ಮೂಡುಬಿದಿರೆ : ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಒಂದೇ ಕ್ಯಾಂಪಸ್‌ನ ಕ್ಲಾಸ್‌ರೂಮ್ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡಿದ 21 ವಿದ್ಯಾರ್ಥಿಗಳು 99 ಪರ್ಸಂಟೈಲ್‌ಗಿಂತ ಅಧಿಕ ಅಂಕ ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಆಳ್ವಾಸ್‌ನ ಸರ‍್ಯಕಾಂತ್ ಪಾಟೀಲ್ 97ನೇ ರ‍್ಯಾಂಕ್, ಚೇತನ್ ಯರನಾಳ್ 239ನೇ ರ‍್ಯಾಂಕ್, ಕ್ಲಾರೆನ್ಸ್ ಡಿ’ಸೋಜಾ 724 ರ‍್ಯಾಂಕ್ ಹಾಗೂ ದೀಕ್ಷಿತಾ ಕೆ.ಎಸ್ 951 ರ‍್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಳ್ವಾಸ್‌ನ 10 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು, 161 ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ. ಒಟ್ಟು 467 ವಿದ್ಯಾರ್ಥಿಗಳು 450ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದು, ಈ ಪೈಕಿ 450ಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆಯುವ ಸಾಧ್ಯತೆ ಇದೆ.


ಕೆಟಗರಿ ವಿಭಾಗದಲ್ಲಿ ಟಾಪ್ 500 ರ‍್ಯಾಂಕ್‌ನ ಒಳಗೆ 3 ವಿದ್ಯಾರ್ಥಿಗಳು, ಟಾಪ್ 1000 ರ‍್ಯಾಂಕ್‌ನ ಒಳಗೆ 14 ವಿದ್ಯಾರ್ಥಿಗಳು, ಟಾಪ್ 2000 ರ‍್ಯಾಂಕ್‌ನ ಒಳಗೆ 26 ವಿದ್ಯಾರ್ಥಿಗಳು ಹಾಗೂ ಟಾಪ್ 5000 ರ‍್ಯಾಂಕ್‌ನ ಒಳಗೆ 72 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

ಪರೀಕ್ಷೆ ಬರೆದ ಎಕ್ಸೆಲ್‌ ಕಾಲೇಜಿನೆಲ್ರೂ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಅರ್ಹ

 ಬೆಳ್ತಂಗಡಿ : ಈ ಬಾರಿಯ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹೋನ್ನತ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಮೌರ್ಯ ವೈ.ಡಿ.99.9783489 ಪರ್ಸೆಂಟೈಲ್ ಪಡೆದು 673 ಅಂಕಗಳನ್ನು ಗಳಿಸುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ 271ನೇ ರ್‍ಯಾಂಕ್‌ ಗಳಿಸಿದ್ದಾರೆ. ಚಿನ್ಮಯ್ ಎಲ್.ಆರ್.ಗೌಡ 99.9720985 ಪರ್ಸೆಂಟೈಲ್ ಪಡೆದು 670 ಅಂಕ ಗಳಿಸಿ ರಾಷ್ಟ್ರಮಟ್ಟದಲ್ಲಿ 331ನೇ ರ‍್ಯಾಂಕ್‌ ಪಡೆದಿದ್ದಾರೆ.

ಪಂಚಮ್ ಕೆ -99.9027478 ಪರ್ಸಂಟೈಲ್ ಪಡೆದು 648 ನೇ ರ‍್ಯಾಂಕ್‌ ಗಳಿಸಿದ್ದಾರೆ. ಆನಂದ್ ರೆಡ್ಡಿ ಬಿ ಸಿ 99.7510869 ಪರ್ಸಂಟೈಲ್ ಪಡೆದು 621 ಅಂಕ, ಗಗನದೀಪ್ - 99.6808332 ಪರ್ಸಂಟೈಲ್ ಪಡೆದು 614 ಅಂಕ, ಕೆ ಕೆ ಸರ್ವಿಕ - 99.5818280 ಪರ್ಸಂಟೈಲ್ ಪಡೆದು 606 ಅಂಕ, ತಸ್ಮಿಯ ಎನ್ ಸರ್ವದ್ 99.0143256 ಪರ್ಸಂಟೈಲ್ ಪಡೆದು 603 ಅಂಕಗಳನ್ನು ವಿದ್ಯಾಧರ ಬಿ ಆರ್ 99.4770225 ಪರ್ಸಂಟೈಲ್ ಪಡೆದು, 599 ಅಂಕಗಳನ್ನು ಗಳಿಸಿದ್ದಾರೆ. ರಾಷ್ಟ್ರಮಟ್ಟದ ಕ್ಯಾಟಗರಿ ವಿಭಾಗದಲ್ಲಿ ಶ್ವೇತಾ ಎಂ.ನಾಗಾವಿ 79ನೇ ರ‍್ಯಾಂಕ್ ಹಾಗೂ ರೋಹಿತ್ ಆರ್.ಎಲ್. 575 ಅಂಕ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. 300ಕ್ಕೂ ಮಿಕ್ಕಿ ವಿದ್ಯಾರ್ಥಿಗಳು 500ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳೆಲ್ಲರೂ ವೈದ್ಯಕೀಯ ಪದವಿಗೆ ಅರ್ಹರಾಗಿರುವುದು ಎಕ್ಸೆಲ್ ಗುರುವಾಯನಕೆರೆಯ ಶೈಕ್ಷಣಿಕ ಸಾಧನೆಗೆ ನೂತನ ಸೇರ್ಪಡೆಯಾಗಿದೆ.

