ಭಗವತಿ ಮಹಿಳಾ ಸಮಾಜ ವಾರ್ಷಿಕ ಮಹಾಸಭೆ

KannadaprabhaNewsNetwork |  
Published : Oct 05, 2026, 02:45 AM IST
ಹಳೆ ತಾಲೂಕಿನ ಭಗವತಿ ಮಹಿಳಾ ಸಮಾಜದ 2025 -26ರ ಸಾಲಿನ ವಾರ್ಷಿಕಮಹಾಸಭೆಯ ಅಧ್ಯಕ್ಷತೆಯನ್ನು ಬೊಪ್ಪಂಡ ಬೋಳ್ಳಮ್ಮನಾಣಯ್ಯ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಹಳೆ ತಾಲೂಕಿನ ಭಗವತಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಭಗವತಿ ಮಹಿಳಾ ಸಮಾಜದ 2025 -26ರ ಸಾಲಿನ ವಾರ್ಷಿಕ ಮಹಾಸಭೆ

ನಾಪೋಕ್ಲು: ಸಂಘದ ಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿ ಕಾಣುತ್ತಿದೆ ಎಂದು ಭಗವತಿ ಮಹಿಳಾ ಸಮಾಜದ ಅಧ್ಯಕ್ಷಿ ಬೊಪ್ಪಂಡ ಬೋಳ್ಳಮ್ಮ ನಾಣಯ್ಯ ಹೇಳಿದರು.

ಹಳೆ ತಾಲೂಕಿನ ಭಗವತಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಭಗವತಿ ಮಹಿಳಾ ಸಮಾಜದ 2025 -26ರ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಪೋಕ್ಲು ಮಹಿಳಾ ಸಮಾಜದ ಅಧ್ಯಕ್ಷ ಬಿದ್ದಾಟoಡ ಮೇರಿ ಚಿಟ್ಟಿಯಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು. ಉಪಾಧ್ಯಕ್ಷೆ ನಾಟೋಳಂಡ ಕಸ್ತೂರಿ, ಕಾರ್ಯದರ್ಶಿ ಬೊಪ್ಪಂಡ ಸ್ವಾತಿ ವಿರನ್, ಸಹಕಾರಿ ಕಾರ್ಯದರ್ಶಿ ಶಿವಚಾಳಿಯಂಡ ರೋಹಿಣಿ, ನಿರ್ದೇಶಕರಾದ ಶಿವಚಾಳಿಯಂಡ ಪಾರ್ವತಿ ಬೆಳ್ಳಿಯಪ್ಪ, ಶಿವಚಾಳಿಯಂಡ ದೇವಕಿ, ಶಿವಚಾಳಿಯಂಡ ಭೋಜಮ್ಮ ರಾಣಿ, ಚೀಯಕಪೂವಂಡ ಮುತ್ತುರಾಣಿ, ಬೊಪ್ಪಂದ ಯಶೋದಾ, ಪೊರುಕುವಂಡ, ಭಾಗ್ಯವತಿ (ಕಾಂತಿ), ಅರೆಯಡ ಸರಸು, ನೂರಂಬಾಡ ಗಾಯತ್ರಿ, ಕಲ್ಲೇಂಗಡ ಪವಿತ್ರ, ಅಜ್ಜೆಟಿರ ರಾಣಿ ಪಳಂಗಪ್ಪ ಮತ್ತಿತರರಿದ್ದರು.ಅರೆಯಡ ಸರಸು ಪ್ರಾರ್ಥಿಸಿದರು. ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಬೊಪ್ಪಂಡ ಸ್ವಾತಿ ವಿರನ್ ಕಳೆದ ಸಾರಿನ ವರದಿ ಮಂಡಿಸಿ. ಪ್ರಸಕ್ತ ವರ್ಷದ ಆಡಳಿತ ಮಂಡಳಿ ವರದಿಯನ್ನು ಸಹಕಾರ್ಯದರ್ಶಿ ಶಿವಚಾಳಿಯಂಡ ರೋಹಿಣಿ ವಾಚಿಸಿದರು. ಲೆಕ್ಕಪರಿಶೋಧನಾ ವರದಿಯನ್ನು ನಿರ್ದೇಶಕಿ ಕಲ್ಲೆಂಗಡ ಪವಿತ್ರ ವಾಚಿಸಿದರು. ನಿರ್ದೇಶಕಿ ಪೊರ್ಕೊಂಡ ಕಾಂತಿ ನಿರೂಪಿಸಿದರು. ಉಪಾಧ್ಯಕ್ಷರಾದ ನಾಟೋಳಂಡ ಕಸ್ತೂರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ ಆಕ್ಷೇಪಣೆಯಲ್ಲಿ ನಕಲಿ ಮರಣ ಪ್ರಮಾಣಪತ್ರ ಸಲ್ಲಿಕೆ
ಯುವಕರಲ್ಲಿ ನಾಯಕತ್ವ ಬೆಳೆಸಲು ಯುವ ಸಂಘ ಯೋಜನೆ