ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಡರಹಳ್ಳಿ, ನಿಟ್ಟೂರು, ಲಿಂಗಪಟ್ಟಣ, ಎಚ್.ಬಸಾಪುರ, ತೊರೆಕಾಡನಹಳ್ಳಿ ಸೇರಿದಂತೆ ಹಲಗೂರು ಗ್ರಾಪಂ ಅಧ್ಯಕ್ಷರು, ಪಿಡಿಒ ಮತ್ತು ವಾಟರ್ ಮ್ಯಾನ್ ಗಳ ಸಮನ್ವಯ ಸಭೆಯಲ್ಲಿ ಮಾತನಾಡಿದರು.
ಎಲ್ಲಾ ಗ್ರಾಪಂಗಳಲ್ಲೂ ಅಗತ್ಯವಿರುವ ನೀರಿನ ಬಜೆಟ್ ತಯಾರಿಸಿಕೊಳ್ಳಬೇಕು. ಪ್ರತಿ ವ್ಯಕ್ತಿಗೂ ಕನಿಷ್ಠ 55 ಎಲ್.ಪಿ.ಸಿ.ಡಿ ನೀರನ್ನು ಸರಬರಾಜು ಮಾಡಲು ಕ್ರಮ ವಹಿಸಬೇಕು. ಅಗತ್ಯವಿರುವ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಗ್ರಾಮದ ಸನಿಹದಲ್ಲಿರುವ ಖಾಸಗಿ ವ್ಯಕ್ತಿಗಳ ಒಡೆತನದ ಕೊಳವೆಬಾವಿಯಿಂದ ನೀರು ಪಡೆಯಲು ಅಗತ್ಯವಿರುವ ಒಪ್ಪಂದ ಮಾಡಿಕೊಳ್ಳಲು ಮುಂದಾಗಬೇಕು ಎಂದರು.ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲೂ ಜನರು ಮತ್ತು ಜಾನುವಾರುಗಳಿಗೆ ಅಗತ್ಯವಿರುವ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ಪ್ರತಿ ಗ್ರಾಪಂ ವ್ಯಾಪ್ತಿಯ ಕನಿಷ್ಠ 5 ಗ್ರಾಮಗಳಲ್ಲಿ 24/7 ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜಲ ಜೀವನ್ ಮಿಷನ್ ಯೋಜನೆಯಡಿ ನಿರ್ಮಾಣ ಆಗಿರುವ ಕಾಮಗಾರಿ ಕೆಲಸ, ಪೈಪ್ ಲೈನ್, ಕೊಳಾಯಿ ಸಂಪರ್ಕ ಕುರಿತ ಲೋಪ ದೋಷಗಳನ್ನು ಗುರುತಿಸಿ ಕೂಡಲೇ ಸರಿಪಡಿಸಲು ಕ್ರಮವಹಿಸಬೇಕು. ಜಾಗ ಮತ್ತಿತರ ಸಮಸ್ಯೆಗಳಿದ್ದಲ್ಲಿ ಬಗೆಹರಿಸಲು ಗಮನಹರಿಸಿ ಎಂದರು.ಸಭೆಯಲ್ಲಿ ಕುಡಿಯುವ ನೀರಿನ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಂಗಸ್ವಾಮಿ, ಕಿರಿಯ ಎಂಜಿನಿಯರ್ ಅರುಣ್ ಕುಮಾರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಎಚ್.ಜಿ.ಪಾರ್ಥಸಾರಥಿ, ಗ್ರಾಪಂ ಅಧ್ಯಕ್ಷೆ ಗುಲ್ನಾಜ್ ಬಾನು, ಸಿ.ಲತಾ, ಅಲುಮೇಲಮ್ಮ, ನಾಗೇಂದ್ರ, ಸುಕನ್ಯ ಸೋಮಸುಂದರ್, ಶಿವಮ್ಮ, ಪಿಡಿಒ ಕೆ.ಚೆಂದಿಲ್, ಲಿಂಗಯ್ಯ, ಮಲ್ಲಿಕಾರ್ಜುನ, ನಟೇಶ್, ಮಂಗಳ, ಬಿಲ್ ಕಲೆಕ್ಟರ್ ಆನಂದ್ ಸೇರಿದಂತೆ ಭಾಗವಹಿಸಿದ್ದರು.