ಮತ್ತೊಮ್ಮೆ ಶೈಕ್ಷಣಿಕ ಶ್ರೇಷ್ಠತೆ ಸಾಬೀತು ಪಡಿಸಿದ ಎಕ್ಸಲೆಂಟ್‌

ಮೂಡುಬಿದಿರೆ : ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ ನೀಟ್‌-2026ರ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜು ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆ ಸಾಬೀತುಪಡಿಸಿದೆ. ಕಾಲೇಜಿನ ನಿಖಿಲ್ ಎಸ್.ಎಸ್. ಅವರು 720ಕ್ಕೆ 650 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ತನ್ಮಯಿ ಎ. ಕೋಟಿ 647 ಅಂಕ, ಚಿನ್ಮಯಿ ಬೆಳ್ಳೂರು 629 ಅಂಕ, ಹೇಮಾ ಯು. ಅವರು 624 ಅಂಕ, ಶ್ಲೋಕ್ ರಾಘವೇಂದ್ರ ರಾವ್ ಅವರು 615 ಅಂಕ, ಈಶ್ವರ ಪುಂಡಲೀಕಪ್ಪ ಕೊಪ್ಪಲ್ 612 ಹಾಗೂ ಮೋಹಿತ್ ವೈ.ಪಿ. ಅವರು 611 ಅಂಕ ಗಳಿಸಿದ್ದಾರೆ.

600ಕ್ಕೂ ಅಧಿಕ ಅಂಕಗಳನ್ನು 7 ವಿದ್ಯಾರ್ಥಿಗಳು, 550 ಕ್ಕಿಂತ ಹೆಚ್ಚು ಅಂಕಗಳನ್ನು 32 ವಿದ್ಯಾರ್ಥಿಗಳು, 500 ಕ್ಕಿಂತ ಹೆಚ್ಚುಅಂಕಗಳನ್ನು 70 ವಿದ್ಯಾರ್ಥಿಗಳು , 450 ಕ್ಕಿಂತ ಹೆಚ್ಚು ಅಂಕಗಳನ್ನು 124 ವಿದ್ಯಾರ್ಥಿಗಳು ಗಳಿಸಿದ್ದಾರೆ. ಒಟ್ಟಾರೆಯಾಗಿ 216 ವಿದ್ಯಾರ್ಥಿಗಳು 400 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ವೈದ್ಯಕೀಯ ಪ್ರವೇಶಕ್ಕೆ ಭರವಸೆಯ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ತಿಳಿಸಿದ್ದಾರೆ.

ಎಕ್ಸ್‌ಪರ್ಟ್‌ನ 60 ವಿದ್ಯಾರ್ಥಿಗಳಿಗೆ 720ಕ್ಕೆ 600ಕ್ಕೂ ಅಧಿಕ ಅಂಕ

 ಮಂಗಳೂರು : ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ ನೀಟ್‌-2026ರ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜಿನ 60 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ ಪಡೆದು ಸಾಧನೆ ತೋರಿದ್ದಾರೆ.

