ಕಾರ್ಕಳ: ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಫಲಿತಾಂಶಗಳ ಮೂಲಕ ಗುರುತಿಸಿಕೊಂಡಿರುವ ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆಯು ನೀಟ್‌ ಪರೀಕ್ಷೆಗೆ ವಿಶೇಷ ತರಬೇತಿ ನೀಡುವ ಉದ್ದೇಶದಿಂದ ಕ್ರಿಯೇಟಿವ್‌ ನೀಟ್‌ ಅಕಾಡೆಮಿ ಯಶಸ್ವಿಯಾಗಿ ನಡೆಸುತ್ತಿದೆ. ಕಾರ್ಕಳ, ಉಡುಪಿ, ಶಿವಮೊಗ್ಗ ಹಾಗೂ ಹಾಸನದಲ್ಲಿ ಶಾಖೆಗಳನ್ನು ಹೊಂದಿರುವ ಸಂಸ್ಥೆಯು ಅನುಭವಿ ಉಪನ್ಯಾಸಕರಿಂದ ಗುಣಮಟ್ಟದ ತರಬೇತಿ ಒದಗಿಸುತ್ತಿದೆ.ದ್ವಿತೀಯ ಪಿಯುಸಿ ಬಳಿಕ ನೀಟ್‌ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಗಳಿಸಲಾಗದ ವಿದ್ಯಾರ್ಥಿಗಳಿಗಾಗಿ ಒಂದು ವರ್ಷದ ನೀಟ್‌ ಲಾಂಗ್ ಟರ್ಮ್‌ ತರಬೇತಿಯನ್ನು ಅಕಾಡೆಮಿ ನಡೆಸುತ್ತಿದೆ. ದೇಶದ ಪ್ರತಿಷ್ಠಿತ ನೀಟ್‌ ತರಬೇತಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿ ಉಪನ್ಯಾಸಕರಿಂದ ಬೋಧನೆ ನಡೆಯುತ್ತಿದ್ದು, ಸಂಸ್ಥೆಯು ರೂಪಿಸಿರುವ ಅಧ್ಯಯನ ಸಾಮಗ್ರಿಗಳು ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುತ್ತಿವೆ.ಪ್ರತಿ ದಿನ ವಿಷಯವಾರು ಮಾದರಿ ಪರೀಕ್ಷೆಗಳು, ಸಂದೇಹ ನಿವಾರಣಾ ತರಗತಿಗಳು ಹಾಗೂ ಪ್ರತೀ ಭಾನುವಾರ ಮೂರು ಗಂಟೆಗಳ ನೀಟ್‌ ಮಾದರಿ ಪರೀಕ್ಷೆ ನಡೆಸಲಾಗುತ್ತದೆ. ಫಲಿತಾಂಶದ ವಿಶ್ಲೇಷಣೆ, ರ‍್ಯಾಂಕ್‌ ಪಟ್ಟಿ ಹಾಗೂ ಪಾಲಕರಿಗೆ ಪ್ರಗತಿ ವರದಿ ನೀಡುವ ವ್ಯವಸ್ಥೆಯೂ ಇದೆ. ಜೊತೆಗೆ ವಿದ್ಯಾರ್ಥಿಗಳ ಪ್ರಗತಿಗೆ ನಿರಂತರ ಮೇಲ್ವಿಚಾರಣೆ, ಭೌತಶಾಸ್ತ್ರಕ್ಕೆ ಹೆಚ್ಚುವರಿ ತರಗತಿಗಳು, ಸಮೃದ್ಧ ಗ್ರಂಥಾಲಯ, ಡಿಜಿಟಲ್‌ ತರಗತಿ ಕೊಠಡಿಗಳು ಹಾಗೂ ಪ್ರಯೋಗಾಲಯಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಕಳೆದ ಐದು ವರ್ಷಗಳಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆದಿರುವುದು ಸಂಸ್ಥೆಯ ಪ್ರಮುಖ ಸಾಧನೆಯಾಗಿದೆ. ಪ್ರತಿವರ್ಷವೂ ಸಂಸ್ಥೆಯ ವಿದ್ಯಾರ್ಥಿಗಳು AIIMS, JIPMER ಸೇರಿದಂತೆ ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 96069 97383 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.