ಭೀಮಾ ಕೊರೇಗಾಂವ್ ವಿಜಯೋತ್ಸವ ಸಮಿತಿ ಹಮ್ಮಿಕೊಂಡಿದ್ದ ೮ನೇ ವರ್ಷದ ಭೀಮಾ ಕೋರೆಗಾಂವ್‌ ವಿಜಯೋತ್ಸವ ಉದ್ದೇಶಿಸಿ ಮಾತನಾಡಿ, ಇಂದಿನ ಯುವ ಜನಾಂಗ ಅಂಬೇಡ್ಕರ್ ಪ್ರತಿ ನಡೆನುಡಿಯನ್ನು ತಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳವ ಅಗತ್ಯವಿದೆ. ೨೦೮ ವರ್ಷಗಳ ಹಿಂದೆನಡೆದ ಕೊರೇಗಾಂವ್ ಯುದ್ದ ಅಸ್ಪೃಶ್ಯತೆ ವಿರುದ್ಧ ನಡೆದ ಮೊದಲ ಹೋರಾಟವಾಗಿದೆ. ಬಹುಜನರ ಇತಿಹಾಸವನ್ನು ಬರೆಯದಿರುವುದು ದುರಂತವಾಗಿದೆ. ಶಿಕ್ಷಣದಿಂದ ಮಾತ್ರ ಶೋಷಿತ ಸಮಾಜ ಸುಧಾರಣೆಯಾಗಲಿದೆ ಎಂದು ಪ್ರತಿಪಾದಿಸಿದವರು ಅಂಬೇಡ್ಕರ್ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶುಪುರ

ಶೋಷಿತ ಸಮಾಜ ಎಚ್ಚರಗೊಳ್ಳುವ ಅಗತ್ಯವಿದೆ ಎಂದು ರಾಜ್ಯಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಸಿದ್ದರಾಜು ಹೇಳಿದರು.

ಗುರುವಾರ ಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪ ಭೀಮಾ ಕೊರೇಗಾಂವ್ ವಿಜಯೋತ್ಸವ ಸಮಿತಿ ಹಮ್ಮಿಕೊಂಡಿದ್ದ ೮ನೇ ವರ್ಷದ ಭೀಮಾ ಕೋರೆಗಾಂವ್‌ ವಿಜಯೋತ್ಸವ ಉದ್ದೇಶಿಸಿ ಮಾತನಾಡಿ, ಇಂದಿನ ಯುವ ಜನಾಂಗ ಅಂಬೇಡ್ಕರ್ ಪ್ರತಿ ನಡೆನುಡಿಯನ್ನು ತಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳವ ಅಗತ್ಯವಿದೆ. ೨೦೮ ವರ್ಷಗಳ ಹಿಂದೆನಡೆದ ಕೊರೇಗಾಂವ್ ಯುದ್ದ ಅಸ್ಪೃಶ್ಯತೆ ವಿರುದ್ಧ ನಡೆದ ಮೊದಲ ಹೋರಾಟವಾಗಿದೆ. ಬಹುಜನರ ಇತಿಹಾಸವನ್ನು ಬರೆಯದಿರುವುದು ದುರಂತವಾಗಿದೆ. ಶಿಕ್ಷಣದಿಂದ ಮಾತ್ರ ಶೋಷಿತ ಸಮಾಜ ಸುಧಾರಣೆಯಾಗಲಿದೆ ಎಂದು ಪ್ರತಿಪಾದಿಸಿದವರು ಅಂಬೇಡ್ಕರ್. ಮನುಸ್ಮೃತಿ ಯನ್ನು ತಮ್ಮ ಜೀವನಪೂರ್ಣ ವಿರೋಧಿಸಿದ ಅಂಬೇಡ್ಕರ್ ಮಹಾ ಮಾನವತಾವಾದಿ. ಇಂದು ಶಿಕ್ಷಣವಿಲ್ಲದ ಮನುಷ್ಯ ಪಶುವಿಗೆ ಸಮಾನ. ಆದ್ದರಿಂದ, ಯಾರು ವಿದ್ಯಾಭ್ಯಾಸದಿಂದ ವಂಚಿತರಾಗ ಬೇಡಿ ಎಂದರು. ಇಂದು ಅಂಬೇಡ್ಕರ್ ರಚಿಸಿದ ಸಂವಿದಾನದ ಬದಲಾಗಿ ಮನುಸ್ಮೃತಿಯನ್ನು ಇಡುವ ಕೆಲಸವಾಗುತ್ತಿದೆ ಶೋಷಿತಸಮಾಜ ಈ ಬಗ್ಗೆ ಎಚ್ಚರದಿಂದ ಇರಬೇಕು. ಜಾತಿದೇಶಕ್ಕೆಮಾರಕ ಎನ್ನುವುದಾದರೆ ಜಾತಿ ಅನುಸರಿಸುವ ವ್ಯಕ್ತಿಯು ಸಹ ಅಪಾಯಕಾರಿಯೆ ಅಂತಹ ವ್ಯಕ್ತಿಗಳ ಸಂತತಿ ಇರಬಾರದು. ದಲಿತರ ಜಾಗೃತರಾಗ ಬೇಕಾದರೆ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯ ಬೇಕು ಎಂದರು.

