ವಿಬಿ-ಜಿ ರಾಮ್ ಜಿ ಕೂಲಿಕಾರರಿಗೆ ಆರೋಗ್ಯ ತಪಾಸಣೆ

KannadaprabhaNewsNetwork |  
Published : Jul 11, 2026, 01:30 AM IST
10ಕೆಆರ್ ಎಂಎನ್ 2.ಜೆಪಿಜಿಕನಕಪುರ ತಾಲೂಕಿನ ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚನಹಳ್ಳಿ ಗ್ರಾಮದ ನಾಗಸಂದ್ರ ಕೆರೆ ಹೂಳು ತೆಗೆಯುವ ಕಾಮಗಾರಿಯ ಸ್ಥಳದಲ್ಲಿ ನೊಂದಾಯಿತ ಉದ್ಯೋಗ ಚೀಟಿದಾರರ ಆರೋಗ್ಯ ತಪಾಸಣೆ ನಡೆಸಲಾಯಿತು. | Kannada Prabha

ಸಾರಾಂಶ

ಕನಕಪುರ: ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ತಾಲೂಕಿನ ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚನಹಳ್ಳಿ ಗ್ರಾಮದ ನಾಗಸಂದ್ರ ಕೆರೆ ಹೂಳು ತೆಗೆಯುವ ಕಾಮಗಾರಿಯ ಸ್ಥಳದಲ್ಲಿ ನೋಂದಾಯಿತ ಉದ್ಯೋಗ ಚೀಟಿದಾರರ ಆರೋಗ್ಯ ತಪಾಸಣೆ ನಡೆಸಲಾಯಿತು

ಕನಕಪುರ: ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ತಾಲೂಕಿನ ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚನಹಳ್ಳಿ ಗ್ರಾಮದ ನಾಗಸಂದ್ರ ಕೆರೆ ಹೂಳು ತೆಗೆಯುವ ಕಾಮಗಾರಿಯ ಸ್ಥಳದಲ್ಲಿ ನೋಂದಾಯಿತ ಉದ್ಯೋಗ ಚೀಟಿದಾರರ ಆರೋಗ್ಯ ತಪಾಸಣೆ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘು ಚಾಲನೆ ನೀಡಿದರು.

ಕಾಮಗಾರಿ ಸ್ಥಳದಲ್ಲಿದ್ದ 27 ಮಹಿಳಾ ಕೂಲಿಕಾರರಿಗೆ ಮತ್ತು 6 ಪುರುಷ ಕೂಲಿಕಾರರಿಗೆ ಬಿಪಿ, ಶುಗರ್, ಪ್ರಾಥಮಿಕ ಹಂತದ ಆರೋಗ್ಯ ತಪಾಸಣೆ ಮಾಡಿ, 13 ಕೂಲಿಕಾರರಲ್ಲಿ ಬಿಪಿ ಏರುಪೇರು ಕಂಡು ಬಂದಿದ್ದು, ಹಾಗೂ ಇಬ್ಬರು ಕೂಲಿಕಾರರಿಗೆ ಶುಗರ್ ಕಂಡು ಬಂದಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಆರೋಗ್ಯ ಸಿಬ್ಬಂದಿ ಸೂಚಿಸಿದರು.

ನಂತರ ಜುಲೈ 1ರಿಂದ ಚಾಲನೆಗೊಂಡಿರುವ ವಿಬಿ-ಜಿ ರಾಮ್ ಜಿ ಯೋಜನೆಯ ಕುರಿತು ಮಾತನಾಡಿದ ಜಿಲ್ಲಾ ಐಇಸಿ ಸಂಯೋಜಕ ಸಿ.ಜಿ.ಅರುಣ್ ಕುಮಾರ್, ಕೂಲಿಕಾರರ ಖಾತ್ರಿಯನ್ನು ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗದ ಬದಲಾಗಿ 125 ದಿನಗಳ ಉದ್ಯೋಗವಕಾಶ ಕಲ್ಪಿಸಲಾಗಿದ್ದು, ಈ ಹಿಂದೆ ನೀಡಲಾಗುತ್ತಿದ್ದು, 370 ರು.ಗಳ ಕೂಲಿ ಮೊತ್ತವನ್ನು 382 ರು.ಗಳಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಗ್ರಾಮೀಣ ಕುಟುಂಬಗಳಿಗೆ ಹೆಚ್ಚಿನ ಉದ್ಯೋಗ ಮತ್ತು ಆದಾಯ ದೊರೆಯಲಿದೆ ಎಂದು ಹೇಳಿದರು.

