ಕನ್ನಡಪ್ರಭವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ನಾಡಕಚೇರಿಯನ್ನು ೫ ವೃತ್ತಗಳಾಗಿ ವಿಭಜನೆಗೊಳಿಸಲಾಗಿದೆ ೭ನೇ ಹೊಸಕೋಟೆ ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ, ಚೆಟ್ಟಳ್ಳಿ ಕೆದಕಲ್, ಸುಂಟಿಕೊಪ್ಪ ವೃತ್ತಕ್ಕೆ ಒಳಪಟ್ಟಿದ್ದು, ಹತ್ತಾರು ಉಪಗ್ರಾಮಗಳನ್ನು ಹೊಂದಿದೆ. ಈ ಗ್ರಾಮಗಳ ಜನತೆಯು ಸುಂಟಿಕೊಪ್ಪ ಕಂದಾಯ ಕಚೇರಿಯಲ್ಲಿ ನಿತ್ಯ ಅಲೆದಾಡುವ ಸ್ಥಿತಿಯಿದೆ. ೬೦ ರಿಂದ ೬ ವಯಸ್ಸಿನವರಿಗೆ ಇಂದಿರಾಗಾಂಧಿ ಮಾಸಾಶನ ೬೦೦.ರು., ೬೫ ವರ್ಷದಿಂದ ಮೇಲ್ಪಟವರಿಗೆ ೧೦೦೦ ದಿಂದ ೧೨೦೦ ರು.ವರೆಗೆ ಸಂಧ್ಯಾ ಸುರಕ್ಷಾ ಮಾಶಾಸನ ನೀಡಲಾಗುತ್ತದೆ. ಶೇ. ೭೫ ಅಂಗವಿಕಲತೆ ಹೊಂದಿರುವ ಮಂದಿಗೆ ೧೪೦೦ ರು. ಮಾಶಾಸನ ನೀಡಲಾಗುತ್ತಿದೆ. ಆದರೆ ಸರ್ಕಾರದ ನೂತನ ಕಾನೂನು ನಿಯಮವನ್ನು ಜಾರಿಗೆ ತರುವ ಮೂಲಕ ಸಾಕಷ್ಟು ಮಂದಿ ವಯೋವೃದ್ಧರು ದಾಖಲಾತಿ ಹೊಂದಿಸಿಕೊಳ್ಳುವ ಸಲುವಾಗಿ ಕಂದಾಯ ಕಚೇರಿಯ ಗ್ರಾಮ ಆಡಳಿತ ಅಧಿಕಾರಿಗಳು ಸೂಚಿಸುವ ದಾಖಲಾತಿಗಳಿಗಾಗಿ ಅಲೆಯುವ ದುಸ್ಥಿತಿ ಎದುರಾಗಿದೆ.
ಅರ್ಜಿ ಸಲ್ಲಿಸುವ ಸಂದರ್ಭ ಇಲ್ಲಿಯ ತನಕ ಬಿಪಿಎಲ್ ಪಡಿತರ ಚೀಟಿ, ಆಧಾರ್‌ಕಾರ್ಡ್, ಮತದಾನದ ಗುರುತಿನ ಚೀಟಿ ಹಾಗೂ ಬ್ಯಾಂಕ್ ಪಾಸ್‌ಪುಸ್ತಕ ದಾಖಲಾತಿಯಾಗಿ ಸ್ವೀಕರಿಸಲಾಗುತ್ತಿತ್ತು. ಆದರೆ ಇದೀಗ ಹೊಸದಾಗಿ ಮಕ್ಕಳ ಶಿಕ್ಷಣದ ಪ್ರಮಾಣಪತ್ರ ಅಥವಾ ಸರ್ಕಾರಿ ವೈದ್ಯರಿಂದ ವಯಸ್ಸಿನ ದೃಢೀಕರಣ ಪತ್ರ ನೀಡಬೇಕಾಗಿದೆ. ಸರ್ಕಾರದ ಈ ಕಾನೂನಿನ ಪರಿಣಾಮ ಸಾಕಷ್ಟು ಕುಗ್ರಾಮಗಳ ವಯೋವೃದ್ಧರು ಮಾಶಾಸನದಿಂದ ವಂಚಿತಗೊಳ್ಳಲಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ. ನಮ್ಮ ಗ್ರಾಮದಲ್ಲಿ ಪರಿಶೀಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸಾಕಷ್ಟು ಮಂದಿ ವಯೋವೃದ್ಧರಿದ್ದು ಅವರು ಕೂಲಿ ಕೆಲಸವನ್ನೇ ನಿರ್ವಹಿಸಿಕೊಂಡು ಜೀವನ ಸಾಗಿಸುತ್ತಿರುವ ಮಂದಿಯಾಗಿದ್ದಾರೆ. ಇವರ ಪೋಷಕರು ಸುಂಟಿಕೊಪ್ಪದ ಕಂದಾಯ ಕಚೇರಿಗೆ ಕುಗ್ರಾಮದಿಂದ ತೆರಳಬೇಕೆಂದರೆ ಕನಿಷ್ಠ ೩೦೦ ರಿಂದ ೪೦೦ ರು.ಗಳವರೆಗೆ ವ್ಯಯಮಾಡಬೇಕಾಗಿದ್ದು, ಅದೇಷ್ಟೋ ವಯೋವೃದ್ಧರು ನಡೆದಾಡಲು ಸಾಧ್ಯವಾಗದೆ ಹಾಸಿಗೆಯಲ್ಲಿದ್ದು ಅಂತಹ ವಯೋವೃದ್ಧರನ್ನು ಕರೆ ತರುವುದು ಹೇಗೆ ಎಂದು ಸರ್ಕಾರ ಚಿಂತಿಸಬೇಕು.-ಚಂದ್ರಶೇಖರ್ ಹೇರೂರು, ಬಿಜೆಪಿ ಯುವ ಮುಖಂಡ. ಸರ್ಕಾರ ವಯೋವೃದ್ಧರಿಗಾಗಿ ಯೋಜನೆ ತಂದಿದೆ. ಆದರೆ ಹೊಸ ದಾಖಲೆಗಳಿಗಾಗಿ ವಯೋವೃದ್ಧರನ್ನು ಕಚೇರಿಗಳಿಗೆ ನಿರಂತರವಾಗಿ ಅಲೆಸುವುದು ಎಷ್ಟರಮಟ್ಟಿಗೆ ಸಮಾಜಂಸವೆಂದು ನಾಗರಿಕರು ಪ್ರಶ್ನಿಸುವಂತಾಗಿದೆ.
-ಪಿ.ಆರ್.ಸುನಿಲ್‌ಕುಮಾರ್ ಬಿಜೆಪಿ ತಾಲೂಕು ಹಿಂದುಳಿದ ವರ್ಗಗಳ ಸಮಿತಿ ಪ್ರಧಾನ ಕಾರ್ಯದರ್ಶಿ