ಸವಣೂರು: ಸ್ಪರ್ಧಾತ್ಮಕ ಯುಗಕ್ಕೆ ಹೊಂದುವಂತಹ ಜ್ಞಾನ ಪಡೆದು ಇರುವ ಅವಕಾಶಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಶಿವಶಂಕರ್ ಕೆ.ಹೇಳಿದರು.
ಪದವಿ ಹಂತ ಅತ್ಯಂತ ಮಹತ್ವದ್ದಾಗಿದೆ, ಈ ಹಂತದಲ್ಲಿ ಹೆಚ್ಚಿನ ಜ್ಞಾನ ಹೊಂದುವುದು ಅವಶ್ಯಕ. ಇದಕ್ಕಾಗಿ ವಿದ್ಯಾ ಕಾಶಿಯ ಕರಿಯ ಅಕಾಡೆಮಿಯ ಸಹಭಾಗಿತ್ವದಲ್ಲಿ ಕೀರ್ತಿ ಪದವಿ ಮಹಾ ವಿದ್ಯಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪ್ಲಾನ್‌ಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು.
ವಿದ್ಯಾಕಾಶಿ ಕರಿಯರ್ ಅಕಾಡೆಮಿಯ ಉಪನ್ಯಾಸಕ ದೊರೆಪ್ಪ ಭಾಗಣ್ಣವರ್ ಸ್ಪರ್ಧಾತ್ಮಕ ಯುಗದ ಕುರಿತು ವಿಶೇಷ ಉಪನ್ಯಾಸ ನೀಡಿದರು.ಬಾಗಲಕೋಟೆಯ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಸಬಿಹಾಬಾನು ಮಾತನಾಡಿದರು.
ಈ ಸಂದರ್ಭದಲ್ಲಿ ಶಂಕರಗೌಡ ಪೊಲೀಸಗೌಡ್ರ, ಶಿವಾನಂದ ಮ್ಯಾಗೇರಿ, ಡಾ. ರಾಣಿ ತುರ್ಲಾಪುರ, ಫಕ್ಕಿರಗೌಡ ಪೊಲೀಸಗೌಡ್ರ, ಚೈತ್ರಾ ಪೊಲೀಸಗೌಡ್ರ, ಗಂಗಣ್ಣ ಸಾತಣ್ಣವರ, ನೇತ್ರಾ ಪೊಲೀಸಗೌಡ್ರು ಪಾಲ್ಗೊಂಡಿದ್ದರು.
ಉಪನ್ಯಾಸಕ ಐ.ಕೆ.ಕಲ್ಮನಿ, ಎ.ಎಚ್.ಬರಡಿ, ಆರ್.ವಿ. ದ್ಯಾಮನಗೌಡ್ರ, ಶಿಲ್ಪಾ ಕೂಡಲ, ಗೀತಾ ಕೂಡಲ, ಸುನೀತಾ ಹರಿಜನ, ಸರಸ್ವತಿ ಮುಗಳಿ, ನಿರ್ಮಲಾ ಲಮಾಣಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರಾಚಾರ್ಯ ಮಾಲತೇಶ ದಾನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯ ಹಣಗಿ ನಿರೂಪಿಸಿ ಮಾಲತೇಶ ಬರಡಿ ವಂದಿಸಿದರು.