ಗಾಂಧೀಜಿ ಮೌಲ್ಯ ಅಳವಡಿಸಿ: ಸ್ಟೆಲ್ಲಾ ವರ್ಗೀಸ್

KannadaprabhaNewsNetwork |  
Published : Oct 05, 2026, 02:45 AM IST
ಫೋಟೋ: ಗಾಂಧಿ ಜಯಂತಿ ಪುತ್ತೂರು ಗಾಂಧೀ ಕಟ್ಟೆಯಲ್ಲಿ ಗಾಂಧೀ ಜಯಂತಿ ಆಚರಿಸಲಾಯಿತು.  | Kannada Prabha

ಸಾರಾಂಶ

ಗಾಂಧೀಜಿ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ತಿಳಿಸಿದರು.

ಪುತ್ತೂರು : ಗಾಂಧೀಜಿ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ತಿಳಿಸಿದರು.

ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧೀ ಕಟ್ಟೆ ಸಮಿತಿ, ತುಳು ಕೂಟ ಹಾಗೂ ತುಳು ಅಪ್ಪೆಕೂಟ ಇದರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಪುತ್ತೂರಿನ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಗಾಂಧೀ ಕಟ್ಟೆಯಲ್ಲಿ ನಡೆದ ಗಾಂಧೀ ಜಯಂತಿ ಆಚರಣೆಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹಾರಾರ್ಪಣೆ ಮಾಡಿ ಬಳಿಕ ಸಂಸ್ಮರಣಾ ದೀಪ ಪ್ರಜ್ವಲನೆ ಮಾಡಿ ಮಾತನಾಡಿದರು.

ಗಾಂಧೀ ನೆನಪು ಉಪನ್ಯಾಸ ನೀಡಿದ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ ಮಹಾತ್ಮ ಗಾಂಧೀಜಿ ೧೮೩೪ರಲ್ಲಿ ಪುತ್ತೂರಿಗೆ ಆಗಮಿಸಿ ಇದೇ ಗಾಂಧೀ ಕಟ್ಟೆ ಬಳಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ. ಆ ಮಹಾನ್ ಚೇತನ ಬಂದು ಕುಳಿತಿರುವ ಈ ಸ್ಥಳದಲ್ಲಿ ಅವರ ನೆನಪು ಶಾಶ್ವತವಾಗಿ ಉಳಿಯುವಂತಾಗಬೇಕು ಎಂದರು.

ಡಿವೈಎಸ್‌ಪಿ ಪ್ರಮೋದ್ ಕುಮಾರ್ ಮಾತನಾಡಿ ಸ್ವಚ್ಚತೆಯ ಇಂದಿನ ಸವಾಲಾಗಿದೆ. ನಗರದ ಸ್ವಚ್ಚತೆ ಕಾಪಾಡುವುದು ಕೇವಲ ಸ್ಥಳೀಯ ಆಡಳಿತ, ಪೌರಕಾರ್ಮಿಕರ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬ ಸಾರ್ವಜನಿಕರ ಜವಾಬ್ದಾರಿಯಾಗಿದೆ. ಎಂದು ಹೇಳಿದರು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಎಸ್.ಬಿ ಕೂಡಲಗಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರ ಸಭಾ ಪೌರಾಯುಕ್ತೆ ವಿದ್ಯಾ ಎಂ ಕಾಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್, ರೋಟರಿ ಕ್ಲಬ್‌ಗಳ ಸಹಾಯಕ ಗವರ್ನರ್ ಎ. ಜಗಜ್ಜೀವನ್‌ದಾಸ್ ರೈ ಮಾತನಾಡಿದರು.

