)
- ಭೂಮಿಪೂಜೆ ನೆರವೇರಿಸಿದ ಸಚಿವ । ಅಂಬೇಡ್ಕರ್ ಆಶಯದಂತೆ ಈ ಭವನ ಇರಬೇಕು
ಕನ್ನಡಪ್ರಭ ವಾರ್ತೆ ಹರಿಹರ
ನಗರದ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿಯಾಗಿ ₹3 ಕೋಟಿ ಅನುದಾನ ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ನೀಡಿದರು.ನಗರದ ಹಳೇ ಕೋರ್ಟ್ ಸ್ಥಳದಲ್ಲಿ ಮಂಗಳವಾರ ನಡೆದ ಅಂಬೇಡ್ಕರ್ ಭವನದ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದರು. ಭವನ ನಿರ್ಮಾಣಕ್ಕೆ ಈಗಾಗಲೇ ₹2 ಕೋಟಿ ಅನುದಾನ ಮೀಸಲಿರಿಸಿದ್ದು, ₹50 ಲಕ್ಷ ಬಿಡುಗಡೆಯಾದ ಮಾಹಿತಿಯಿದೆ. ಆದರೆ, ಇಷ್ಟರಲ್ಲಿ ಸುಸಜ್ಜಿತ ಹಾಗೂ ವ್ಯವಸ್ಥಿತವಾಗಿ ನಿರ್ಮಾಣ ಮಾಡಲು ಅಸಾಧ್ಯ. ಸರ್ಕಾರದಿಂದ ಹೆಚ್ಚುವರಿಯಾಗಿ ₹3 ಕೋಟಿ ಅನುದಾನ ಕೋಡಿಸುತ್ತೇನೆ ಎಂದು ಭರವಸೆ ನೀಡಿದರು.
ಅಂಬೇಡ್ಕರ್ ಆಶಯದಂತೆ ಈ ಭವನ ನಿರ್ಮಾಣವಾಗಬೇಕು. ಅಲ್ಲದೇ ಎಲ್ಲ ವರ್ಗದವರು ಇದರ ಉಪಯೋಗ ಪಡೆಯುವಂತಾಗಬೇಕು. ಆಗ ಈ ಭವನ ನಿರ್ಮಾಣ ಕಾರ್ಯ ಸಾರ್ಥಕವಾಗುತ್ತದೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳು ಜನಸಮಾನ್ಯರ ಬದುಕಲ್ಲಿ ಬೆಳಕನ್ನು ಮೂಡಿಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನುಡಿದಂತೆ ನಡೆದ ಸರ್ಕಾರ ದೇಶದಲ್ಲಿ ನಮ್ಮದೇ ಎಂದರು.
ಪೌರಕಾರ್ಮಿಕರಿಗೆ ನಿವೇಶನವಿಲ್ಲ ಸಾರ್ ಅದನ್ನು ನೇರವೇರಿಸಿ ಎಂದು ಪೌರಕಾರ್ಮಿಕರ ಕೇಳಿದರು. ಆಗ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ನೀಡುವ ಕೆಲಸವನ್ನು ಕ್ಷೇತ್ರದ ಶಾಸಕರು ಗಮನಹರಿಸಬೇಕು. ಆದರೆ, ನಿಮ್ಮ ಶಾಸಕರಿಗೆ ನಮ್ಮನ್ನು ತೆಗಳುವುದೇ ಕಾಯಕವಾಗಿದೆ. ನಮ್ಮ ಕಚೇರಿಗೆ ಬನ್ನಿ, ಪರೀಶಿಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
- - -
ಹರಿಹರ: ಸಮಾಜದಲ್ಲಿನ ಜಾತಿ ವ್ಯವಸ್ಥೆ, ಶೋಷಣೆ, ಮಹಿಳಾ ಸಬಲೀಕರಣ ಹಾಗೂ ಸಮಾನತೆಯನ್ನು ಗಮನದಲ್ಲಿಟ್ಟುಕೊಂಡು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಸರ್ವಕಾಲಕ್ಕೂ ಅಜರಾಮರ ಎಂದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು. ಡಾ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಂವಿಧಾನಶಿಲ್ಪಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
- - --28HRR01:
- - -
(** ಡಾ.ಪ್ರಭಾ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು) -28HRRA: ಹರಿಹರದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ವೇದಿಕೆಯಲ್ಲಿ ಮಾತನಾಡಿದರು.