ಚೌಡಯ್ಯನವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ಅಜಯಸಿಂಗ್‌

KannadaprabhaNewsNetwork |  
Published : Jan 22, 2024, 02:18 AM IST
ಜೇವರ್ಗಿ: ಪಟ್ಟಣದ ಮಿನಿ ವಿಧಾನ ಸೌಧದ ಆವರಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಭಾನುವಾರ ಆಯೋಜಿಸಿದ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತೋತ್ಸವ ಕಾರ್ಯಕ್ರಮವನ್ನು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಉದ್ಘಾಟಿಸಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಸಂಗಣ್ಣ ಇಟಗಾ, ತಹಸೀಲ್ದಾರ ಮಲ್ಲಣ್ಣ ಯಲಗೋಡ, ಡಾ.ಸರ್ದಾರ ರಾಯಪ್ಪ ಇದ್ದರು. | Kannada Prabha

ಸಾರಾಂಶ

ಜೇವರ್ಗಿ ಪಟ್ಟಣದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಸುಂದರವಾದ ಅಂಬಿಗರ ಚೌಡಯ್ಯನವರ ಭವನ ನಿರ್ಮಾಣಮಾಡಲಾಗಿದ್ದು, ಅದರ ಸೌಂದರ್ಯಿಕರಣಕ್ಕೆ ಇನ್ನು ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಮತ್ತು ಮುಂದಿನ ಮಾರ್ಚ್ ತಿಂಗಳ ಒಳಗಾಗಿ ಮತ್ತೆ ₹50 ಲಕ್ಷ ಅನುದಾನ ಬಿಡುಗಡೆ ಮಾಡುತ್ತೇನೆ. ಒಂದು ಕೋಟಿಯಲ್ಲಿ ಭವನ ನಿರ್ಮಿಸಿದ್ದು, ಮತ್ತೆ ಒಂದು ಕೋಟಿ ರು. ಭವನದ ಅಭಿವೃದ್ದಿಗಾಗಿ ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ಡಾ. ಅಜಯಸಿಂಗ್‌ ಭರವಸೆ

ಕನ್ನಡಪ್ರಭ ವಾರ್ತೆ ಜೇವರ್ಗಿ

ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಪ್ರತಿಯೊಬ್ಬರು ದಿನನಿತ್ಯ ಪಠಣ ಮಾಡಬೇಕು ಚೌಡಯ್ಯನವರು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೆಕೆಆರಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯಸಿಂಗ್‌ ಹೇಳಿದರು.

ಅವರು ಭಾನುವಾರ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಿಜಶರಣ ಅಂಬಿಗರ ಚೌಡಯ್ಯನವರು ಶ್ರೇಷ್ಠವಾದ ವಚನಗಳನ್ನು ರಚ್ಚಿಸಿದ್ದು, ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದು, ಅವರ ಆಚಾರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜೇವರ್ಗಿ ಪಟ್ಟಣದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಸುಂದರವಾದ ಅಂಬಿಗರ ಚೌಡಯ್ಯನವರ ಭವನ ನಿರ್ಮಾಣಮಾಡಲಾಗಿದ್ದು, ಅದರ ಸೌಂದರ್ಯಿಕರಣಕ್ಕೆ ಇನ್ನು ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಮತ್ತು ಮುಂದಿನ ಮಾರ್ಚ್ ತಿಂಗಳ ಒಳಗಾಗಿ ಮತ್ತೆ ₹50 ಲಕ್ಷ ಅನುದಾನ ಬಿಡುಗಡೆ ಮಾಡುತ್ತೇನೆ. ಒಂದು ಕೋಟಿಯಲ್ಲಿ ಭವನ ನಿರ್ಮಿಸಿದ್ದು, ಮತ್ತೆ ಒಂದು ಕೋಟಿ ರು. ಭವನದ ಅಭಿವೃದ್ದಿಗಾಗಿ ಬಿಡುಗಡೆ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಉಪನ್ಯಾಸಕ ಡಾ.ಸರ್ದಾರ ರಾಯಪ್ಪ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ ಮಲ್ಲಣ್ಣ ಯಲಗೋಡ, ಸ್ವಾಗತ ಸಮಿತಿ ಅಧ್ಯಕ್ಷ ಸಂಗಣ್ಣ ಇಟಗಾ, ರೇವಣಿಸಿದ್ದಪ್ಪಗೌಡ ಕಮಾನಮನಿ, ಮಾಜಿ ಜಿಪಂ ಸದಸ್ಯ ಶಾಂತಪ್ಪ ಕೂಡಲಗಿ, ಕಾಶಿರಾಯಗೌಡ ಯಲಗೊಡ, ವಿಜಯಕುಮಾರ ಹಿರೇಮಠ, ವಸಂತ ನರಿಬೋಳ, ಮನೋಹರ ಕಾಮನಕೇರಿ, ದತ್ತು ನಾಯ್ಕೋಡಿ ಇಟಗಾ, ಶಿವಶರಣಪ್ಪ ಜಂಬೆರಾಳ, ಸಂತೋಷ ಜೈನಾಪೂರ, ರಾಜು ತಳವಾರ, ಮರೆಪ್ಪ ಕೋಳಕೂರ, ಬಸವರಾಜ ತಳವಾರ, ಭಾಗೇಶ ಹೊತಿನಮಡು, ದೇವಿಂದ್ರ ಮುತ್ತಕೊಡ, ಗುಡುಲಾಲ ಶೇಕ, ಡಾ.ಸಿದ್ದು ಪಾಟೀಲ, ಪುರಸಭೆ ಮುಖ್ಯಧಿಕಾರಿ ಶಂಭುಲಿಂಗ ದೇಸಾಯಿ ಸೇರಿದಂತೆ ಕೋಲಿ ಸಮಾಜದ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು. ಅಮೃತ ಮಾಲಿ ಪಾಟೀಲ ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