ಹಿರೇಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ

KannadaprabhaNewsNetwork |  
Published : Oct 05, 2026, 02:45 AM IST
02ಸುತ್ತುಪೌಳಿ | Kannada Prabha

ಸಾರಾಂಶ

ಇಲ್ಲಿನ ಹಿರೇಬೆಟ್ಟು ಗ್ರಾಮದ ಭಟ್ರಕೋಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕೈಗೆತ್ತಿಕೊಳ್ಳಲಾಗಿರುವ ಸುತ್ತುಪೌಳಿ ಕಾಮಗಾರಿಯ ಶಿಲಾ ಮುಹೂರ್ತ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಉಡುಪಿ: ಇಲ್ಲಿನ ಹಿರೇಬೆಟ್ಟು ಗ್ರಾಮದ ಭಟ್ರಕೋಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕೈಗೆತ್ತಿಕೊಳ್ಳಲಾಗಿರುವ ಸುತ್ತುಪೌಳಿ ಕಾಮಗಾರಿಯ ಶಿಲಾ ಮುಹೂರ್ತ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.ಕ್ಷೇತ್ರದ ತಂತ್ರಿವರ್ಯರಾದ ಡಾ. ಸತ್ಯಕೃಷ್ಣ ಭಟ್ ಮಂಗಳೂರು ನೇತೃತ್ವದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ನೆರವೇರಿದವು. ಧನುರ್ ಲಗ್ನದ ಸುಮುಹೂರ್ತದಲ್ಲಿ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ ನೆರವೇರಿಸಲಾಯಿತು.

ಇದೇ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಯೋಜಿತ ವಿನ್ಯಾಸ ಹಾಗೂ ನಿರ್ಮಾಣದ ಸ್ವರೂಪವನ್ನು ಪರಿಚಯಿಸುವ ವಾಕ್‌ಥ್ರೂ ವೀಡಿಯೊವನ್ನು ಡಾ. ಸತ್ಯಕೃಷ್ಣ ಭಟ್ ಅವರು ಅನಾವರಣಗೊಳಿಸಿದರು. ಬಳಿಕ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಭ್ರಮರಾಂಬಿಕಾ ಮಹಿಳಾ ಭಜನಾ ಮಂಡಳಿ, ಕಬ್ಯಾಡಿ ಹಾಗೂ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಪರ್ಕಳ ಇವರಿಂದ ಭಜನಾ ಸೇವೆ ನಡೆಯಿತು.

ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ವಿ. ನಾಯಕ್, ಖಜಾಂಚಿ ಚಂದ್ರಶೇಖರ ನಾಯಕ್ ಹಾಗೂ ಸಮಿತಿಯ ಪ್ರಮುಖರಾದ ಜಯಪ್ರಕಾಶ್ ನಾಯಕ್, ಗುರುದಾಸ್ ಭಂಡಾರಿ, ಸೀತಾರಂ ಭಟ್, ಉಮೇಶ್ ಭಟ್, ದಿನೇಶ್ ಪ್ರಭು, ನಾರಾಯಣ ಪೂಜಾರಿ, ಉಮೇಶ್ ನಾಯಕ್, ವಸಂತರಾಯ ಪ್ರಭು, ಶೈಲೇಶ್, ಅಶೋಕ್ ನಾಯಕ್, ರಾಜೇಶ್ ಭಟ್, ಕಾಳಿದಾಸ ಭಂಡಾರಿ, ಶಂಕರ್ ನಾಯಕ್, ಶ್ರೀಧರ್ ನಾಯ್ಕ್, ಸುರೇಶ್ ನಾಯ್ಕ್, ಲಕ್ಷ್ಮೀಶ್ ಭಟ್, ಸುಧಾಕರ್ ಆಚಾರ್ಯ, ಶಾಮ್ ನಾಯ್ಕ್, ಗಣಪತಿ ಕಾಮತ್, ಕೃಷ್ಣ ನಾಯ್ಕ್, ಶ್ರೀಪತಿ ಭಟ್, ಕೇಶವ ಭಂಡಾರಿ, ಹರೀಶ್ ಶೆಟ್ಟಿ, ಶರತ್ ಹೆಗ್ಡೆ, ಮುರಳಿಧರ್ ಲಾಗ್ವಾಕರ್, ಸುಧಾಕರ್ ಲಾಗ್ವಾಕರ್, ಅಶೋಕ್ ಲಾಗ್ವಾಕರ್, ಮಣಿಕಂಠ ಭಟ್, ಶ್ರೀಧರ್ ಭಟ್, ಬಾಲಕೃಷ್ಣ ಭಟ್, ವಿಕ್ರಂ ಭಟ್, ಸುಧೀರ್ ಪೂಜಾರಿ ಹಾಗೂ ಮಹೇಶ್ ಪುತ್ರನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ ಆಕ್ಷೇಪಣೆಯಲ್ಲಿ ನಕಲಿ ಮರಣ ಪ್ರಮಾಣಪತ್ರ ಸಲ್ಲಿಕೆ
ಯುವಕರಲ್ಲಿ ನಾಯಕತ್ವ ಬೆಳೆಸಲು ಯುವ ಸಂಘ ಯೋಜನೆ