ಲೇಖಕಿ ಅನುಪಮ ಮಾತನಾಡಿ, ಶೋಷಿತ ಸಮಾಜ ಬದಲಾಗಬೇಕಿದೆ. ಇತಿಹಾಸವನ್ನು ಅಗಾಗಬಗೆದು ನೋಡಬೇಕಿದೆ. ಇದರಿಂದ ಮಾತ್ರ ನಾವು ಜಾಗೃತರಾಗಲು ಸಾಧ್ಯ. ಅವಮಾನ ಸಹಿಸದ ವ್ಯಕ್ತಿಗಳು ಮಾತ್ರ ಗೆಲ್ಲಲ್ಲು ಸಾಧ್ಯ. ಇದನ್ನು ನಮಗೆ ಕಲಿಸಿದವರು ಕೊರೇಗಾಂವ್ ಕಲಿಗಳು ಎಂದರು. ಶೋಷಿತ ಸಮಾಜ ಸದಾ ಜಾಗ್ರತರಾಗಿರಬೇಕು. ಅಂಬೇಡ್ಕರ್ ನಿಜವಾದ ಶಾಂತಿವಾದಿ ಇದನ್ನು ಎಲ್ಲಿಯೂ ಯಾರು ಸಹ ಗುರುತಿಸಿಯೇ ಇಲ್ಲ ಎಂದರು.

ವಕೀಲ ಸುಧೀರ್ ಕುಮಾರ್ ಮುರುಡಿ, ಮಾತನಾಡಿ, ಕೋರೆಗಾಂವ್ ವಿಜಯೋತ್ಸವದ ನಂತರ ದಲಿತರಿಗೆ ತಮ್ಮ ತೊಳ್ಬಲದ ಅರಿವಾಗಿದೆ. ನಮ್ಮೊಂದಿಗೆ ಇದ್ದೇ ನಮ್ಮ ವಿರೋಧಿ ಕೆಲಸ ಮಾಡುವವರ ಬಗ್ಗೆ ಎಚ್ಚರವಾಗಿರಬೇಕು. ನಮ್ಮ ಮತಗಳು ಎಂದೂ ವ್ಯರ್ಥವಾಗಬಾರದು. ಶೋಷಿತರ ಮೊದಲ ಗೆಲುವು ಕೋರೆಗಾಂವ್ ಯುದ್ಧ. ಇದನ್ನು ಇತಿಹಾಸದಲ್ಲೇ ದಾಖಲಿಸದಿರುವುದು ಶೋಷಿತ ಸಮಾಜಕ್ಕೆ ಮಾಡಿದ ದ್ರೋಹ. ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡುವವರ ವಿರುದ್ಧ ಎಚ್ಚರವಾಗಿರಿ. ಜಾಗೃತಿ ಮೂಡಿಸುವ ಉದ್ದೇಶದಿಂದ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಮಿನಿವಿಧಾನ ಸೌಧ ಸಮೀಪದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನಡೆಸಿದ ನಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ಕಲಾತಂಡಗಳೊಂದಿಗೆ ಅಂಬೇಡ್ಕರ್ ಬಾವಚಿತ್ರ ಹಾಗೂ ಕೋರೆಗಾಂವ್ ವಿಜಯಸ್ತಂಭದೊಂದಿಗೆ ಮೆರವಣಿಗೆ ನಡೆಸಲಾಯಿತು. ಜಿಪಂ ಮಾಜಿ ಸದಸ್ಯ ಬೈರಮುಡಿ ಚಂದ್ರು, ಕಾಂಗ್ರೆಸ್ ಮುಖಂಡ ಮುರುಳಿಮೋಹನ್, ಸಮಿತಿ ಅಧ್ಯಕ್ಷ ಲಕ್ಷ್ಮಣ್‌ ಕೀರ್ತಿ, ಗೌರವ ಅಧ್ಯಕ್ಷ ನಲ್ಲುಲ್ಲಿ ಈರಪ್ಪ, ಹೆತ್ತೂರು ಅಣ್ಣಯ್ಯ ಮುಂತಾದವರಿದ್ದರು.