ಕನ್ನಡ ಪ್ರಭ ವಾರ್ತೆ, ಬೀರೂರು
ಬೀರೂರು ಪಟ್ಟಣದ ಪತ್ರ. ಕೆ. ಶಿವಪ್ಪಯ್ಯ, ಸಾರ್ವಜನಿಕ ಆಸ್ಪತ್ರೆಯಲ್ಲಿ ಕಡೂರು ಐಎಂಎ, ಬೆಂಗಳೂರಿನ ಇನ್ಫೋಸಿಸ್ ಪ್ರತಿಷ್ಠಾನ ರೋಟರಿ ಕ್ಲಬ್ ಆಫ್ ಮದ್ರಾಸ್, ಮೌಲ್ಯ, ಟ್ರಸ್ಟ್ ಹಾಗೂ ಬೀರೂರು ಇನ್ನರ್ ವ್ಹೀಲ್ ಕ್ಲಬ್ ಸಹಯೋಗದಲ್ಲಿ ನಡೆದ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಉಚಿತ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಆರೋಗ್ಯ, ಬಲಪಡಿಸುವ ಜೊತೆಗೆ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆ ಇದಾಗಿದೆ. ವಿಶ್ವದಾದ್ಯಂತ ಗರ್ಭಕಂಠ ಕ್ಯಾನ್ಸರ್‌ನಿಂದ ಅನೇಕ ಮಹಿಳೆಯರು ಬಳಲುತ್ತಿದ್ದು, ಸರಾಸರಿ ಪ್ರತಿ 8 ನಿಮಿಷಕ್ಕೊಬ್ಬ ಮಹಿಳೆ ಸಾವನ್ನಪ್ಪುತ್ತಿರುವುದು ಆತಂಕಕಾರಿ. ರೋಗ ಬಂದ ನಂತರ ಚಿಕಿತ್ಸೆಗೆ ಒಳಗಾಗುವುದಕ್ಕಿಂತ ಮುಂಚಿತ ಮುನ್ನೆಚ್ಚರಿಕೆ ಅಗತ್ಯ ಎಂದು ಹೇಳಿದರು.ಮಹಿಳೆಯರು ದೈನಂದಿನ ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರುತ್ತಾರೆ. ಜಾಗೃತಿ ಅಭಿಯಾನದ ಭಾಗವಾಗಿ ಇನ್ನರ್ ವೀಲ್ ನಿಂದ ಹೆಣ್ಣುಮಕ್ಕಳಿಗೆ ಉಚಿತ ಲಸಿಕೆ ನೀಡುವ ಕಾರ್ಯ ಕೈಗೊಂಡಿದ್ದೇವೆ. ಇಂದು 300 ಮಂದಿಗೆ ಲಸಿಕೆ ನೀಡಲಾಗಿದ್ದು, ಮುಂದಿನ ವಾರ 300 ಲಸಿಕೆ ನೀಡುವ ಯೋಜನೆ ಇದೆ ಎಂದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರು ಮಾತನಾಡಿ, ಕ್ಯಾನ್ಸರ್ ಗೆ ಹಲವು ಕಾರಣಗಳಿದ್ದು, ಗರ್ಭಕಂಠ ಕ್ಯಾನ್ಸರ್ ಮುಖ್ಯವಾಗಿ ಎಚ್ ಪಿವಿ ವೈರಸ್ ಕಾರಣ. ಈ ಲಸಿಕೆ ಗರ್ಭಕಂಠ ಕ್ಯಾನ್ಸರ್ ಅಪಾಯವನ್ನು ಸುಮಾರು ಶೇ. 95ರಷ್ಟು ಕಡಿಮೆ ಮಾಡುತ್ತದೆ. ಲಸಿಕೆ ಪಡೆದ ನಂತರ ಸ್ವಲ್ಪ ಜ್ವರ ಕಾಣಿಸಿಕೊಳ್ಳುವುದು ಸಹಜ, ಭಯಪಡಬೇಕಿಲ್ಲ ಎಂದರು.ಸಭೆಯಲ್ಲಿ ಸವಿತಾ ಜಗದೀಶ್, ವೈದ್ಯ ಛಾಯಾಪತಿ, ಪ್ರಸೂತಿ ತಜ್ಞ ಜ್ಯೋತಿ, ಆಯುರ್ವೇದ ವೈದ್ಯ, ಗವಿರಂಗಪ್ಪ, ದಂತ ವೈದ್ಯ ಪ್ರವೀಣ್, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಭಾಗ್ಯ ನಾರಾಯಣ್, ಉಪಾಧ್ಯಕ್ಷೆ ಅರುಣಾ ರವಿ, ಪದಾಧಿಕಾರಿಗಳಾದ ಉಷಾ ಸ್ಮಾಮಿ, ಜ್ಯೋತಿ ದತ್ತ್, ನಳಿನಾ ನಾಗರಾಜ್, ಕೃಷ್ಣವೇಣಿ, ನೀತು ವಸಂತ್ ಭಾಗವಹಿಸಿದ್ದರು.