ಪ್ರೊ.ಕೆ.ಪಿ. ಬಸವೇಗೌಡರ ಸಮಾಜ ಸೇವೆ ಸ್ಮರಣೀಯ

KannadaprabhaNewsNetwork |  
Published : Jul 11, 2026, 01:45 AM IST
ಫೋಟೋ | Kannada Prabha

ಸಾರಾಂಶ

, ತಮ್ಮ ಜೀವನದ ಉಳಿದ ಅವಧಿಯನ್ನು ಶಿಕ್ಷಣ ಮತ್ತು ಸಮಾಜಮುಖಿ ಕಾರ್ಯಗಳಿಗೆ ಮೀಸಲಿಟ್ಟ ಅಪರೂಪದ ವ್ಯಕ್ತಿತ್ವ ಬಸವೇಗೌಡರದ್ದಾಗಿತ್ತು.

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆಶಿಕ್ಷಣ, ಸಮಾಜಸೇವೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅಪಾರ ಕೊಡುಗೆ ನೀಡಿದ ಪ್ರೊ.ಕೆ.ಪಿ. ಬಸವೇಗೌಡರ ಸೇವೆ ಇಂದಿನ ಸಮಾಜಕ್ಕೆ ಆದರ್ಶಪ್ರಾಯವಾಗಿದೆ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳು ಹಾಗೂ ತಾಲೂಕು ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಚುಂಚಶ್ರೀ ಪ್ರಶಸ್ತಿ ಪುರಸ್ಕೃತ ದಿವಂಗತ ಪ್ರೊ.ಕೆ.ಪಿ. ಬಸವೇಗೌಡರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಬಳಿಕವೂ ವಿಶ್ರಾಂತಿ ಪಡೆಯದೇ, ತಮ್ಮ ಜೀವನದ ಉಳಿದ ಅವಧಿಯನ್ನು ಶಿಕ್ಷಣ ಮತ್ತು ಸಮಾಜಮುಖಿ ಕಾರ್ಯಗಳಿಗೆ ಮೀಸಲಿಟ್ಟ ಅಪರೂಪದ ವ್ಯಕ್ತಿತ್ವ ಬಸವೇಗೌಡರದ್ದಾಗಿತ್ತು. ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ದೊರೆಯುವಂತೆ ಶ್ರಮಿಸಿದ ಅವರ ಕಾರ್ಯ ಚಿರಸ್ಮರಣೀಯವಾಗಿದೆ ಎಂದು ಅವರು ಹೇಳಿದರು.ಸಮಾಜದ ಒಳಿತಿಗಾಗಿ ಬದುಕನ್ನು ಮುಡಿಪಾಗಿಟ್ಟಿದ್ದ ಕಾರಣವೇ ಅವರು ದೀರ್ಘಾಯುಷ್ಯ ಅನುಭವಿಸಿದರು. ಅವರ ನಿಸ್ವಾರ್ಥ ಸೇವೆ ಗುರುತಿಸಿ ಆದಿಚುಂಚನಗಿರಿ ಸಂಸ್ಥಾನವು ಪ್ರತಿಷ್ಠಿತ ''''''''''''''''ಚುಂಚಶ್ರೀ ಪ್ರಶಸ್ತಿ'''''''''''''''' ನೀಡಿ ಗೌರವಿಸಿತು. ಪ್ರಶಸ್ತಿಯೊಂದಿಗೆ ದೊರೆತ 15 ಲಕ್ಷ ರೂ. ಮೊತ್ತವನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸದೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ದತ್ತಿ ನಿಧಿಯಾಗಿ ಮೀಸಲಿಟ್ಟಿರುವುದು ಅವರ ಉದಾತ್ತ ಮನೋಭಾವಕ್ಕೆ ಸಾಕ್ಷಿ. ಇಂತಹ ಆದರ್ಶ ಗುಣಗಳು ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಅವರು ತಿಳಿಸಿದರು.ಮೈಮುಲ್ ನಿರ್ದೇಶಕ ಈರೇಗೌಡ ಮಾತನಾಡಿ, ಕೇರಳಂ ಗಡಿ ಭಾಗದಲ್ಲಿರುವ ಎಚ್.ಡಿ. ಕೋಟೆ ತಾಲೂಕಿನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯ ಅಗತ್ಯವನ್ನು ಮನಗಂಡಿದ್ದ ಪ್ರೊ. ಬಸವೇಗೌಡರು, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆರಂಭಿಸಿದರು. ಸಣ್ಣ ಮಟ್ಟದಲ್ಲಿ ಆರಂಭವಾದ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಅನೇಕರು ವಿವಿಧ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವುದು ಅವರ ದೂರದೃಷ್ಟಿಯ ಫಲ ಎಂದು ಹೇಳಿದರು.ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಾಂಶುಪಾಲ ಜೆ.ಎನ್. ವೆಂಕಟೇಶ್, ಸೆನೆಟ್ ಮಾಜಿ ಸದಸ್ಯ ಕೃಷ್ಣೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಹರೀಶ್ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಡಿ. ರಾಜೇಂದ್ರ, ನರಸಿಂಹೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಜಗದೀಶ್, ನಿಂಗೇಗೌಡ, ಬಿ.ಪಿ. ಭಾಸ್ಕರ್, ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮಿನರಸಿಂಹೇಗೌಡ, ಭೈರೇಗೌಡ, ಜವರೇಗೌಡ, ಒಕ್ಕಲಿಗ ಯುವ ಸಮಿತಿ ಅಧ್ಯಕ್ಷ ಡಿ.ಸಿ. ಸ್ವಾಮಿ, ಎ.ಟಿ. ನಾಗರಾಜು, ಶಿವಣ್ಣೇಗೌಡ, ಅಂಗಡಿ ಸತೀಶ್, ಸೊಮೇಶ್, ರಾಜೇಂದ್ರ, ಲೋಕೇಶ್, ಮಹದೇವ, ಮಹದೇವು, ರವಿಕುಮಾರ್, ಕಲ್ಗೆರೆಗೌಡ, ಮಂಜು, ಮಂಚಿಂಗೇಗೌಡ, ರಾಜೇಗೌಡ, ವೆಂಕಟೇಗೌಡ, ಮಂಜು ಕೋಟೆ, ಸತ್ಯ, ಕಸಾಪ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್, ಬೆಳಗನಹಳ್ಳಿ ಬಸವರಾಜು, ಭೈರಪ್ಪ, ಮುಖ್ಯೋಪಾಧ್ಯಾಯಿನಿ ನಂದಿನಿ, ಮಹದೇವಪ್ರಸಾದ್, ಸಂತೋಷ್, ರಾಜೇಶ್, ಮಲ್ಲೇಶ್, ಶ್ರೀನಿವಾಸ್, ರಾಮಚಂದ್ರ, ನಾಗರಾಜು, ಕಲ್ಲೇಶ್ ಗೌಡ ತಂಬಡಿ, ಸೂರ್ಯಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಶಿಕ್ಷಣ ಸಂಸ್ಥೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಿ
ಹತ್ತಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು