ಮೂಲ್ಕಿ : ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸ್ವಚ್ಚತೆಗೆ ಮಹತ್ವ ನೀಡುತ್ತಿದ್ದು, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ಸ್ವಚ್ಚತೆ ಮೂಲಕ ರಾಷ್ಟ್ರವ್ಯಾಪ್ತಿ ಗಮನ ಸೆಳೆಯಲೆಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಹೇಳಿದರು.
ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ ನಮ್ಮ ಪರಿಸರವನ್ನು ಸ್ವಚ್ಚವಾಗಿಡುವುದು ನಮ್ಮ ಜವಾಬ್ದಾರಿಯೆಂದು ಹೇಳಿದರು. ಕಿನ್ನಿಗೋಳಿ ವಸಂತ ಮಂಟಪದಿಂದ ಕಟೀಲು ದೇವಳದವರೆಗೆ ಜಾಥ ನಡೆದು ನಂತರ ಕಟೀಲು ದೇವಳದ ರಥಬೀದಿಯಲ್ಲಿ ಸಮಾರೋಪಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಕಟೀಲು ಕ್ಷೇತ್ರದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ ಮತ್ತು ಶ್ರಿ ಹರಿನಾರಾಯಣ ದಾಸ ಆಸ್ರಣ್ಣ ಭಾಗವಹಿಸಿದ್ದು ,ಸುಮಾರು 45 ಸಂಘ ಸಂಸ್ಥೆಗಳ 500 ಸದಸ್ಯರು ಜಾಥಾದಲ್ಲಿ ಭಾಗವಹಿಸಿದರು. ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಮಾತನಾಡಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತೆಯ ಬಗ್ಗೆ ಗಮನಹರಿಸುತ್ತಿದ್ದು, ಪ್ಲಾಸ್ಟಿಕ್ ನಿಷೇಧ ಮಾಡಿದ್ದು ಹಂತ ಹಂತವಾಗಿ ಸಂಪೂರ್ಣ ನಿಷೇಧ ಮಾಡುತ್ತಿದ್ದೇವೆ, ತ್ಯಾಜ್ಯ ವಿಂಗಡನೆಗಾಗಿ ಎಂ.ಆರ್.ಎಫ್ ಘಟಕ ಕಾರ್ಯಾರಂಭವಾಗುತ್ತಿದೆಯೆಂದು ಹೇಳಿದರು.