720ರಲ್ಲಿ 677 ಅಂಕ ಪಡೆದ ಕಾಲೇಜಿನ ವಿದ್ಯಾರ್ಥಿ ಧೀರಜ್ ಎನ್.ಅಖಿಲ ಭಾರತ ಮಟ್ಟದಲ್ಲಿ 336ನೇ ರ್‍ಯಾಂಕ್‌ , 676 ಅಂಕ ಪಡೆದ ಅಂಕಿತ್ ಅಶೋಕ್ ದೊಡವಾಡ 355ನೇ ರ್‍ಯಾಂಕ್‌ ಪಡೆದಿದ್ದಾರೆ. ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 675ಕ್ಕಿಂತ ಅಧಿಕ ಅಂಕವನ್ನು, 10 ವಿದ್ಯಾರ್ಥಿಗಳು 650ಕ್ಕಿಂತ ಅಧಿಕ ಅಂಕ, 34 ವಿದ್ಯಾರ್ಥಿಗಳು 625ಕ್ಕಿಂತ ಅಧಿಕ ಅಂಕ, 60 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ, 141 ವಿದ್ಯಾರ್ಥಿಗಳು 575ಕ್ಕಿಂತ ಅಧಿಕ ಅಂಕ, 196 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ ಅಂಕ, 258 ವಿದ್ಯಾರ್ಥಿಗಳು 525ಕ್ಕಿಂತ ಅಧಿಕ ಅಂಕ, 356 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ, 477 ವಿದ್ಯಾರ್ಥಿಗಳು 475ಕ್ಕಿಂತ ಅಧಿಕ ಅಂಕ, 614 ವಿದ್ಯಾರ್ಥಿಗಳು 450ಕ್ಕಿಂತ ಅಧಿಕ ಅಂಕ, 726 ವಿದ್ಯಾರ್ಥಿಗಳು 425ಕ್ಕಿಂತ ಅಧಿಕ ಅಂಕ, 853 ವಿದ್ಯಾರ್ಥಿಗಳು 400ಕ್ಕಿಂತ ಅಧಿಕ ಅಂಕ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಉಜ್ವಲ್ ಶಿವಾನಂದ ಬೂದಿಹಾಲ್ ಅಖಿಲ ಭಾರತ ಮಟ್ಟದ ಜನರಲ್ ಮೆರಿಟ್‌ನಲ್ಲಿ 619ನೇ ರ್‍ಯಾಂಕ್‌, ಸಮಯ್ ಎ.ಎಸ್. 686ನೇ ರ್‍ಯಾಂಕ್‌ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ತಿಳಿಸಿದ್ದಾರೆ.

ಕ್ರಿಯೇಟಿವ್‌ ಕಾಲೇಜಿನ 189 ಮಂದಿಗೆ 90 ಪರ್ಸಂಟೈಲ್‌ಗಿಂತ ಹೆಚ್ಚಿನ ಅಂಕ 

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ ನೀಟ್‌-2026ರ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.

ವಿದ್ಯಾರ್ಥಿ ತೇಜಸ್ ಹೆಗ್ಡೆ ಎಚ್.ಡಿ.99.8900442 ಪರ್ಸಂಟೈಲ್‌ನೊಂದಿಗೆ 641 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದ ಕೆಟಗರಿ ವಿಭಾಗದಲ್ಲಿ 772ನೇ ಪಡೆದಿದ್ದಾರೆ. ತೇಜಸ್ ಆರ್.ಬಿ. 99.7945892 ಪರ್ಸಂಟೈಲ್‌ನೊಂದಿಗೆ 626 ಅಂಕಗಳನ್ನು ಗಳಿಸಿ ಕೆಟಗರಿ ವಿಭಾಗದಲ್ಲಿ 103ನೇ ರ‍್ಯಾಂಕ್ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಧ್ರುವ ವಿ.ಬಿ. 99.6808332 ಪರ್ಸಂಟೈಲ್‌ನೊಂದಿಗೆ 614 ಅಂಕ ಗಳಿಸಿ 668ನೇ ರ‍್ಯಾಂಕ್, ಲೇಖನ್ ಕಾರಿಯಪ್ಪ ಎಂ.ಡಿ. 99.6687826 ಪರ್ಸಂಟೈಲ್‌ನೊಂದಿಗೆ 613 ಅಂಕ ಗಳಿಸಿ 678ನೇ ರ‍್ಯಾಂಕ್ ಪಡೆದಿದ್ದಾರೆ. ಆರ್ಯ ವಿ.606 ಹಾಗೂ ಮೋಕ್ಷಾ ಬಿ.ಎಂ. 605 ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಹಿತಾರ್ಥ ವಿ.ಎಸ್. (597), ನಂದನ್ ಜಿ. (595), ಕೆ.ಎನ್. ರಾಘವೇಂದ್ರ (585), ಮೋನಿಶ್ ಜಿ. (582), ರಾಘವೇಂದ್ರ ಧರ್ಮಪ್ಪ ಗೌಡರ್ (582), ಅಶ್ವಿನ್ ಹೊಸಟ್ಟಿ (576), ಸೃಜನಾ ಎಸ್. (574), ರಶ್ಮಿ (573), ತರುಣ್ ಸಾಗರ್ (566), ಪವನ್ ಕಲ್ಕೂರು (563), ಶ್ರಾವ್ಯಾ ಬಾಲಕೃಷ್ಣ (562), ವಿ.ಆರ್. ಗಣೇಶ್ (561), ಪ್ರಣಮ್ಯ ಭಟ್ (561), ಶಮಿತಾ ನಾಯಕ್ (559), ವರ್ಷಿತಾ ಎನ್. (559), ನೇಹಾ ಜಿ.ಆರ್. (554), ತನುಜಾ ಸಿ.ಪಿ. (550) ಹಾಗೂ ಮಹಾಂತೇಶ್ ಬಳ್ಳಪ್ಪ (550) ಅಂಕಗಳನ್ನು ಪಡೆದು ಉತ್ತಮ ಸಾಧನೆ ದಾಖಲಿಸಿದ್ದಾರೆ.