ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮೀಪದ ಅಣ್ಣೂರು, ಮೆಣಸಗೆರೆ, ಬೊಪ್ಪಸಮುದ್ರ, ಹೊನ್ನಾಯಕನಹಳ್ಳಿ, ಪುಟ್ಟೇಗೌಡನದೊಡ್ಡಿ, ಹೆಬ್ಬಕವಾಡಿ ಶಾಖಾ ನಾಲೆಯ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ನಂತರ ರೈತರೊಂದಿಗೆ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿ ಮಾಹಿತಿ ನೀಡಿದರು.
ನಾನು ಕೂಡ ರೈತನ ಮಗ. ರೈತರ ಸಮಸ್ಯೆಗಳು, ಕಷ್ಟಗಳು ನನಗೂ ತಿಳಿದಿದೆ. ಈ ಹಿಂದೆ ರೈತರ ಜಮೀನುಗಳಿಗೆ ನೀರು ಸರಿಯಾಗಿ ಹರಿಯದೆ ಸಾಕಷ್ಟು ತೊಂದರೆ, ನಷ್ಟ ಅನುಭವಿಸುತ್ತಿದ್ದರು. ಇದನ್ನು ತಿಳಿದು ನೀರಿನ ಸಮಸ್ಯೆ ನಿವಾರಿಸಲು, ಕೊನೆ ಭಾಗದ ಜಮೀನುಗಳಿಗೆ ಸರಾಗವಾಗಿ ನೀರು ಹರಿಯುವಂತೆ ಮಾಡಲು ನಾಲಾ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.ಸರ್ಕಾರದಿಂದ ಸಾವಿರಾರು ಕೋಟಿ ರು. ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದೇನೆ. ನಾಲಾ ಕಾಮಗಾರಿಗೂ ಚಾಲನೆ ನೀಡಲಾಗಿದೆ. ರೈತರು ಯಾವುದೇ ರಾಜಕೀಯ ಮಾಡದೆ, ವಿರೋಧಿಗಳ ಮಾತಿಗೆ ಕಿವಿಗೊಡದೆ ಅಭಿವೃದ್ಧಿಗೆ ಕೈಗೂಡಿಸಬೇಕು ಎಂದು ಮನವಿ ಮಾಡಿದರು.
ತಾಲೂಕಿಗೆ ಬೇಕಾದ ಯೋಜನೆಗಳನ್ನು ತರಲು ತೀರಾ ಸೌಮ್ಯ ಸ್ವಭಾವ ಸಲ್ಲದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನನಗೆ ನೇರವಾಗಿ ಮಾತನಾಡಿ ಅಭ್ಯಾಸ. ಯಾರನ್ನು ಮೆಚ್ಚಲು ನಾನು ಇಲ್ಲಿಗೆ ಬಂದು ಕೆಲಸ ಮಾಡುವುದಿಲ್ಲ. ನಾನು ಮಾಡುವ ಅಭಿವೃದ್ಧಿ ಕೆಲಸವನ್ನು ಕ್ಷೇತ್ರದ ಜನರು ಒಪ್ಪಿದರೆ ಸಾಕು ಎಂದರು.
ಹೆಚ್ಚುವರಿ ಕೆಲಸವಿದ್ದರೂ ಕೂಡ ಅವುಗಳನ್ನು ಸೇರಿಸಿಕೊಂಡು ರೈತರ ಗದ್ದೆಗೆ ತೆರಳುವ ರಸ್ತೆಗಳನ್ನು ಮಾಡುವಂತೆ ಗುತ್ತಿಗೆದಾರರಿಗೆ ಹೇಳಲಾಗಿದೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುವವರಿಗೆ ರೈತರೇ ತಕ್ಕ ಉತ್ತರ ನೀಡಬೇಕು ಶಾಸಕರು ಸೂಚಿಸಿದರು.