ಈ ಯೋಜನೆಯಡಿ ಗ್ರಾಮೀಣ ಮೂಲ ಸೌಕರ್ಯ ಕೃಷಿ ಚಟುವಟಿಕೆಗಳ ಸಮಯದಲ್ಲಿ 60 ದಿನಗಳ ವಿರಾಮ, ಜಲ ಸಂರಕ್ಷಣೆ, ಗ್ರಾಮೀಣ ಮೂಲ ಸೌಕರ್ಯ ಮತ್ತು ಜೀವನೋಪಾಯ, ಹಾಗೂ ಹವಮಾನ ಕಾಮಗಾರಿಗಳಿಗೆ ಆದ್ಯತೆ, ಸಮಗ್ರ ಡಿಜಿಟಲ್ ವ್ಯವಸ್ಥೆ ಮೂಲಕ ಪಾರದರ್ಶಕ ಆಡಳಿತ, ಹೊಣೆಗಾರಿಕೆ ಮತ್ತು ನಾಗರೀಕರ ಪಾಲ್ಗೊಳ್ಳುವಿಕೆಯಲ್ಲಿ ಆಧುನೀಕರಣ, ವಿವಿಧ ಇಲಾಖೆಗಳ ಸಾಂಸ್ಥಿಕ ಒಗ್ಗೂಡಿಸುವಿಕೆ, ಗ್ರಾಮ ಪಂಚಾಯಿತಿಗಳ ಮೂಲಕ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕಾಮಗಾರಿಗಳ ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು.

ಕಾಮಗಾರಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ನೆರಳಿನ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ನಿರ್ವಹಿಸುವುದು. ಕೂಲಿ ಬೇಡಿಕೆಗೆ ಅನುಗುಣವಾಗಿ ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಅಕುಶಲ ಕಾರ್ಮಿಕರಿಗೆ ಕೂಲಿ ಒದಗಿಸುವುದು. ಮಹಿಳೆಯರು, ವೃದ್ಧರು, ಗರ್ಬೀಣಿಯರು, ಬಾಣಂತಿಯರಿಗೆ ಕಾರ್ಯ ನಿರ್ವಹಿಸಲು ಕಾಮಗಾರಿ ಸ್ಥಳದಲ್ಲಿ ಅನುಕೂಲಕರ ವಾತಾವರಣ. ಶೇ.60ಕ್ಕಿಂತ ಹೆಚ್ಚು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಲ್ಲಿ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡುವ ಬಗ್ಗೆ ಕೂಲಿಕಾರರಿಗೆ ಅರುಣ್ ಕುಮಾರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿಯ ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧು, ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಕೂಲಿಕಾರರು ಹಾಜರಿದ್ದರು.

10ಕೆಆರ್ ಎಂಎನ್ 2.ಜೆಪಿಜಿ

ಕನಕಪುರ ತಾಲೂಕಿನ ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚನಹಳ್ಳಿ ಗ್ರಾಮದ ನಾಗಸಂದ್ರ ಕೆರೆ ಹೂಳು ತೆಗೆಯುವ ಕಾಮಗಾರಿಯ ಸ್ಥಳದಲ್ಲಿ ನೊಂದಾಯಿತ ಉದ್ಯೋಗ ಚೀಟಿದಾರರ ಆರೋಗ್ಯ ತಪಾಸಣೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಯಾರ ಅನುಮತಿ ಬೇಕಿಲ್ಲ:ಜಿಗಜಿಣಗಿ
ಜಗತ್ತಿನಲ್ಲಿ ಪ್ರತಿ ವಸ್ತು ಧರ್ಮದ ತಳಹದಿ ಮೇಲೆ ನಿಂತಿದೆ: ಗವಿಸಿದ್ದೇಶ್ವರ ಶ್ರೀ