಧಾರ ಸಂಖ್ಯೆಯನ್ನು ಪಹಣಿ ಪತ್ರಿಕೆಯಲ್ಲಿ ಜೊಡಣೆ ಮಾಡುವ ಕಾರ್ಯವನ್ನು ಸ್ವಯಂ ಪ್ರೇರಿತವಾಗಿ ಒಂದು ಆಧಾರ ಸಂಖ್ಯೆ ಜೊಡಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Share this article