ಸಂಘಟನೆಗಳಲ್ಲಿ ಆಡಳಿತಾತ್ಮಕ, ಆರ್ಥಿಕ ಶಿಸ್ತು ಮುಖ್ಯ- ಷಡಾಕ್ಷರಿ

KannadaprabhaNewsNetwork |  
Published : Sep 07, 2025, 01:00 AM IST
ಕಾರ್ಯಕ್ರಮ ಪೂರ್ವದಲ್ಲಿ ರಾಜ್ಯಾಧ್ಯಕ್ಷರನ್ನು ಪೂರ್ಣಕುಂಭದೊಂದಿಗೆ ವೇದಿಕೆ ಕರೆ ತರಲಾಯಿತು.  | Kannada Prabha

ಸಾರಾಂಶ

ಸಂಘಟನೆಯಲ್ಲಿ ಆಡಳಿತಾತ್ಮಕ ಶಿಸ್ತು, ಆರ್ಥಿಕ ಶಿಸ್ತು ಅತೀ ಮುಖ್ಯವಾಗಿದೆ. ಸಂಘಟನೆಗಳನ್ನು ಪ್ರತಿಯೊಬ್ಬರು ತಮ್ಮ ಸ್ವಂತ ಮನೆಯಂತೆ ಬೆಳೆಸಬೇಕು ಅಂದಾಗ ಮಾತ್ರ ಸಂಘಟನೆ ಬೆಳೆಯಲು, ಉಳಿಯಲು ಸಾಧ್ಯವಿದೆ. ಸಂಘಟನೆಯು ಶಕ್ತಿಯುತವಾಗಿ ಇದ್ದಾಗ ಮಾತ್ರ ನಮ್ಮ ನೌಕರರು ನಿರ್ಭಿತಿಯಿಂದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ನೌಕರ ಸಂಘದ ರಾಜಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ಗದಗ: ಸಂಘಟನೆಯಲ್ಲಿ ಆಡಳಿತಾತ್ಮಕ ಶಿಸ್ತು, ಆರ್ಥಿಕ ಶಿಸ್ತು ಅತೀ ಮುಖ್ಯವಾಗಿದೆ. ಸಂಘಟನೆಗಳನ್ನು ಪ್ರತಿಯೊಬ್ಬರು ತಮ್ಮ ಸ್ವಂತ ಮನೆಯಂತೆ ಬೆಳೆಸಬೇಕು ಅಂದಾಗ ಮಾತ್ರ ಸಂಘಟನೆ ಬೆಳೆಯಲು, ಉಳಿಯಲು ಸಾಧ್ಯವಿದೆ. ಸಂಘಟನೆಯು ಶಕ್ತಿಯುತವಾಗಿ ಇದ್ದಾಗ ಮಾತ್ರ ನಮ್ಮ ನೌಕರರು ನಿರ್ಭಿತಿಯಿಂದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ನೌಕರ ಸಂಘದ ರಾಜಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ಶನಿವಾರ ಇಲ್ಲಿ ಸರ್ಕಾರಿ ನೌಕರ ಸಂಘದ ನೂತನ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕತತ್ಪರತೆ, ಸೇವಾ ಮನೋಭಾವ ಇದ್ದವರು ಮಾತ್ರ ನಾಯಕರಾಗಲು ಸಾಧ್ಯ. ಸಂಘಟನೆಗಳಲ್ಲಿ ಇರುವವರು ಮತ್ತು ಸಂಘಟನೆಗಳಿಗೆ ಬರುವವರು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೇವಲ ಅಧ್ಯಕ್ಷರು ಪದಾಧಿಕಾರಿಗಳಿಂದ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ರಾಜ್ಯದಲ್ಲಿರುವ 6 ಲಕ್ಷಕ್ಕೂ ಅಧಿಕ ಸಂಖ್ಯೆಯ ಸರ್ಕಾರಿ ನೌಕರರೇ ನಮ್ಮ ಸಂಘದ ಜೀವಾಳ. ಕಡಿಮೆ ನೌಕರರು ಹೆಚ್ಚಿನ ಕೆಲಸವನ್ನು ಮಾಡಬೇಕು ಎಂದು ಸರ್ಕಾರಗಳು ನಿರೀಕ್ಷಿಸುತ್ತಿವೆ. ನೌಕರರು ಒತ್ತಡದಿಂದ ಹೊರಬಂದು ಉತ್ತಮ ಸೇವೆ ನೀಡಬೇಕಾಗಿದೆ. ಈ ಹಿನ್ನೆಲೆ ನೂತನ ಅಧ್ಯಕ್ಷ ಬಸವರಾಜ ಬಳ್ಳಾರಿ, ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದ ಅವರು, ಸಂಘಟನೆ ನಡೆದುಕೊಂಡು ಬಂದ ಹಾದಿ ತಮ್ಮ ಅಧಿಕಾರಾವಧಿಯಲ್ಲಿ ಅವರು ಮಾಡಿದ ಕೆಲಸ ಕಾರ್ಯಗಳು, ನೌಕರರು ಆರೋಗ್ಯ ಮತ್ತು ಕುಟುಂಬಕ್ಕೆ ನೀಡಬೇಕಾದ ಸಮಯ ಹೀಗೆ ಹಲವಾರು ವಿಷಯಗಳ ಕುರಿತು ಸುದೀರ್ಘವಾಗಿ ಮಾತನಾಡಿದರು.

ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸರ್ಕಾರಿ ನೌಕರರು ತಮ್ಮ ಬೇಡಿಕೆಗಳನ್ನು ಪಡೆಯಲು ಸರ್ಕಾರಿ ನೌಕರ ಸಂಘ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ. 7ನೇ ವೇತನ ಜಾರಿ, ಓಪಿಎಸ್ ಮರು ಜಾರಿ, ಕೇಂದ್ರ ಮಾದರಿ ವೇತನ ಶ್ರೇಣಿ ಜಾರಿ ಅವರ ಗುರಿಯಾಗಿದ್ದವು. ಇವುಗಳಲ್ಲಿ 7ನೇ ವೇತನ ಜಾರಿಯಾಗಿದೆ. ಇನ್ನೆರಡು ಬೇಡಿಕೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಷಡಾಕ್ಷರಿ ಅವರು ಶ್ರಮಿಸಲಿ, ಇದರೊಟ್ಟಿಗೆ ಸರ್ಕಾರದಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳ ಭರ್ತಿ ಆಗಬೇಕಿದೆ. ಆ ನಿಟ್ಟಿನಲ್ಲಿ ಕೂಡಾ ರಾಜ್ಯಾಧ್ಯಕ್ಷರು ಸರ್ಕಾರದ ಮೇಲೆ ಒತ್ತಡ ತರಲಿ ಎಂದರು.

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನೂತನ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಅವರು ಕೆಲಸ ಮಾಡಬೇಕು. ಅಧ್ಯಕ್ಷ ಮತ್ತು ಪದಾಧಿಕಾರಿಗಳು ನೌಕರರ ಪ್ರೀತಿ ಮತ್ತು ವಿಶ್ವಾಸ ಗಳಿಸಿಕೊಳ್ಳಬೇಕು. ರಾಜ್ಯದಲ್ಲಿ ಹಲವು ಸರ್ಕಾರಿ ವಿಭಾಗೀಯ ಸಂಘಟನೆಗಳಿವೆ. ಅದಕ್ಕೆಲ್ಲ ಹಿರಿಯಣ್ಣನಾಗಿ ಸರ್ಕಾರಿ ನೌಕರ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಅಭಿನವ ಮೃತ್ಯುಂಜಯ ಶ್ರೀಗಳು ಆಶೀರ್ವಚನ ನೀಡಿದರು. ನೂತನ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ನೌಕರರ ಸಂಘದ ರಾಜ್ಯ ಘಟಕದ ವಿವಿಧ ಪದಾಧಿಕಾರಿಗಳಾದ ಗಿರಿಗೌಡ ಎಚ್., ಬಸವರಾಜ ಎಸ್., ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಶಡಶ್ಯಾಳ, ರವಿ ಗುಂಜೀಕರ, ಮೋಹನ ಕುಮಾರ, ಎಸ್. ಎಫ್. ಸಿದ್ದನಗೌಡರ, ಬಿ.ಎ. ಕುಂಬಾರ, ಪ್ರೇಮನಾಥ ಗರಗ, ಮಲ್ಲೇಶ ಕರಿಗಾರ, ಬಿ.ಎಫ್. ಪೂಜಾರ, ನಂದಾ ಎಚ್., ಪ್ರಹ್ಲಾದ ಗೆಜ್ಜಿ, ವಿ.ಎಂ. ಹಿರೇಮಠ, ಡಿ.ಟಿ. ವಾಲ್ಮೀಕಿ ಮುಂತಾದವರು ಹಾಜರಿದ್ದರು. ವಿವಿಧ ಕಾಲೇಜು ಮತ್ತು ಕಲಾ ತಂಡದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬಾಹುಬಲಿ ಜೈನರ ನಿರೂಪಿಸಿದರು. ಡಿ.ಎಫ್‌.ತಳವಾರ ಸ್ವಾಗತಿಸಿದರು. ಬಸವರಾಜ ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕರು ಸೇವೆ ಸೇರಿದ ನಂತರ ಐದು ವರ್ಷಕ್ಕೊಮ್ಮೆ ಮತ್ತೆ ಪರೀಕ್ಷೆ ಎದುರಿಸಿ ಸೇವೆಗೆ ಸೇರಬೇಕು ಎಂಬ ನಿಯಮ ಜಾರಿ ತರುವ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಮಾಡಿದೆ. ಇದು ಸುಧಾರಣೆ ಭಾಗ ಅಲ್ಲ. ಶಿಕ್ಷಕರಿಗೆ ಇದರಿಂದ ತೊಂದರೆ ಆಗುತ್ತದೆ. ಬದಲಾಗಿ ಶಿಕ್ಷಕರ ಕೌಶಲ್ಯ ಹೆಚ್ಚಾಗಲು ಸರ್ಕಾರದಿಂದ ತರಬೇತಿ, ಕಾರ್ಯಾಗಾರ ನಡೆಸಬೇಕು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಸರ್ಕಾರಕ್ಕೆ ಸಲಹೆ ನೀಡಿದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