ಪುತ್ತೂರಿನ ಎಂಟು ರೋಟರಿ ಕ್ಲಬ್‌ಗಳ ನೇತೃತ್ವದಲ್ಲಿ ಸ್ವಚ್ಛ ಭಾರತ, ಸುಂದರ ಭಾರತ, ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಉದ್ದೇಶದಲ್ಲಿ ಜನರಲ್ಲಿ ಸ್ವಚ್ಚತೆಯ ಜಾಗೃತಿ ಮೂಡಿಸುವ ಸ್ವಚ್ಚತಾ ಜಾಥಾ ನಡೆಯಿತು. ದರ್ಬೆ ಹಾಗೂ ಬೊಳುವಾರು ವೃತ್ತದ ಬಳಿಯಿಂದ ಏಕಕಾಲದಲ್ಲಿ ಹೊರಟ ಸ್ವಚ್ಚತಾ ಜಾಥಾವು ಗಾಂಧೀಕಟ್ಟೆಯ ಬಳಿ ಸಮಾಪನಗೊಂಡಿತು. ಗಾಂಧೀಕಟ್ಟೆಯಲ್ಲಿ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಗಾಂಧೀ ಭಜನೆ ನಡೆಯಿತು.ಸರಕಾರಿ ಸಹಾಯಕ ಅಭಿಯೋಜಕ ಜನಾರ್ದನ್, ಅಗ್ನಿಶಾಮಕ ಇಲಾಖೆಯ ಶಂಕರ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯಸುಬ್ರಹ್ಮಣ್ಯ, ಕೆಎಸ್ಸಾರ್ಟಿಸಿ ನಿಯಂತ್ರಣಾಧಿಕಾರಿ ಸುಬ್ರಹ್ಮಣ್ಯ ಪ್ರಸಾದ್, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಗಾಂಧೀಕಟ್ಟೆ ಸಮಿತಿಯ ಸಯ್ಯದ್ ಕಮಾಲ್, ಅಬ್ದುಲ್ ರಹಿಮಾನ್ ಯೂನಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಗೂ ನಾಗಕರೀಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗಾಂಧೀ ಜಯಂತಿಯ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಲಾದ ಪ್ರಬಂಧ ಸ್ಪರ್ಧೆಯ ವಿಜೇಯರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಗಾಂಧೀಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ತುಳು ಅಪ್ಪೆಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ವಂದಿಸಿದರು. ಉಪನ್ಯಾಸಕ ಡಾ.ರಾಜೇಶ್ ಬೆಜ್ಜಂಗಳ ನಿರೂಪಿಸಿದರು.

ಗಾಂಧೀ ಕಟ್ಟೆ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಗಾಂಧಿ ಪೀಠ ಸ್ಥಾಪನೆ, ಗಾಂಧೀಕಟ್ಟೆಯಿಂದ ಬಸ್ ನಿಲ್ದಾಣಕ್ಕೆ ಮೆಟ್ಟಿಲು ನಿರ್ಮಿಸಿ ಅದಕ್ಕೆ ಪಥ ನಾಮಕರಣ ಮಾಡುವುದು, ಗಾಂಧೀ ಪ್ಲೈ ಓವರ್, ಗಾಂಧೀಕಟ್ಟೆಯಲ್ಲಿ ಪ್ರತಿದಿನ ಗಾಂಧೀ ಜ್ಯೋತಿ ಬೆಳಗುವುದು. ಪುಸ್ತಕ ಮೊದಲಾದವುಗಳ ಪ್ರದರ್ಶನ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಇದರ ಜೊತೆಗೆ ಪುತ್ತೂರಿನ ಅಭಿವೃದ್ಧಿಗೆ ಕೊಡುಗೆ ನೀಡಿದವರಿಗೆ ಪ್ರತೀ ವರ್ಷ ಗಾಂಧೀ ಪ್ರಶಸ್ತಿ ನೀಡುವ ಯೋಜನೆಯಿದ್ದು ತಾಲೂಕು ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಗೊಳಿಸುವಲ್ಲಿ ಸಫಲರಾದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಈ ವರ್ಷದ ಗಾಂಧೀ ಪ್ರಶಸ್ತಿ ನೀಡುವುದಾಗಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

-ಕೃಷ್ಣಪ್ರಸಾದ್ ಆಳ್ವ, ಸಂಚಾಲಕರು ಗಾಂಧೀಕಟ್ಟೆ ಸಮಿತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ ಆಕ್ಷೇಪಣೆಯಲ್ಲಿ ನಕಲಿ ಮರಣ ಪ್ರಮಾಣಪತ್ರ ಸಲ್ಲಿಕೆ
ಯುವಕರಲ್ಲಿ ನಾಯಕತ್ವ ಬೆಳೆಸಲು ಯುವ ಸಂಘ ಯೋಜನೆ