ಆಡಳಿತಾಧಿಕಾರಿ ಅವ್ಯವಹಾರ ಲೋಕಾ ತನಿಖೆಗೆ

KannadaprabhaNewsNetwork |  
Published : Oct 09, 2024, 01:40 AM IST
೮ಕೆಎಲ್‌ಆರ್-೧೦ಕೋಲಾರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ನಡೆಯಿತು. ಶಾಸಕ ಕೊತ್ತೂರು ಮಂಜುನಾಥ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಇದ್ದರು. | Kannada Prabha

ಸಾರಾಂಶ

ವಾರ್ಡ್‌ಗಳಲ್ಲಿ ಏನು ನಡೆದಿದೆ ಅಂತ ವಾರ್ಡ್‌ ಸದಸ್ಯರಿಗೆ ಮಾಹಿತಿ ನೀಡುತ್ತಿರಲಿಲ್ಲ. ಆದರೂ ವಾರ್ಡ್‌ಗೆ ಸಂಬಂಧಿಸಿದಂತೆ ಬಿಲ್ ಪಾವತಿಯಾಗಿದೆ ಇದಕ್ಕೆ ಯಾರು ಹೊಣೆ ಇದನ್ನು ಹಿಗೇ ಬಿಟ್ಟರೆ ಮುಂದೆ ಇಂತಹ ಅಕ್ರಮ ಬಿಲ್ ಗಳು ಹೆಚ್ಚಾಗುತ್ತದೆ ಇದಕ್ಕೆ ಕಡಿವಾಣ ಹಾಕಲು ತನಿಖೆ ನಡೆಸಿ

ಕನ್ನಡಪ್ರಭ ವಾರ್ತೆ ಕೋಲಾರನಗರಸಭೆಯ ನೂತನ ಸಮಿತಿ ಆಯ್ಕೆಗೂ ಮೊದಲು ಆಡಳಿತಾಧಿಕಾರಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಗರದಲ್ಲಿ ನಡೆದಿರುವ ಕಾಮಗಾರಿಗಳು ಮತ್ತು ಬಿಲ್‌ಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖೆ ನಡೆಸಲು ಲೋಕಾಯುಕ್ತಗೆ ದೂರು ನೀಡಲು ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ನಿರ್ಧರಿಸಲಾಯಿತು.ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಏನು ನಡೆದಿದೆ ಅಂತ ವಾರ್ಡ್‌ ಸದಸ್ಯರಿಗೆ ಮಾಹಿತಿ ನೀಡುತ್ತಿರಲಿಲ್ಲ. ಆದರೂ ವಾರ್ಡ್‌ಗೆ ಸಂಬಂಧಿಸಿದಂತೆ ಬಿಲ್ ಪಾವತಿಯಾಗಿದೆ ಇದಕ್ಕೆ ಯಾರು ಹೊಣೆ ಇದನ್ನು ಹಿಗೇ ಬಿಟ್ಟರೆ ಮುಂದೆ ಇಂತಹ ಅಕ್ರಮ ಬಿಲ್ ಗಳು ಹೆಚ್ಚಾಗುತ್ತದೆ ಇದಕ್ಕೆ ಕಡಿವಾಣ ಹಾಕಬೇಕಾದರೆ ಲೋಕಾಯುಕ್ತ ಸಂಸ್ಥೆಯಿಂದ ತನಿಖೆಯಾಗಲೇ ಬೇಕು ಮುಂದೆ ಯಾವುದೇ ಕಾರಣಕ್ಕೂ ಅಧ್ಯಕ್ಷರು ಪರಿಶೀಲನೆ ನಡೆಯದೆ ಬಿಲ್ ಪಾವತಿ ಮಾಡಬಾರದು ಎಂದು ತೀರ್ಮಾನಿಸಲಾಯಿತು.ಅಧಿಕಾರಿಗಳೇನೂ ಸುಪ್ರೀಂ ಅಲ್ಲ

ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ನಗರಸಭೆ ಅಧಿಕಾರಿಗಳು ಎಂದರೆ ನೀವು ಏನು ಅಂದುಕೊಂಡಿದ್ದರಾ, ನೀವೇನೇ ಸುಪ್ರೀಂ ಅನ್ನೊದನ್ನು ಬಿಡಿ ನೀವು ಕುದುರೆ ಅಲ್ಲ ಬರೀ ಬಾಲ ಅಷ್ಟೇ. ಸಾರ್ವಜನಿಕರು ಕೆಲಸವಾಗಿಲ್ಲ ಎಂದರೆ ಯಾರೂ ಅಧಿಕಾರಿಗಳ ಮನೆ ಬಾಗಿಲು ತಟ್ಟಲ್ಲ. ನಗರಸಭೆ ಸದಸ್ಯರ ಮನೆ ಬಾಗಿಲು ತಟ್ಟುತ್ತಾರೆ, ಅಧಿಕಾರಿಗಳು ನಗರಸಭೆ ಕಚೇರಿಯೊಳಗೆ ಕುಳಿತುಕೊಂಡು ಬಿಲ್‌ಗಳು ಮಾಡಿಕೊಂಡು ಇದ್ದುಬಿಡಿ ಎಂದರು. ಗ್ಯಾಸ್ ಪೈಪ್ ಲೈನ್ ಒಪ್ಪಂದ

ನಗರಕ್ಕೆ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಸಂಬಂಧ ತಮಿಳುನಾಡಿನ ಏಜೆನ್ಸಿಯವರು ಬಂದಿದ್ದರು. ನೆಲ ಅಗೆಯುವಾಗ ಕೇಬಲ್ ಅಥವಾ ಪೈಪ್‌ಗೆ ಧಕ್ಕೆಯಾದರೆ ತಾವೇ ಸರಿಪಡಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಹೇಳಿದ್ದೇನೆ. ಚರ್ಚೆ ಹಂತದಲ್ಲಿದ್ದು, ನಗರಸಭೆ ಸದಸ್ಯರ ಜೊತೆ ಚರ್ಚೆ ಮಾಡಬೇಕು. ಒಪ್ಪಂದ ಇಲ್ಲದಿದ್ದರೆ ಕೊಡಲ್ಲ ಎಂದು ಈಗಾಗಲೇ ಅವರಿಗೆ ಹೇಳಲಾಗಿದೆ ಎಂದರು.ಸದಸ್ಯ ಪ್ರವೀಣ್ ಗೌಡ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಎಷ್ಟು ನಿವೇಶನಗಳು ಇವೆ ಹೊರಗಡೆ ಪ್ರದೇಶದ ಎಷ್ಟು ಜಮೀನು ನಗರಸಭೆಗೆ ಮಂಜೂರು ಆಗಿದೆ ಮಾಹಿತಿ ಕೊಡಿ ಖಾದ್ರಿಪುರದಲ್ಲಿ ಎರಡು ಸರ್ವೇ ನಂಬರ್‌ಗಳಲ್ಲಿ ನಗರಸಭೆಯ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಕೊಡಲಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಸ್ವಚ್ಛ ಭಾರತ್‌ನಲ್ಲಿ ಅವ್ಯವಹಾರ

ಸದಸ್ಯ ಸುರೇಶ್ ಬಾಬು ಮಾತನಾಡಿ, ಸ್ವಚ್ಛ ಭಾರತ್ ಮಿಷನ್ ೧-೦ ನಲ್ಲಿ ಕೋಟ್ಯಾಂತರ ರುಪಾಯಿ ಅವ್ಯವಹಾರ ನಡೆದಿದ್ದು ಎಲ್ಲಾ ವಸ್ತುಗಳನ್ನು ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಬೆಲೆಗೆ ಖರೀದಿಸಿದ್ದಾರೆ. ಅಲ್ಲದೆ ಮಹಿಳಾ ಸಮಾಜಕ್ಕೆ ನೀಡಿದ ಜಾಗ ೫೦ ಕೋಟಿ ಬೆಲೆಬಾಳುತ್ತದೆ. ಅದನ್ನು ವಶಕ್ಕೆ ಪಡೆದರೆ ನಗರಸಭೆಗೆ ಆದಾಯ ಬರುತ್ತದೆ ೧೭ನೇ ವಾರ್ಡ್ ನಲ್ಲಿರುವ ಉದ್ಯಾನದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಥಳ ಪರಿಶೀಲಿಸಲು ಸೂಚನೆ

ಇದಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ಕೂಡಲೇ ಅಧಿಕಾರಿಗಳು ಭೇಟಿ ನೀಡಿ ದಾಖಲೆ ಕೇಳಿ ಅಕ್ರಮವಾಗಿ ಕಟ್ಟಿರುವುದು ಗೊತ್ತಾಗುತ್ತದೆ ಕೂಡಲೇ ವಶಕ್ಕೆ ಪಡೆಯಿರಿ ಕಟ್ಟಡ ತೆರವುಗೊಳಿಸಿ ಹೀಗೆ ಉಳಿದ ವಾರ್ಡ್ ಗಳಲ್ಲೂ ಪರಿಶೀಲನೆ ಮಾಡಿ ಎಂದು ಸೂಚಿಸಿದರು.

ಸಭೆಯ ಅಧ್ಯಕ್ಷತೆಯನ್ನು ಲಕ್ಷ್ಮಿದೇವಮ್ಮ ರಮೇಶ್ ವಹಿಸಿದ್ದರು ಉಪಾಧ್ಯಕ್ಷೆ ಸಂಗೀತಾ ತಹಶಿಲ್ದಾರ್ ನಯನಾ, ನಗರಸಭೆ ಪ್ರಭಾರಿ ಆಯುಕ್ತೆ ಅಂಬಿಕಾ, ಕುಡಾ ಅಧ್ಯಕ್ಷ ಮೊಹಮ್ಮದ್ ಹನೀಫ್, ಎಂಜಿನಿಯರ್ ಶ್ರೀನಿವಾಸ್ ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