ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈಗ ಒಳ ಮೀಸಲಾತಿ ಬೇಕಾಗಿಲ್ಲ. ಹಳೆಯ ಮೀಸಲಾತಿ ಮುಂದುವರಿಸುವಂತೆ ರಾಜ್ಯಾದ್ಯಂತ ಕೂಗು ಬರುತ್ತಿದೆ. ಒಳಮೀಸಲಾತಿಯ ಬಿ ಮತ್ತು ಸಿ ಗುಂಪಿನ ವರ್ಗದಲ್ಲಿರುವ ಸಮುದಾಯದವರು ಒಳ ಮೀಸಲಾತಿ ರದ್ಧತಿಗೆ ಆಗ್ರಹಿಸುತ್ತಿವೆ. ಸರ್ಕಾರವು ಅದೇ ತೀರ್ಮಾನ ತೆಗೆದುಕೊಂಡಿದೆ. ಆದರೆ ಮಂತ್ರಿಗಳಾದ ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ ಪತ್ರಿಕಾ ಹೇಳಿಕೆಗಳಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ಅದರಲ್ಲಿ ಒಳಮೀಸಲಾತಿ ಮಾಡುತ್ತೇನೆಂದು ಹೇಳುತ್ತಿದ್ದಾರೆ. ಅದರಲ್ಲಿ ಒಳಮೀಸಲಾತಿ ಮಾಡಲು ಅವಕಾಶವೇ ಇಲ್ಲ. ಒಂದು ವೇಳೆ ಸರ್ಕಾರ ಒತ್ತಡಕ್ಕೆ ಮಣಿದು ಶೇ.15ರಲ್ಲಿ ಒಳ ಮೀಸಲಾತಿ ಮಾಡಿದರೆ ರಾಜ್ಯಾದ್ಯಂತ ಒಳಮೀಸಲಾತಿಯ ಬಿ ಮತ್ತು ಸಿ ಗುಂಪಿನ ಸಮುದಾಯಗಳ ಉಗ್ರ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಮೀಸಲಾತಿ ಮಾಡುವ ಸಂದರ್ಭದಲ್ಲಿ ಮಾಡಿರುವ ಬಿಂದುಗಳು ಒಳಮೀಸಲಾತಿಗೆ ಅನ್ವಯಿಸುವುದಿಲ್ಲ. 100 ಬಿಂದುಗಳಿಗೆ ಶೇ.15ರಷ್ಟು ಎಸ್ಸಿಗೆ, ಶೇ.3ರಷ್ಟು ಎಸ್ಟಿ, ಶೇ 32ರಷ್ಟು ಓಬಿಸಿ ಸಮುದಾಯಕ್ಕಿತ್ತು.1 ಬಿಂದು ಎಸ್ಸಿ ಸಮುದಾಯಕ್ಕೆ ನೀಡಿದರು. 1991ರಲ್ಲಿ 9 ಬಿಂದುಗೆ ಹಾಕಿದರು. ಆಗಲು ನಾವು ತಕರಾರು ಮಾಡಿಲ್ಲ. ಏಕೆಂದರೆ ಎಲ್ಲರಿಗೂ ಸಮನವಾಗಿ ಹಂಚಿಕೆಯಾಗಲಿ ಎಂದು ಒಳಮೀಸಲಾತಿ ಮಾಡಿ ಎಬಿಸಿ ವರ್ಗೀಕರಣ ಮಾಡಿದರೆ ಅದು ನಮಗೆ ಅನ್ವಯಿಸಲ್ಲ. ಆದರಿಂದ ಅನ್ಯಾಯವಾಗಿದೆ. ಪರಿಶಿಷ್ಟ ಜಾತಿಯ ಎ ವರ್ಗಕ್ಕೆ ಒಂದು ಉದ್ಯೋಗ ಕೊಟ್ಟಾಗ ಎರಡನೆಯದು ಎಸ್‌ಟಿಗೆ ಬರುತ್ತದೆ. ನಂತರ ಕೆಟಗರಿ 1, 2. ಆನಂತರ ಸಾಮಾನ್ಯ ವರ್ಗ ಬರುತ್ತದೆ. 9ನೆಯದು ನಮಗೆ ಬಂದಾಗ ಬಲಗೈ ಸಮುದಾಯ ಎಲ್ಲ ಸಮುದಾಯಗಳಿಂತ ಉನ್ನತ ಸಮುದಾಯವಾದಂತೆ ಆಗುತ್ತದೆ. ಇದರಿಂದ ನಮಗೆ ಅನ್ಯಾಯ ಆಗುತ್ತದೆ ಎಂದರು.
ಈಗಿನ ಒಳಮೀಸಲಾತಿಯಿಂದ ಉದ್ಯೋಗ, ಶಿಕ್ಷಣದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಬೆಂಗಳೂರು ಬಿಬಿಎಂಪಿ ಹಾಗೂ ಧಾರವಾಡ ವಿಶ್ವವಿದ್ಯಾಲಯ ನೇರ ನೇಮಕಾತಿಯಲ್ಲಿ ಎಲ್ಲ ಹುದ್ದೆಗಳು ಒಳಮೀಸಲಾತಿಯ ಎ ಗುಂಪಿಗೆ ಸಿಕ್ಕಿದ್ದು, ಬಿ ಮತ್ತು ಸಿ ಗುಂಪಿನ ಸಮುದಾಯಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ಹಳೆ ಮೀಸಲಾತಿಯನ್ನು ಮುಂದುವರಿಸಿ ಪರಿಶಿಷ್ಟ ಜಾತಿಯ 101 ಸಮದಾಯಗಳಿಗೂ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ನಲ್ಲೂರು ಸೋಮೇಶ್ವರ, ನಗರಸಭಾ ಮಾಜಿ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ಮುಖಂಡರಾದ ನಾಗಯ್ಯ, ಸೋಮಣ್ಣ, ಗೋವಿಂದರಾಜು, ನಲ್ಲೂರು ಮಹಾದೇವಸ್ವಾಮಿ, ಜನಾರ್ದನ ಹಾಜರಿದ್ದರು.---
28ಸಿಎಚ್ಎನ್4ಬಲಗೈ ಸಮಯದಾಯಗಳ ಒಕ್ಕೂಟ ಹಾಗೂ ಚಾಮರಾಜನಗರ ಆದಿ ಕರ್ನಾಟಕ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಮಾತನಾಡಿದರು.