ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಕಚೇರಿ ಎದುರು ಕಳೆದ 107 ದಿನಗಳಿಂದಲೂ ನಗರಸಭೆಗೆ ಗ್ರಾಮ ಸೇರ್ಪಡೆ ಕ್ರಮ ಖಂಡಿಸಿ ಸ್ಥಳೀಯ ನಿವಾಸಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ನೀಡಿ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರೊಂದಿಗೆ ಧರಣಿಯಲ್ಲಿ ಪಾಲ್ಗೊಂಡರು.
ಒಪ್ಪಿಗೆ ಇಲ್ಲದೆ ಗ್ರಾಪಂ ಸೇರ್ಪಡೆ ಮಾಡಿರುವ ಕುರಿತು ಸ್ಥಳೀಯರಿಂದ ಅಗತ್ಯ ಮಾಹಿತಿ ಪಡೆದ ಬೊಮ್ಮಯಿ ಮಾತನಾಡಿ, ಯಾವುದೇ ಗ್ರಾಮವನ್ನು ಪುರಸಭೆಗಾಗಲಿ ಅಥವಾ ನಗರಸಭೆಯಾಗಲಿ ಸೇರ್ಪಡೆ ಮಾಡುವುದಕ್ಕೂ ಮುನ್ನ ಅನೇಕ ಕಾನೂನ್ಮಾತಕ ಹಾಗೂ ಸ್ಥಳಿಯ ಮಾರ್ಗಸೂಚಿ ಪಾಲಿಸಬೇಕಾಗುತ್ತದೆ. ಆದರೆ, ಸ್ಥಳೀಯ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಒಪ್ಪಿಗೆ ಪಡೆಯದೆ ಸೇರ್ಪಡೆಗೊಳಿಸಿರುವ ಶಾಸಕರ ತೀರ್ಮಾನ ಸರಿಯಲ್ಲ ಎಂದರು.ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಗೆ ಸೇರ್ಪಡೆಗೊಳಿಸಿರುವ ಸಂಬಂಧ ತಾವು ಸಹ ಮುಖ್ಯಮಂತ್ರಿಗೆ ಪತ್ರ ವ್ಯವಹಾರ ನಡೆಸಿ ಮತ್ತು ಸ್ಥಳೀಯ ಶಾಸಕರೊಟ್ಟಿಗೆ ಚರ್ಚಿಸಿ ಕ್ರಮ ವಹಿಸುವ ಭರವಸೆ ನೀಡಿದರು. ಈ ಯೋಜನೆಯಿಂದ ಹಿಂದೆ ಸರಿದರೆ ಅಭಿನಂದನೆ ಸಲ್ಲಿಸುವುದಾಗಿ ತಪ್ಪಿದಲ್ಲಿ ಕಾನೂನಾತ್ಮಕ ಹೋರಾಟ ಕೈಗೊಳ್ಳಲಾಗುವುದು ಎಂದರು.
ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥರಾಯಣ್ ಮಾತನಾಡಿ, ಕೂಡಲೇ ಪ್ರತಿಭಟನಾಕಾರರ ಬೇಡಿಕೆ ಈಡೇರಿಸುವ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸುವಂತೆ ತಪ್ಪಿದಲ್ಲಿ ಪ್ರತಿಭಟನಾಕಾರರೇ ಸರ್ಕಾರವನ್ನು ಸರ್ವನಾಶ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.